»   » 'ಪ್ರಜಾಕೀಯ'ದ ಮಧ್ಯೆ ಬಂತು 'ಉಪೇಂದ್ರ ಮತ್ತೆ ಬಾ' ಹಾಡುಗಳು

'ಪ್ರಜಾಕೀಯ'ದ ಮಧ್ಯೆ ಬಂತು 'ಉಪೇಂದ್ರ ಮತ್ತೆ ಬಾ' ಹಾಡುಗಳು

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಸದ್ಯ 'ಪ್ರಜಾಕೀಯ' ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ಹೀಗಾಗಿ, ಇನ್ನು ಮುಂದೆ ಸಿನಿಮಾಗಳ ಕಡೆ ಆಸಕ್ತಿ ಸ್ವಲ್ಪ ಕಮ್ಮಿ ಅಂತಾನೇ ಹೇಳ್ಬಹುದು.

ಹೀಗಿರುವಾಗ, ರಿಯಲ್ ಸ್ಟಾರ್ ಅಭಿನಯದ 'ಉಪೇಂದ್ರ ಮತ್ತೆ ಬಾ' ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರ ಈಗ ಧ್ವನಿಸುರುಳಿ ರಿಲೀಸ್ ಮಾಡಿದೆ.

Upendra Mathe Baa Audio Released

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ಲೋಕನಾಥ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹಯಗ್ರೀವ ಎಂಟರ್ ಪ್ರೈಸಸ್ ಅಡಿಯಲ್ಲಿ ಶ್ರೀಕಾಂತ್, ಶಶಿಕಾಂತ್, ನರೇಂದ್ರನಾಥ್ ನಿರ್ಮಾಣ ಮಾಡಿದ್ದಾರೆ.

'ಉಪೇಂದ್ರ ಮತ್ತೆ ಬಾ' ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ತೆಲುಗಿನ 'ಸೊಗ್ಗಾಡೆ ಚಿನ್ನಿನಾಯನ' ಚಿತ್ರದ ರೀಮೇಕ್ ಆಗಿದೆ. ಉಪ್ಪಿಗೆ ನಟಿ ಪ್ರೇಮಾ ಮತ್ತು ಶ್ರುತಿ ಹರಿಹರನ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.

'ಉಪೇಂದ್ರ ಮತ್ತೆ ಬಾ' ಹಾಡುಗಳು ಇಲ್ಲಿದೆ ಕೇಳಿ

Upendra Upcoming Project | Filmibeat Kannada
English summary
Realstar Upendra Starrer 'Upendra Mathe Baa inthi ninna prema' movie Audio Released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada