twitter
    For Quick Alerts
    ALLOW NOTIFICATIONS  
    For Daily Alerts

    Breaking: ಕೋಲ್ಕತ್ತಾದಲ್ಲಿ ಲೈವ್ ಶೋನಲ್ಲೇ ಗಾಯಕ ಕೆಕೆ ದುರಂತ ಸಾವು

    |

    ಕೆಕೆ ಎಂದೇ ಜನಪ್ರಿಯವಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಗಾಯನ ಜೀವನ ಅಂತ್ಯಗೊಂಡಿದೆ. ಇಂದು ಕೋಲ್ಕತ್ತಾದ ನಜ್ರುಲ್ ಮಂಚ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಗಾಯಕ ಕೆಕೆ, ಸ್ಟೇಜ್ ಮೇಲೆ ಅಸುನೀಗಿರುವ ದುರಂತ ಘಟನೆ ನಡೆದಿದೆ. ಕೆಕೆ ನಿಧನಕ್ಕೆ ಸಂಗೀತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗಾಯನ ವೇದಿಕೆಯಲ್ಲೇ ಉಸಿರು ನಿಲ್ಲಿಸಿದ್ದನ್ನು ಅಭಿಮಾನಿಗಳು ಸ್ಮರಿಸಿ ಆಘಾತ ಸಂತಾಪ ವ್ಯಕ್ತಪಡಿಸಿದ್ದಾರೆ.

    ಕೋಲ್ಕತ್ತಾದ ವಿವೇಕಾನಂದ ಕಾಲೇಜಿನ ಕಾರ್ಯಕ್ರಮದ ಭಾಗವಾಗಿ ನಜ್ರುಲ್ ಮಂಚ್‌ನಲ್ಲಿ ಲೈವ್ ಸಂಗೀತ ಸಂಜೆಯಲ್ಲಿ ಕೆಕೆ ಪಾಲ್ಗೊಂಡಿದ್ದರು. ಗಾಯನದ ನಡುವೆ ಅಸ್ವಸ್ಥರಾಗಿ ಕುಸಿದ ಗಾಯಕ ಕೆಕೆರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

    Breaking: Singer KK passes away while performing at concert in Kolkata

    ಕೋಲ್ಕತ್ತಾದ ನಜ್ರುಲ್ ಮಂಚದಲ್ಲಿ ಲೈವ್ ಶೋ ನಡೆಯುತ್ತಿತ್ತು. ಅಲ್ಲಿಯೇ ಅಪಘಾತ ಸಂಭವಿಸಿದೆ. ಹಾಡಿನ ಕಾರ್ಯಕ್ರಮದ ವೇಳೆ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂಞತ್ ಅಲಿಯಾಸ್ ಕೆಕೆ ನಿಧನರಾಗಿದ್ದಾರೆ. ಇದು ಠಾಕೂರ್ಪುಕೂರ್ ವಿವೇಕಾನಂದ ಕಾಲೇಜು ಆಯೋಜಿಸಿದ್ದ ಉತ್ಸವವಾಗಿತ್ತು.

    ಠಾಕೂರ್ಪುಕೂರ್ ವಿವೇಕಾನಂದ ಕಾಲೇಜು ಆಯೋಜಿಸಿದ್ದ ಉತ್ಸವದಲ್ಲಿ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ನಿಧನರಾಗಿರುವ ಸುದ್ದಿ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಉಲ್ಟಾ ದಂಗಾ ಗುರುದಾಸ್ ಮಹಾವಿದ್ಯಾಲಯದ ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಕೆಕೆ ಅಸ್ವಸ್ಥರಾದರು ನಂತರ ಡೈಮಂಡ್ ಹಾರ್ಬರ್ ರಸ್ತೆ ಬಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮತ್ತು ಶೀಘ್ರದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

    Breaking: Singer KK passes away while performing at concert in Kolkata

    ಪಿಟಿಐ ವರದಿಗಳ ಪ್ರಕಾರ, ಕೆಕೆ ಅವರು ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ ತಮ್ಮ ಹೋಟೆಲ್ ತಲುಪಿದ ನಂತರವೇ ಅಸ್ವಸ್ಥರಾಗಿದ್ದರು, ಆದರೆ, ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಲೈವ್ ಶೋ ನಡೆಸಿಕೊಡಲು ತೆರಳಿದರು. ಸುಮಾರು ಒಂದು ಗಂಟೆಗಳ ಕಾಲ ಹಾಡಿ, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು ಎಂದು ಆಯೋಜಕರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಮಾತನಾಡಿ, ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದಿರುವುದು ದುರದೃಷ್ಟಕರ, ಅವರನ್ನು ಬದುಕಿಸುವ ಪ್ರಯತ್ನ ವಿಫಲವಾಯಿತು, ಪರಿಸ್ಥಿತಿ ಕೈ ಮೀರಿತ್ತು ಎಂದಿದ್ದಾರೆ.

    ಕನ್ನಡ ಸೇರಿದಂತೆ ಬೆಂಗಾಳಿ, ಹಿಂದಿ, ತಮಿಳು, ಮಲಯಾಳಂ, ಮರಾಠಿ, ಅಸ್ಸಾಮಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಕೆಕೆ ಹಾಡಿರುವ ಹಾಡುಗಳು ಜನಪ್ರಿಯತೆ ಗಳಿಸಿವೆ. ಕೆಕೆ ನಿಧನಕ್ಕೆ ಪ್ರಧಾನಿ ಮೋದಿ, ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ನಟ ಅಕ್ಷಯ್ ಕುಮಾರ್, ಗಾಯಕರಾದ ಅರ್ಮಾನ್ ಮಲೀಕ್, ಪಾಪೋನ್ ಸೇರಿದಂತೆ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

    "ಕೆಕೆ ಎಂದೇ ಹೆಸರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರ ಮನಸೂರೆಗೊಂಡಿದ್ದವು. ಅವರ ಹಾಡುಗಳ ಮೂಲಕ ನಾವು ಅವರನ್ನು ಯಾವಾಗಲೂ ನೆನಪಿಟ್ಟುಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಖಃ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    English summary
    Breaking: Singer Krishnakumar Kunnath, popularly known as KK, passes away post his performance at Nazrul Manch, Kolkata.
    Wednesday, June 1, 2022, 10:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X