»   » ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..

ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..

Posted By:
Subscribe to Filmibeat Kannada

ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ 'ನಾಗರಹಾವು' ಆಡಿಯೋ ಬಿಡುಗಡೆ ಆಗಸ್ಟ್ 14 ರಂದು ಸರಳವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ.

25 ಬಡ ರೋಗಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಂಚಿ, ಡಾ.ವಿಷ್ಣುವರ್ಧನ್ ರವರಿಗೆ ವಂದನೆ ಸಲ್ಲಿಸುವ ಮೂಲಕ ಗುರುಕಿರಣ್ ಸಂಗೀತ ನಿರ್ದೇಶನದ 'ನಾಗರಹಾವು' ಆಡಿಯೋ ಲೋಕಾರ್ಪಣೆಯಾಗಲಿದೆ. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]


ಅದಕ್ಕೂ ಮುನ್ನ 'ನಾಗರಹಾವು' ಚಿತ್ರದ ಆಡಿಯೋ ಹೇಗಿರಬಹುದು ಅಂತ ಕಾತರದಿಂದ ಕಾಯುತ್ತಿರುವವರಿಗೆ, ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ....


Watch Dr.Vishnuvardhan, Ramya starrer 'Nagarahavu' audio teaser

'ಸ್ಯಾಂಡಲ್ ವುಡ್ ಕ್ವೀನ್' ರಮ್ಯಾ ಮತ್ತು ದಿಗಂತ್ ಮಿಂಚಿರುವ 'ನಾಗರಹಾವು' ಸಾಂಗ್ ಒಂದರ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಬಿಂಕ ಬಿಟ್ಟು ನಟಿ ರಮ್ಯಾ ವಯ್ಯಾರದಿಂದ ಬಳುಕಿರುವುದು, ಅವರ ಅಭಿಮಾನಿಗಳ ಬಾಯಿಗೆ ಸಿಹಿ ಲಡ್ಡು ಬಿದ್ದಂತಾಗಿದೆ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]


25 ಸೆಕೆಂಡ್ ಇರುವ ಈ ಸಣ್ಣ ವಿಡಿಯೋ ನೋಡಿ 'ಓಹ್ ಸೂಪರ್' ಅಂದಿದ್ರೆ, ಪೂರ್ತಿ ಹಾಡುಗಳನ್ನ ಕೇಳಲು ಇನ್ನೂ ನಾಲ್ಕು ದಿನ ಕಾದುಬಿಡಿ...

English summary
Kannada Actor Dr.Vishnuvardhan's 201st movie 'Nagarahavu' Audio Teaser is out. Watch 'Sandalwood Queen' Ramya sizzling in Audio teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada