»   » ಟಿಎನ್ನೆಸ್ ಅವರ ಕಾಫಿತೋಟದ ಸಾಹಿತ್ಯಕ್ಕೆ ಸಂಗೀತ ನೀಡಿ

ಟಿಎನ್ನೆಸ್ ಅವರ ಕಾಫಿತೋಟದ ಸಾಹಿತ್ಯಕ್ಕೆ ಸಂಗೀತ ನೀಡಿ

Posted By:
Subscribe to Filmibeat Kannada

ಟಿ.ಎನ್ ಸೀತಾರಾಮ್ ಅವರ ಹೊಚ್ಚ ಹೊಸ ಚ್ಚಿತ್ರ ಕಾಫಿತೋಟದ ಪ್ರೋಮೋಷನಲ್ ಗೀತೆಗೆ ಹೊಸ ಸಂಗೀತಗಾರ, ಹಾಡುಗಾರರನ್ನು ಹುಡುಕಲಾಗುತ್ತಿದೆ. ಚಿತ್ರತಂಡ ನೀಡಿರುವ ಸಾಹಿತ್ಯಕ್ಕೆ ಸಂಗೀತವನ್ನು ಅಳವಡಿಸಿ ನಮ್ಮ ಇಮೇಲ್ bang@radiomirchi.comಗೆ ಕಳಿಸಿ. ದಯಮಾಡಿ ನಿಮ್ಮ ಆಡಿಯೋನ ಡೌನ್ಲೋಡ್ ಮಾಡಬಲ್ಲ ಲಿಂಕ್ ಮಾಡಿ ಕಳಿಸಿ, ದೊಡ್ಡ ಫೈಲ್ ನಮ್ಮ ಈಮೇಲ್ ಗೆ ತಲುಪುವುದಿಲ್ಲ. ಕಡೆಯ ದಿನಾಂಕ ಮಾರ್ಚ್ 6, 2017.

ಈ ಚಿತ್ರಕ್ಕೆ ಅನೂಪ್ ಸೀಳಿನ್, ಮಿಥುನ್ ರವರು ಬೇರೆ ಹಾಡುಗಳನ್ನು ಮಾಡಿದ್ದಾರೆ...ಆದರೆ ಒಂದು promotional song ನಿಮ್ಮಲ್ಲಿ ಆಯ್ಕೆಯಾದವರು ನೀವು ಸಂಯೋಜನೆ ಮಾಡಿ ಹಾಡಬಹುದು... ಕಾಫಿತೋಟ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶಕ...ಆದರೆ ಒಂದು ಹಾಡನ್ನು ನಿಮ್ಮಲ್ಲಿ ಒಬ್ಬರು ಸಂಯೋಜಿಸಿ ಹಾಡಬೇಕೆಂದು ನಮ್ಮ ಇಷ್ಟ...ಆ ಸ್ಪರ್ಧೆಯ ವಿವರಗಳು ಕೆಳಕಂಡ ವಿಡಿಯೋದಲ್ಲಿ ಇದೆ...

TN Seetharam #Kaafithota Music Director Hunt

ಇವೆಲ್ಲವನ್ನೂ ನಮ್ಮ ಪರವಾಗಿ ನಡೆಸಿಕೊಡುವವರು 'ರೇಡಿಯೋ ಮಿರ್ಚಿ'ಯವರು...ಅಲ್ಲೂ ಕೂಡ ನೀವು ವಿವರಗಳನ್ನು ಕೇಳಬಹುದು. ದಯವಿಟ್ಟು ಸ್ನೇಹಿತರೆಲ್ಲರೂ ಈ ಲಿಂಕ್ ಶೇರ್ ಮಾಡಿ, ಉಪಕರಿಸಿ..ಎಂದು ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬದುಕು ಯಾರೋ ಎಂದೋ
ಸುಮ್ನೆ ತೆಗೆದಾ ವಿಚಿತ್ರ Selfie!
ಈಗೆದಕು ಚಿಂತೆ ಬೇಡ
ಬನ್ನಿ ಕುಡಿಯುವ ಚುಚುರು ಕಾಫಿ!!

ಯಾವ ತೋಟದ ಕಾಫಿ ಬೀಜ
ಯಾವ ಕಪ್ಪಿನ ಕಾಫಿ ಆಗುವುದೋ!
ನಾವೆಂದೋ ಮಾಡಿದ ತಪ್ಪುಗಳಲಿ
ಯಾವ ತಪ್ಪಿಗೆ ಮಾಫಿ ಆಗುವುದೋ?!

ಈ ಬದುಕು ಯಾರೋ ಎಂದೋ

ಸುಮ್ನೆ ತೆಗೆದಾ ವಿಚಿತ್ರ Selfie!
ಈಗೆದಕು ಚಿಂತೆ ಬೇಡ
ಬನ್ನಿ ಕುಡಿಯುವ ಚುಚುರು ಕಾಫಿ!!

ಹೇಳಲಾಗದಂಥ ಗುಟ್ಟು ಇಲ್ಲಿ ಯಾರಿಗ್ಯಾರುಂಟು?

ಪಾಳು ಭಾವಿಯ ಆಳದಲ್ಲಿ
ಬೊಗಸೆಯಷ್ಟು ನೀರುಂಟು
ಯಾವ ತೋಟದ ನಾರಿಕೇಳ
ಯಾವ ಕಲ್ಲಲಿ ಚಟ್ನಿಯಾಗುವುದೋ?!

ಈ ಒಟ್ಟು ಬದುಕು ಕಾನೊನ್ ಪ್ರಕಾರ

ಯಾವ ಹೊತ್ತಿಗೆ ಅರ್ಥವಾಗುವುದೋ?!
-ಯೋಗರಾಜ್ ಭಟ್

English summary
TN Seetharam #Kaafithota Music Director Hunt: Compose music to the lyrics and mail that to bangradiomirchi.com please ensure you send us a downloadable link or a file transfer link, please do not send the final file as an attachment. Hurry, last date for entries March 6, 2017

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada