»   » 'ಮಳೆ' ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ

'ಮಳೆ' ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ

Posted By:
Subscribe to Filmibeat Kannada

ಆರ್ ಚಂದ್ರು ನಿರ್ಮಾಣದ ಮಳೆ ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಚಿತ್ರತಂಡ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿತ್ತು.

ಇದೀಗ ಚಿತ್ರದ ಹಾಡುಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆ ವರ್ಣರಂಜಿತ ಕಾರ್ಯಕ್ರಮದಲ್ಲಿ 'ಮಳೆ' ಹಾಡುಗಳು ಲೋಕಾರ್ಪಣೆಗೊಂಡವು. ಸ್ಟೈಲಿಶ್ ಸ್ಟಾರ್ ಪ್ರೇಮ್ ಹಾಗೂ ಅಮೂಲ್ಯಾ ಅವರು ರ್‍ಯಾಂಪ್ ವಾಕ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದರು. [ಕಾಣದ ಕೈಗಳ ಚೆಲ್ಲಾಟಕ್ಕೆ 'ಮಳೆ' ಹಾಡುಗಳು ಬಲಿ]

Stylish Star Prem's Male audio released officially

ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾಗಿರುವ ಆರ್ ಚಂದ್ರು ಅವರು ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡರು. ತಾವು ನಡೆದುಬಂದ ಹಾದಿ ಹಾಗೂ ನಿರ್ದೇಶಕನಾಗಿ ಹೆಣಗಾಡಿದ ದಿನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ತಮಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ ನಿರ್ಮಾಪಕರನ್ನೂ ಆರ್ ಚಂದ್ರು ಸನ್ಮಾನಿಸಿದರು. ಸ್ಟೈಲಿಶ್ ಸ್ಟಾರ್ ಪ್ರೇಮ್ ಹಾಗೂ ಅಮೂಲ್ಯಾ ಜೋಡಿಯ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿವೆ. ಚಿತ್ರ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯನ್ನು ಆರ್ ಚಂದ್ರು ಅವರೇ ಹೊತ್ತಿದ್ದಾರೆ.

ಇದೊಂದು ಟ್ರಾವೆಲಿಂಗ್ ಸ್ಟೋರಿ. ನವಿರಾದ ಪ್ರೇಮಕಥೆಯನ್ನು ಒಳಗೊಂಡಿದ್ದು ಚಂದ್ರು ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ತೇಜಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ತೇಜಸ್ ಆತ್ಮೀಯ ಗೆಳೆಯನಾಗಿರುವ ಕಾರಣ ಅವರ ಹೆಗಲಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ ಚಂದ್ರು. (ಏಜೆನ್ಸೀಸ್)

English summary
Stylish Star Prem and Amoolya lead Kannada movie 'Male' audio released officially in Bengaluru. The movie directed by Tejas and music by Jassie Gift.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada