»   » ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಈಸ್ ಬ್ಯಾಕ್: 'ಕುರುಕ್ಷೇತ್ರ' ಹಾಡುಗಳು ರೆಡಿ.!

ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಈಸ್ ಬ್ಯಾಕ್: 'ಕುರುಕ್ಷೇತ್ರ' ಹಾಡುಗಳು ರೆಡಿ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿ.ಹರಿಕೃಷ್ಣ ಮತ್ತೆ ಒಂದಾಗಿದ್ದಾರೆ. ಅದು 'ಕುರುಕ್ಷೇತ್ರ' ಚಿತ್ರದ ಮೂಲಕ.

'ಭೂಪತಿ' ಚಿತ್ರದಿಂದ ದರ್ಶನ್ ಅಭಿನಯದ ಚಿತ್ರಗಳಿಗೆ ಸಂಗೀತ ನೀಡುತ್ತಲೇ ಬಂದಿದ್ದ ವಿ.ಹರಿಕೃಷ್ಣ ಜಾಗಕ್ಕೆ 'ಚಕ್ರವರ್ತಿ' ಚಿತ್ರದಲ್ಲಿ ಅರ್ಜುನ್ ಜನ್ಯ ಎಂಟ್ರಿಕೊಟ್ಟಿದ್ದರು. 'ಚಕ್ರವರ್ತಿ' ಸಿನಿಮಾದಲ್ಲಿ ದರ್ಶನ್-ಹರಿಕೃಷ್ಣ ಮ್ಯಾಜಿಕ್ ಮಿಸ್ ಮಾಡಿಕೊಂಡವರಿಗೆ ಈಗ ಹ್ಯಾಪಿ ನ್ಯೂಸ್ ಸಿಕ್ಕಿದೆ. ದರ್ಶನ್-ವಿ.ಹರಿಕೃಷ್ಣ ಕಾಂಬಿನೇಷನ್ 'ಕುರುಕ್ಷೇತ್ರ' ಚಿತ್ರದಲ್ಲಿ ಮುಂದುವರೆಯಲಿದೆ.

'ಕುರುಕ್ಷೇತ್ರ'ಕ್ಕೆ ಕರ್ಣ ಫಿಕ್ಸ್: ಇದು ದರ್ಶನ್ ಬಳಗಕ್ಕೆ ಶಾಕ್ ಆದ್ರು ಖುಷಿ ವಿಚಾರವೇ.!

V Harikrishna readying music for 'Kurukshetra'

ದರ್ಶನ್ ಅಭಿನಯಿಸಲಿರುವ ಐವತ್ತನೇ ಚಿತ್ರ 'ಕುರುಕ್ಷೇತ್ರ'ಕ್ಕೆ ಸಂಗೀತ ಸಂಯೋಜಿಸಲು ವಿ.ಹರಿಕೃಷ್ಣ ಆರಂಭಿಸಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಕೂಡ ಪ್ರಾರಂಭ ಮಾಡಿರುವ ವಿ.ಹರಿಕೃಷ್ಣ ಎರಡು ಹಾಡುಗಳನ್ನು ರೆಡಿ ಮಾಡಿಟ್ಟಿದ್ದಾರೆ.

'ಕುರುಕ್ಷೇತ್ರ' ಸಿನಿಮಾದಲ್ಲಿ ಒಟ್ಟು ಎಂಟು ಹಾಡುಗಳು ಇರಲಿವೆ. ಹೇಳಿ ಕೇಳಿ, 'ಕುರುಕ್ಷೇತ್ರ' ಪೌರಾಣಿಕ ಚಿತ್ರವಾಗಿರುವುದರಿಂದ, ಅದಕ್ಕೆ ತಕ್ಕಂತೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ವಿ.ಹರಿಕೃಷ್ಣ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!

'ಕುರುಕ್ಷೇತ್ರ' ಸಿನಿಮಾದ ಮುಹೂರ್ತ ಜುಲೈ 23 ರಂದು ನಡೆಯಲಿದೆ. 'ದುರ್ಯೋಧನ' ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿ ನೀಡುತ್ತಲಿರುತ್ತೇವೆ, 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ..

English summary
Music Director V Harikrishna readying music for Darshan starrer 50th Movie 'Kurukshetra'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada