For Quick Alerts
  ALLOW NOTIFICATIONS  
  For Daily Alerts

  'ಉಗ್ರಾವತಾರ'ಕ್ಕಾಗಿ ಮತ್ತೆ ಬಂದ 'ಟಿಣಿಂಗ ಮಿಣಿಂಗ ಟಿಶ್ಯಾ' ಸಹೋದರಿಯರು

  |

  ದುನಿಯಾ ವಿಜಯ್, ನಟಿಸಿ, ನಿರ್ದೇಶನ ಮಾಡಿದ್ದ 'ಸಲಗ' ಸಿನಿಮಾದ 'ಟಿಣಿಂಗ ಮಿಣಿಂಗ ಟಿಶ್ಯಾ' ಹಾಡು ಸೂಪರ್ ಹಿಟ್ ಆಗಿತ್ತು. ಆ ಹಾಡನ್ನು ಸಿದ್ದಿ ಸಹೋದರಿಯರು ಹಾಡಿದ್ದರು, ನರ್ತಿಸಿದ್ದರು ಸಹ.

  ಆದರೆ ಸಿನಿಮಾದಲ್ಲಿ ಆ ಹಾಡಿನ ವಿಡಿಯೋವನ್ನು ಬಳಸಿಕೊಳ್ಳದೇ ಇದ್ದಿದ್ದು ಹಾಗೂ ಹಾಡನ್ನು ಪೂರ್ತಿಯಾಗಿ ಬಳಸಿಕೊಳ್ಳದೇ ಇದ್ದುದರ ಬಗ್ಗೆ ಕೆಲವು ಅಪಸ್ವರಗಳು ಎದ್ದಿದ್ದವು.

  ಇದೀಗ ಸಿದ್ದಿ ಸಹೋದರಿಯರಾದ ಗೀತಾ ಸಿದ್ದಿ ಹಾಗೂ ಗಿರಿಜಾ ಸಿದ್ದಿ ಮರಳಿ ಬಂದಿದ್ದಾರೆ. ಈ ಬಾರಿ ಅವರು ಪ್ರಿಯಾಂಕಾ ಉಪೇಂದ್ರ ನಟನೆಯ 'ಉಗ್ರಾವತಾರ' ಸಿನಿಮಾಕ್ಕಾಗಿ ವಿಶೇಷ ಹಾಡೊಂದನ್ನು ಹಾಡಿದ್ದಾರೆ.

  'ಉಗ್ರಾವತಾರ' ಸಿನಿಮಾಕ್ಕಾಗಿ ಈ ಸಹೋದರಿಯರು ಬಸೋಬಿ ಸಾಹಿತ್ಯದ ಕೊಂಕಣಿ ಭಾಷೆಯ ಹಾಡೊಂದನ್ನು ಹಾಡಿದ್ದಾರೆ. 'ಅಯ್ಯೋ ಮಾಜೋದೇವ, ಅಯ್ಯಯ್ಯೋ ಮಾಜೋದೇವ' ಎಂಬ ಈ ಹಾಡು ಗೀಗಿ ಮಾದರಿಯಲ್ಲಿದೆ. ಹಾಡಿನ ವಿಡಿಯೋ ಈಗಾಗಲೇ ವೈರಲ್ ಆಗಿದೆ.

  'ಉಗ್ರಾವತಾರ' ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ಇಂಟ್ರೊಡಕ್ಷನ್ ಹಾಡು ಇದಾಗಿರಲಿದೆ ಎನ್ನಲಾಗುತ್ತಿದೆ. ಸಿದ್ದಿ ಸಹೋದರಿಯರು ಹಾಡು ಹಾಡಿರುವುದಲ್ಲದೆ, ಹಾಡಿನ ವಿಡಿಯೋದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಹಾಡಿನ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. 'ಉಗ್ರಾವತಾರ' ಸಿನಿಮಾವನ್ನು ಗುರುಮೂರ್ತಿ ನಿರ್ದೇಶಿಸುತ್ತಿದ್ದಾರೆ.

  'ಉಗ್ರಾವತಾರ' ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಜೊತೆಗೆ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಇನ್ನೂ ಹಲವರಿದ್ದಾರೆ. ನಂದಕುಮಾರ್ ಛಾಯಾಗ್ರಹಣ, ಕಿನ್ನಾಳ್‌ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋಧ್-ಮಾಸ್‌ಮಾದ-ಅಶೋಕ್ ಸಾಹಸ, ವೆಂಕಿ. ಯುಡಿವಿ ಸಂಕಲನ ಮಾಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ​ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

  Siddi Sisters Sang Song For Ugravathara Kannada Movie

  ಸಿದ್ದಿ ಸಹೋದರಿಯರು 'ಸಲಗ' ಸಿನಿಮಾದ 'ಟಿಣಿಂಗ ಮಿಣಿಂಗ ಟಿಶ್ಯ' ಹಾಡಿನಿಂದ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇಬ್ಬರು ಸಹೋದರಿಯರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಗ್ರಾಮದವರು. 'ಸಲಗ' ಸಿನಿಮಾದ ಹಾಡು ಹಿಟ್ ಆದಾಗ ಸಂದರ್ಶನ ನೀಡಿದ್ದ ಈ ಸಹೋದರಿಯರು, ''ನಾವು ಆಫ್ರಿಕನ್ನರಲ್ಲ, ನಾವು ಕನ್ನಡದವರು, ನಾವು ಸಿದ್ದಿ ಜನಾಂಗದವರು. ನಮ್ಮನ್ನು ಅನ್ಯರಂತೆ ಕಾಣಬೇಡಿ'' ಎಂದು ಮನವಿ ಮಾಡಿದ್ದರು. ಅಸಲಿಗೆ ಈ ಸಹೋದರಿಯರು ಸಾಧಕರು, ಚಿನ್ನದ ಹುಡುಗಿಯರು. ಪಿಎಚ್‌ಡಿ ಮುಗಿಸಿರುವ ಗೀತ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಿರಿಜಾ ಸಿದ್ಧಿ ಸಹ ರಂಗಭೂಮಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

  English summary
  Siddi Sister sand Song for Ugravathara Kannada movie. Priyanka Upendra is in lead role in Ugravathara movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion