»   » 'ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?

'ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?

Posted By:
Subscribe to Filmibeat Kannada

'ಉಪ್ಪಿ-2' ಆಡಿಯೋ ಇಂದು ಅಧಿಕೃತವಾಗಿ ರಿಲೀಸ್ ಆಗುತ್ತಿದೆ. ಸಂಜೆ 7 ಗಂಟೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ರುಪ್ಪೀಸ್ ರೆಸಾರ್ಟ್'ನಲ್ಲಿ 'ಉಪ್ಪಿ-2' ಚಿತ್ರದ ಹಾಡುಗಳು ಅದ್ದೂರಿಯಾಗಿ ಬಿಡುಗಡೆ ಆಗುತ್ತಿವೆ.

ಇದು ಅಫೀಶಿಯಲ್ ಆಡಿಯೋ ರಿಲೀಸ್ ಫಂಕ್ಷನ್ ಆದರೆ, ಅದಾಗಲೇ ಮಾರುಕಟ್ಟೆಗೆ 'ಉಪ್ಪಿ-2' ಚಿತ್ರದ ಹಾಡುಗಳು ಲಗ್ಗೆ ಇಟ್ಟಿವೆ. 'ಉಪ್ಪಿ-2' ಚಿತ್ರದ ಆಡಿಯೋ ಸಿಡಿಗಳು ಬಿಸಿ ಬಿಸಿ ಚೌಚೌಬಾತ್ ನಂತೆ ಸೇಲ್ ಆಗುತ್ತಿದೆ. [ಉಪ್ಪಿ-2 ಚಿತ್ರದ 'ಭಂಗಿ ಹಾಡು' ಲೀಕ್.!?]


ಎಫ್.ಎಂ.ರೇಡಿಯೋಗಳಲ್ಲೂ 'ಉಪ್ಪಿ-2' ಚಿತ್ರದ ಹಾಡುಗಳು ಸಖತ್ ಸೌಂಡ್ ಮಾಡುತ್ತಿವೆ. ಖುದ್ದು ಉಪೇಂದ್ರ ನಿಂತು ಆಡಿಯೋ ಸಿಡಿ ಬಿಡುಗಡೆ ಮಾಡುವ ಮೊದಲೇ ರಾಜ್ಯದ ಮೂಲೆ ಮೂಲೆಯಲ್ಲೂ 'ರಿಯಲ್ ಸ್ಟಾರ್' ಅಭಿಮಾನಿಗಳ ಬಳಗ 'ಉಪ್ಪಿ-2' ಚಿತ್ರದ ಆಡಿಯೋ ರಿಲೀಸ್ ಮಾಡುತ್ತಿವೆ. ಮುಂದೆ ಓದಿ....


ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್

'ಉಪ್ಪಿ-2' ಚಿತ್ರ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿಕೊಂಡಿದೆ. ರಿಯಲ್ ಸ್ಟಾರ್ ಉಪೇಂದ್ರಗಿಂತ ಅವರ ಅಭಿಮಾನಿಗಳೇ 'ಉಪ್ಪಿ-2' ಚಿತ್ರದ ಬಗ್ಗೆ ಆಸಕ್ತಿ ವಹಿಸಿ ದಿನಕ್ಕೊಂದು ಪೋಸ್ಟರ್ ರೆಡಿ ಮಾಡುತ್ತಿದ್ದಾರೆ. ಇಂದು 'ಉಪ್ಪಿ-2' ಆಡಿಯೋ ರಿಲೀಸ್ ಆಗಿರುವುದರಿಂದ ಟ್ವಿಟ್ಟರ್ ನಲ್ಲಿ ಉಪ್ಪಿ ಅಭಿಮಾನಿಗಳು 'ಉಪ್ಪಿ-2' ಹಾಡುಗಳನ್ನ ಟಾಪ್ ಟ್ರೆಂಡಿಂಗ್ ಮಾಡುತ್ತಿದ್ದಾರೆ.


'ಉಪ್ಪಿ-2' ನಲ್ಲಿ ಐದು ಹಾಡುಗಳು.!

ಬಹುನಿರೀಕ್ಷಿತ 'ಉಪ್ಪಿ-2' ಚಿತ್ರದಲ್ಲಿ ಐದು ಹಾಡುಗಳಿವೆ. ಎಲ್ಲವೂ ಥೇಟ್ ಉಪೇಂದ್ರ ಸ್ಟೈಲ್ ನಲ್ಲಿ ಒಂದಕ್ಕಿಂತ ಒಂದು ಡಿಫರೆಂಟ್. ಹಾಡುಗಳು ಹೇಗಿರಬಹುದು ಅಂತ ಈಗ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನೀವೇ ನೋಡಿ....


