Just In
Don't Miss!
- Finance
ದಾಖಲೆಯತ್ತ ಮುನ್ನುಗ್ಗುತ್ತಿರುವ ಬಿಟ್ಕಾಯಿನ್: ಏಪ್ರಿಲ್ 11ರ ಬೆಲೆ ಇಲ್ಲಿದೆ
- News
ದಿವ್ಯ ಸಪ್ತತಿ ಪೂರ್ತಿ ಮಹೋತ್ಸವ; ಶೃಂಗೇರಿಗೆ ಭಕ್ತರ ಭೇಟಿಗೆ ಅವಕಾಶವಿಲ್ಲ
- Sports
ಈ ವಿಶಿಷ್ಟ ದಾಖಲೆಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಧವನ್
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Automobiles
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಜರಂಗಿ-2 ಚಿತ್ರದಲ್ಲಿ ಹಾಡಿದ ತೆಲುಗು ಖ್ಯಾತ ಗಾಯಕ ಸಿದ್ ಶ್ರೀರಾಮ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಭಜರಂಗಿ 2 ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಮೇ ತಿಂಗಳಲ್ಲಿ ಶಿವಣ್ಣನ ಸಿನಿಮಾ ತೆರೆಗೆ ಬರಲಿದೆ.
ಇತ್ತೀಚಿಗಷ್ಟೆ ಭಜರಂಗಿ 2 ಸಿನಿಮಾ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು, ಬಹಳ ಅದ್ಭುತವಾಗಿ ಮೂಡಿ ಬಂದಿದೆ. 'ಭಜರೇ ಭಜರೇ ಭಜರಂಗಿ....' ಎಂಬ ಹಾಡು ಚಿತ್ರದ ಮೇಲಿದ್ದ ನಿರೀಕ್ಷೆ ಹೆಚ್ಚಿಸಿದೆ. ಇದೀಗ, ಭಜರಂಗಿ ಚಿತ್ರದ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಶಿವರಾಜ್ ಕುಮಾರ್ 125ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ
ವಿಶೇಷ ಅಂದ್ರೆ ಈ ಹಾಡನ್ನು ತೆಲುಗಿನ ಖ್ಯಾತ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಒಳ್ಳೆಯ ಹಾಡುಗಳನ್ನು ಹಾಡಿರುವ ಶ್ರೀರಾಮ್ ಮೊದಲ ಬಾರಿಗೆ ಕನ್ನಡದ ಸ್ಟಾರ್ ಹೀರೋ ಚಿತ್ರದಲ್ಲಿ ಹಾಡಿದ್ದಾರೆ. ಈ ಹಾಡು ಏಪ್ರಿಲ್ 9 ರಂದು ರಿಲೀಸ್ ಆಗುತ್ತಿದೆ.
ಇದಕ್ಕೂ ಮುಂಚೆ 'ಡಿಯರ್ ಕಾಮ್ರೆಡ್' ಕನ್ನಡ ವರ್ಷನ್ ಸಿನಿಮಾದಲ್ಲಿ ಒಂದು ಹಾಡು ಹಾಗೂ 'ಟಾಮ್ ಅಂಡ್ ಜೆರ್ರಿ' ಸಿನಿಮಾದ ಕನ್ನಡ ಹಾಡಿಗೆ ಧ್ವನಿಯಾಗಿದ್ದಾರೆ.
ಅಲ್ಲು ಅರ್ಜುನ್ ಅಭಿನಯಿಸಿದ್ದ 'ಅಲಾ ವೈಕುಂಠಪುರಂಲೋ' ಚಿತ್ರದಲ್ಲಿ 'ಸಾಮಜವರಗಮನ' ಹಾಡು ಹಾಡಿದ್ದು ಇದೇ ಗಾಯಕ.
ಗೀತಾ ಗೋವಿಂದಂ, ಟ್ಯಾಕ್ಸಿವಾಲಾ, 2.0, ಡಿಯರ್ ಕಾಮ್ರೆಡ್, ವಕೀಲ್ ಸಾಬ್, ರಂಗ್‌ದೇ, ತಮಿಳಿನಲ್ಲಿ ಮಾರ, ಸೈಕೋ, ಎನ್‌ಜಿಕೆ, ವಿಶ್ವಾಸಂ, ವಡಾ ಚೆನ್ನೈ, 2.0, ಮೆರ್ಸಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಿದ್ ಶ್ರೀರಾಮ್ ಹಾಡಿದ್ದಾರೆ.
ಇನ್ನುಳಿದಂತೆ ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನು ಜಯಣ್ಣ-ಬೋಗೇಂದ್ರ ನಿರ್ಮಿಸಿದ್ದಾರೆ. ಭಾವನಾ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.