»   » ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು: ಜಿ.ಎಸ್.ಟಿ ಸಾಂಗು ಒಮ್ಮೆ ಕೇಳು ಗುರು

ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು: ಜಿ.ಎಸ್.ಟಿ ಸಾಂಗು ಒಮ್ಮೆ ಕೇಳು ಗುರು

Posted By:
Subscribe to Filmibeat Kannada

ಸಿನಿಮಾಗಳಲ್ಲಿ 'ಯಬಡ-ತಬಡ..' ಸಾಹಿತ್ಯ ಬರೆದು ಸಿನಿ ಪ್ರಿಯರನ್ನು ರಂಜಿಸಿರುವ ನಿರ್ದೇಶಕ ಯೋಗರಾಜ್ ಭಟ್ ಇದೀಗ ದೇಶಾದ್ಯಂತ ಎಲ್ಲರ ನಿದ್ದೆಗೆಡಿಸಿರುವ 'ಜಿ.ಎಸ್.ಟಿ' ಬಗ್ಗೆ ಒಂದು ಹಾಡು ಬರೆದಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು.

'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು

ಇವತ್ತು ಅದೇ 'ಜಿ.ಎಸ್.ಟಿ' ಸಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಇಂದು (ಜುಲೈ 2) 'ಮನೆ ಹುಡುಗ' ಗಣೇಶ್ ತಮ್ಮ ಜನ್ಮದಿನದ ಸಂಭ್ರಮದಲ್ಲಿ ಇದ್ದಾರೆ. ಈ ಸಂಭ್ರಮವನ್ನ ದುಪ್ಪಟ್ಟು ಮಾಡಲು 'ಮುಗುಳು ನಗೆ' ಚಿತ್ರತಂಡ 'ಜಿ.ಎಸ್.ಟಿ' ಸಾಂಗ್ ಬಿಡುಗಡೆ ಮಾಡಿದೆ.

Watch GST Song written by Yogaraj Bhat

ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

ಜಿ.ಎಸ್.ಟಿ ನಿನ್ನೆಯಷ್ಟೇ ಅಧಿಕೃತವಾಗಿ ಜಾರಿಗೆ ಬಂದಿದೆ. ಇವತ್ತು ಗಣೇಶ್ ಬರ್ತಡೇ ಆದ್ರಿಂದ 'ಜಿ.ಎಸ್.ಟಿ' ಹಾಡನ್ನ ಬಿಡುಗಡೆ ಮಾಡಲು ಇಂದೇ ಸರಿಯಾದ ದಿನ ಎಂದು ಡಿಸೈಡ್ ಮಾಡಿ ಚಿತ್ರತಂಡ ಹಾಡನ್ನ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ.

ಗಣೇಶ್ ಅಭಿನಯಿಸುತ್ತಿರುವ 'ಮುಗುಳು ನಗೆ' ಚಿತ್ರದಲ್ಲಿ ಇರುವ 'ಹೊಡಿ ಒಂಬತ್' ಟ್ಯೂನ್ ಗೆ ನಿರ್ದೇಶಕ ಯೋಗರಾಜ್ ಭಟ್ 'ಜಿ.ಎಸ್.ಟಿ' ಕುರಿತ ಸಾಹಿತ್ಯ ರಚಿಸಿದ್ದಾರೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಗಣೇಶ್ ಹಾಗೂ ದುನಿಯಾ ವಿಜಿ 'ಜಿ.ಎಸ್.ಟಿ' ಹಾಡಿಗೆ ದನಿ ಗೂಡಿಸಿದ್ದಾರೆ.

''ಜೀವನ ಟಾನಿಕ್ ಬಾಟ್ಲು... ಕುಡಿಯೋಕೆ ಮುಂಚೆ ಅಲ್ಲಾಡ್ಸು...'' ಎಂದು ತಮ್ಮದೇ ಶೈಲಿಯಲ್ಲಿ ಫಿಲಾಸಫಿ ಹೇಳುವ ಭಟ್ರು 'ಜಿ.ಎಸ್.ಟಿ' ಬಗ್ಗೆ ಏನೆಲ್ಲ ಗೀಚವ್ರೆ... ಗಣೇಶ್ ಹಾಗೂ ದುನಿಯಾ ವಿಜಿ ಹೇಗೆ ಹಾಡವ್ರೆ ಅಂತ ನೀವೇ ಒಮ್ಮೆ ನೋಡಿಬಿಡಿ...

ಊಟಕ್ಕೂ ಟ್ಯಾಕ್ಸು... ವಾಂತಿಗೂ ಟ್ಯಾಕ್ಸು...
ಹುಟ್ಟು ಚಟ್ಟಕ್ಕೆ ತೆರಿಗೆ ಫಿಕ್ಸು
ಹೊಡಿ ಒಂಬತ್

ಸ್ನಾನಕ್ಕೆ ನಿಂತ್ರೆ ಚೊಂಬಿಗೆ ಟ್ಯಾಕ್ಸು
ಬ್ಲೇಡಿಗೆ ಟ್ಯಾಕ್ಸು, ಗಡ್ಡಕ್ಕೆ ಸಿಕ್ಸು
ಹೊಡೆ ಒಂಬತ್

ಜಿ.ಎಸ್.ಟಿ ಬಂತು... ಜಿ.ಎಸ್.ಟಿ ಬಂದ್ಬುಡ್ತು...
ಅದ್ರ ಅರ್ಥ ಏನು.?
ಇಲ್ ಯಾವನಿಗ್ ಗೊತ್ತು.?
ಕಾಸಿದ್ದೋನೇ ಕಾಸ್ ಮಾಡೋದು
ಹೊಡಿ ಒಂಬತ್
ಕಾಸೇ ಇಲ್ದಿರೋನು ಏನ್ ಮಾಡೋದು
ಹೊಡಿ ಒಂಬತ್... ಹೊಡಿ ಒಂಬತ್... ಹೊಡಿ ಒಂಬತ್...

English summary
GST Song written by Yogaraj Bhat is out. Watch the video.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada