Just In
Don't Miss!
- Automobiles
ಕೈಗೆಟುಕುವ ದರದ ಕ್ವಿಡ್ ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ರೆನಾಲ್ಟ್
- Education
IBPS PO/MT Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯೂಟ್ಯೂಬ್‌ನಲ್ಲಿ ಪಾಕಿಸ್ತಾನಿ ಗಾಯಕನ ಹಾಡು: ರಾಜ್ ಠಾಕ್ರೆ ಕ್ಷಮೆ ಕೋರಿದ ಟಿ ಸೀರೀಸ್
ಪಾಕಿಸ್ತಾನದ ಕಲಾವಿದರ ಮೇಲೆ ನಿಷೇಧ ಹೇರಿದ್ದರ ನಡುವೆಯೂ ಪಾಕ್ ಗಾಯಕನಿಂದ ಹಾಡು ಹಾಡಿಸಿದ್ದ ಟಿ ಸೀರೀಸ್, ಅದನ್ನು ತನ್ನ ಯೂಟ್ಯೂಬ್ ಚಾನೆಲ್‌ನಿಂದ ಕಿತ್ತುಹಾಕಿ ಕ್ಷಮೆ ಕೋರಿದೆ.
ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಾಮ್ ಹಾಡಿದ್ದ 'ಕಿನ್ನ ಸೋನಾ' ಹಾಡನ್ನು ಎರಡು ದಿನಗಳ ಹಿಂದೆ ಟಿ ಸೀರೀಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿತ್ತು. ಇದರ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಸಿಡಿದೆದ್ದಿದ್ದರು.
ಮತ್ತೆ ಸಿಡಿದೆದ್ದ ಸೋನು ನಿಗಂ: ಟಿ-ಸೀರೀಸ್ ಕಂಪೆನಿ ಎಂ.ಡಿ.ಗೆ ಎಚ್ಚರಿಕೆ
ಎಫ್‌ಡಬ್ಲ್ಯೂಐಸಿಇ ಆಗ್ರಹದಂತೆ ಭಾರತೀಯ ಸಿನಿಮಾ ಮತ್ತು ಸಂಗೀತದ ಯಾವುದೇ ವಿಭಾಗದಲ್ಲಿ ಪಾಕಿಸ್ತಾನದ ಕಲಾವಿದರನ್ನು ಬಳಸಿಕೊಳ್ಳಬಾರದು. ಆದರೆ ಟಿ-ಸೀರೀಸ್ ಈ ಹಾಡನ್ನು ಹಾಡಿಸಿತ್ತು. ಒತ್ತಡಕ್ಕೆ ಮಣಿದ ಟಿ-ಸೀರೀಸ್ ಅತೀಫ್ ಅಸ್ಲಾಮ್ ಅವರ ಆವೃತ್ತಿಯ ಹಾಡನ್ನು ಯೂಟ್ಯೂಬ್ ಚಾನೆಲ್‌ನಿಂದ ಬುಧವಾರ ತೆಗೆದುಹಾಕಿದ್ದು, ರಾಜ್ ಠಾಕ್ರೆ ಅವರ ಕ್ಷಮೆ ಕೋರಿದೆ. ಮುಂದೆ ಓದಿ...

ಮರ್ಜಾವಾನ್ ಚಿತ್ರದ ಹಾಡು
2019ರಲ್ಲಿ ಬಿಡುಗಡೆಯಾಗಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಾರಾ ಸುತಾರಿಯಾ ಮುಖ್ಯಪಾತ್ರದಲ್ಲಿ ನಟನೆಯ 'ಮರ್ಜಾವಾನ್' ಚಿತ್ರದ 'ಕಿನ್ನ ಸೋನಾ' ಹಾಡನ್ನು ಜುಬಿನ್ ನೌತಿಯಾಲ್ ಮತ್ತು ಧ್ವನಿ ಭಾನುಶಾಲಿ ಹಾಡಿದ್ದರು.