ನ್ಯಾಷಿನಲ್ ಕಾಲೇಜ್ ನಲ್ಲಿ 'ಉಪ್ಪಿ-2' ಹಾಡುಗಳ ಕಲರವ

ಇಂದು ಬೆಳ್ಳಗ್ಗೆ 7.30 ರ ಸುಮಾರಿಗೆ ಬೆಂಗಳೂರಿನ ನ್ಯಾಷಿನಲ್ ಕಾಲೇಜು ಮೈದಾನದಲ್ಲಿ 'ಉಪ್ಪಿ-2' ಚಿತ್ರದ ಹಾಡುಗಳನ್ನ ಅಭಿಮಾನಿಗಳೇ ರಿಲೀಸ್ ಮಾಡಿದ್ದಾರೆ.


ಬಿಜಾಪುರದಲ್ಲಿ 'ಉಪ್ಪಿ-2' ಆಡಿಯೋ ರಿಲೀಸ್

ಬಿಜಾಪುರದಲ್ಲಿ ಉಪೇಂದ್ರ ಅಭಿಮಾನಿಗಳ ಬಳಗ 'ಉಪ್ಪಿ-2' ಆಡಿಯೋ ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.


ಕೋಲಾರದಲ್ಲೂ 'ಉಪ್ಪಿ-2' ಕಮಾಲ್

ಇಂದು ಬೆಳ್ಳಗ್ಗೆ 10.30ಕ್ಕೆ ಕೋಲಾರದಲ್ಲಿ 'ಉಪ್ಪಿ-2' ಚಿತ್ರದ ಹಾಡುಗಳನ್ನ ಉಪೇಂದ್ರ ಅಭಿಮಾನಿಗಳು ಬಿಡುಗಡೆ ಮಾಡಿ ಸಂಭ್ರಮಿಸಿದರು.


ಸಕ್ಕರೆ ನಾಡಿನಲ್ಲೂ 'ಉಪ್ಪಿಟ್ಟು' ಘಮ

ಸಕ್ಕರೆ ನಾಡು ಮಂಡ್ಯದಲ್ಲೂ ಉಪೇಂದ್ರ ಅಭಿಮಾನಿ ಸಂಘ 'ಉಪ್ಪಿ-2' ಆಡಿಯೋ ರಿಲೀಸ್ ಫಂಕ್ಷನ್ ಹಮ್ಮಿಕೊಂಡಿದೆ.


ಹಾಸನದಲ್ಲೂ ಉಪ್ಪಿ ಹವಾ

ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ 'ಉಪ್ಪಿ-2' ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದಾರೆ ಅಭಿಮಾನಿಗಳು.


ಹೊಸೂರ್ ನಲ್ಲಿ ಆಡಿಯೋ ರಿಲೀಸ್

ಇವಿಷ್ಟೆ ಅಲ್ಲದೇ, ಹೊಸೂರ್, ಮಳವಳ್ಳಿ, ಬೊಮ್ಮನಹಳ್ಳಿ, ಮಾಗಡಿ, ಕೋಟೇಶ್ವರ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ 'ಉಪ್ಪಿ-2' ಹಾಡುಗಳನ್ನ ಅಭಿಮಾನಿಗಳೇ ರಿಲೀಸ್ ಮಾಡುತ್ತಿದ್ದಾರೆ.


ಎಲ್ಲದಕ್ಕೂ ಕಾರಣ 'ನೀನು'.!

ಅಂದು 'ನಾನು' ಇಂದು 'ನೀನು' ಅಂತ 'ಉಪ್ಪಿ-2' ಚಿತ್ರಕ್ಕೆ ಟ್ಯಾಗ್ ಲೈನ್ ಕೊಟ್ಟಿದ್ದಾರೆ ಉಪೇಂದ್ರ. 'ಉಪ್ಪಿ-2' ಅಡ್ಡದಿಂದ ಹೊರಬಿದ್ದ ಪೋಸ್ಟರ್ ನಲ್ಲಿ 'ಉಪ್ಪಿ-2' ಆಡಿಯೋ ಬಿಡುಗಡೆ ಮಾಡುವವರು - 'ನೀನು'. ಮುಖ್ಯ ಅತಿಥಿಗಳು - 'ನೀನು' ಅಂತಿದೆ. ಹೀಗಾಗಿ ಎಲ್ಲವೂ 'ನಾವೇ' ಅಂತ ಅಭಿಮಾನಿಗಳೇ ಮುಂದೆ ನಿಂತು ಆಡಿಯೋ ರಿಲೀಸ್ ಮಾಡುತ್ತಿದ್ದಾರೆ.


English summary
Kannada Actor Upendra directorial 'Uppi-2' Audio has hit the market. Uppi-2 Audio release craze is trending in twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada