Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Attack on Single Mangli Car : ಬಳ್ಳಾರಿ: ಗಾಯಕಿ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲು
ತೆಲುಗು ಮೂಲಕ ಗಾಯಕಿ ಮಂಗ್ಲಿ, ಕರ್ನಾಟಕದಲ್ಲಿಯೂ ಜನಪ್ರಿಯರು. ಕನ್ನಡದ ಕೆಲವು ಸಿನಿಮಾಗಳಿಗೆ ಹಾಡಿರುವ ಮಂಗ್ಲಿ, ಕರ್ನಾಟಕದಲ್ಲಿ ಹಲವು ಲೈವ್ ಕಾರ್ಯಕ್ರಮಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಬಳ್ಳಾರಿಯಲ್ಲಿ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ಭಾಗವಹಿಸಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟ ಮಂಗ್ಲಿಗೆ ನಿನ್ನೆ ತುಸು ಕಹಿ ಅನುಭವವಾಗಿದೆ.
ಶನಿವಾರ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ಭಾಗವಹಿಸಿದ್ದರು. ವೇದಿಕೆ ಮೇಲೆ ಹಾಡುಗಳನ್ನ ಹೇಳಿ ವಾಪಸ್ ತೆರಳುವಾಗ ಮಂಗ್ಲಿ ನೋಡಲು ಯುವಕರು ಮುಗಿಬಿದ್ದಿದ್ದರು. ಅಲ್ಲದೇ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್‌ಗೆ ನುಗ್ಗಿದ ಪುಂಡರನ್ನು ಕೂಡಲೇ ಪೋಲಿಸರು ಲಘು ಲಾಟಿ ಪ್ರಹಾರ ಮಾಡಿದರು. ಆ ವೇಳೆ ಮಂಗ್ಲಿ ಹೋಗುತ್ತಿದ್ದ ಕಾರಿಗೆ ಪುಂಡರು ಕಲ್ಲೆಸೆದಿದ್ದಾರೆ.

ಕನ್ನಡ ಮಾತಾಡಲು ನಿರಕರಿಸಿದ್ದ ಮಂಗ್ಲಿ
ಇತ್ತೀಚೆಗಷ್ಟೆ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿದ್ದ ಗಾಯಕಿ ಮಂಗ್ಲಿ, ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರು. ಅದೇ ಕಾರಣಕ್ಕೆ ಇದೀಗ ಮಂಗ್ಲಿ ಕಾರಿಗೆ ಕಲ್ಲೆಸೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಣ್ಣಾವ್ರ ಹಾಡಿನೊಂದಿಗೆ ರಸಮಂಜರಿ ಆರಂಭ
ಇನ್ನು ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಚೆನ್ನಾಗಿಯೇ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮೊದಲಿಗೆ ಡಾ. ರಾಜಕುಮಾರ್ ಅಭಿನಯದ ಆಕಸ್ಮಿಕ ಚಿತ್ರದ ಜನಪ್ರಿಯ ಗೀತೆಯಾದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುವ ಮೂಲಕ ಸಂಗೀತ ರಸಮಂಜರಿ ಆರಂಭಿಸಿದರು.

ಹಲವು ಹಿಟ್ ಹಾಡುಗಳನ್ನು ಹಾಡಿದರು
ಕಣ್ಣು ಹೊಡಿಯಾಕ ಮೊನ್ನೆ ಕಲತೇನಿ..., ಯಾವನೋ ಇವನು ಗಿಲ್ಲಕ್ಕೊ, ಏಳೇಳು ಬೆಟ್ಟ ದಾಟ್ಕೊಂಡು ಬಂದ ಶಿವ ಗಿಲ್ಲಕ್ಕೊ, ತೆಲುಗಿನ ಸಾರಗಂದ ದರಿಯಾ', 'ಊ ಅಂತಿಯಾ ಮಾವ ಊಹು ಅಂತಿಯಾ' 'ರಾಮಾ ರಾಮಾ', 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ', 'ರಾಮುಲೋ ರಾಮುಲೋ', 'ರಾ ರಾ ರಕ್ಕಮ್ಮ' ಹಾಡುಗಳನ್ನು ಹಾಡಿ ನೆರೆದ ಜನರು ಹುಚ್ಚೆದ್ದು ಕುಣಿದು ಕುಪ್ಪಳಿಸಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಅಪ್ಪುವನ್ನು ನೆನೆದ ಮಂಗ್ಲಿ
ನಟ ಪುನಿತ್ ರಾಜಕುಮಾರ್ ಅವರಿಗಾಗಿ ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡಿ ಸೇರಿದ ಜನಸ್ತೋಮದ ಮನ ರಂಜಿಸುವಲ್ಲಿ ಮಂಗ್ಲಿ ಯಶ ಕಂಡರು. ನಟನೊಬ್ಬ ಅಭಿಮಾನಿಗಳ ಹೃದಯ ಮಂದಿರದಲ್ಲಿ ನಿರಂತರ ಉಳಿದು ದೇವರಾಗಿ ಪೂಜಿಸಲ್ಪಡುತ್ತಿರುವುದು ನಿಜಕ್ಕು ಅಚ್ಚರಿ ವಿಷಯ ಎಂದು ಗಾಯಕಿ ಮಂಗ್ಲಿ ಹೇಳಿದರು.