ಪಾಕ್ ಗಾಯಕನ ಹಾಡು
ಆದರೆ ಇದೇ ಹಾಡನ್ನು ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಾಮ್ ತಮ್ಮದೇ ಶೈಲಿಯಲ್ಲಿ ಹಾಡಿದ್ದರು. ಇದನ್ನೂ ಟಿ-ಸೀರೀಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿತ್ತು. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ರಾಜಕೀಯ ಸಂಬಂಧ ಸರಿಯಿಲ್ಲದ ಕಾರಣ ಪಾಕ್ ಕಲಾವಿದರನ್ನು ಬಳಸಿಕೊಳ್ಳಬಾರದು ಎಂದು ಪಶ್ಚಿಮ ಭಾರತ ಸಿನಿ ಉದ್ಯೋಗಿಗಳ ಸಂಸ್ಥೆ (ಎಫ್‌ಡಬ್ಲ್ಯೂಐಸಿಇ) ಆಗ್ರಹಿಸಿದ್ದರೂ ಅವರಿಂದ ಹಾಡಿಸಿರುವುದು ಆಕ್ರೋಶಕ್ಕೆ ಒಳಗಾಗಿತ್ತು.

ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ
ಇದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಗಮನಕ್ಕೆ ಬಂದಿತ್ತು. ಎಂಎನ್‌ಎಸ್ ಸಿನಿಮಾ ವಿಭಾಗದ ಅಧ್ಯಕ್ಷ ಅಮೇಯ ಖೋಪ್ಕರ್, 'ಟಿ ಸೀರೀಸ್‌ಗೆ ಎಚ್ಚರಿಕೆ. ಪಾಕಿಸ್ತಾನದ ಗಾಯಕ ಅತೀಫ್ ಅಸ್ಲಾಮ್ ಹಾಡನ್ನು ನಿಮ್ಮ ಯೂಟ್ಯೂಬ್ ಚಾನೆಲ್‌ನಿಂದ ತಕ್ಷಣ ತೆಗೆದುಹಾಕಿ. ಇಲ್ಲದಿದ್ದರೆ ಟಿ ಸೀರೀಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಟ್ವೀಟ್ ಮಾಡಿದ್ದರು.

ಉದ್ಯೋಗಿ ಮಾಡಿರುವ ಪ್ರಮಾದ!
ಎಂಎನ್‌ಎಸ್‌ಗೆ ಕ್ಷಮಾಪಣೆ ಪತ್ರ ರವಾನಿಸಿರುವ ಟಿ ಸೀರೀಸ್, 'ನಮ್ಮ ಪ್ರಚಾರ ತಂಡ ಉದ್ಯೋಗಿಗಳಲ್ಲಿ ಒಬ್ಬರು ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡನ್ನು ಅಪ್‌ಲೋಡ್ ಮಾಡಿರುವುದು ಗಮನಕ್ಕೆ ಬಂದಿದೆ. ಅವರಿಗೆ ತಮ್ಮ ತಪ್ಪಿನ ಬಗ್ಗೆ ತಿಳಿದಿರಲಿಲ್ಲ. ಹಾಡು ಹಾಕಿ ತಪ್ಪು ಮಾಡಿದ್ದಾರೆ. ನಮ್ಮ ತಮ್ಮನ್ನು ಖಂಡಿಸುತ್ತೇವೆ ಮತ್ತು ಅದಕ್ಕೆ ಕ್ಷಮೆ ಕೋರುತ್ತೇವೆ.

ಪಾಕ್ ಕಲಾವಿದರ ಜತೆ ಕೆಲಸ ಮಾಡೊಲ್ಲ
ನಾವು ಟಿ ಸೀರೀಸ್‌ನ ಯಾವುದೇ ವೇದಿಕೆಯಲ್ಲಿ ಆ ಹಾಡನ್ನು ಬಿಡುಗಡೆ ಮಾಡುವುದಿಲ್ಲ ಮತ್ತು ಪ್ರಚಾರ ಮಾಡುವುದಿಲ್ಲ. ಯೂಟ್ಯೂಬ್ ಚಾನೆಲ್‌ನಿಂದ ಅದನ್ನು ಕಿತ್ತುಹಾಕುತ್ತಿದ್ದೇವೆ. ನಾವು ಇನ್ನು ಮುಂದೆ ಪಾಕಿಸ್ತಾನದ ಯಾವುದೇ ಕಲಾವಿದರ ಕೆಲಸಗಳನ್ನು ಬಿಡುಗಡೆ ಮಾಡುವುದಿಲ್ಲ ಅಥವಾ ಪ್ರಚಾರ ಮಾಡುವುದಿಲ್ಲ ಎಂದು ರಾಜ್ ಠಾಕ್ರೆ ಅವರಿಗೆ ಕಂಪೆನಿ ತಿಳಿಸಿದೆ.