»   » ರಾಕಿಂಗ್ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟ 'ಲೂಸ್ ಮಾದ'ನ ಅಣ್ಣ

ರಾಕಿಂಗ್ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟ 'ಲೂಸ್ ಮಾದ'ನ ಅಣ್ಣ

Posted By:
Subscribe to Filmibeat Kannada

ಲೂಸ್ ಮಾದ ಯೋಗಿ ಸಹೋದರ ಮಹೇಶ್, ಬಣ್ಣ ಹಚ್ಚಿರುವ ವಿಷಯ ನಿಮಗೆ ಗೊತ್ತಲ್ವಾ. ಕಳೆದ ವರ್ಷದಿಂದ ಬಿರುಸಿನಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಮಹೇಶ್ ಅಭಿನಯದ 'ಭಾಗ್ಯರಾಜ್' ಚಿತ್ರದ ಹಾಡೊಂದು ಈಗ ಬಿಡುಗಡೆಯಾಗಿದೆ.

'ನಕಲು ಮಾಡಬೇಡಿ' ಅನ್ನುವ ಟ್ಯಾಗ್ ಲೈನ್ ಹೊಂದಿರುವ 'ಭಾಗ್ಯರಾಜ್' ಚಿತ್ರದ ಹಾಡು ಶುರುವಾಗುವುದು 'ನಕಲು ಮಾಡಬೇಡಿ' ಅನ್ನುವ ಬುದ್ಧಿವಾದದಿಂದಲೇ. ಈಗಿನ ಟ್ರೆಂಡ್ ಗೆ ತಕ್ಕಂತೆ ಸಂಗೀತ ನಿರ್ದೇಶಕ ವಿ.ಮನೋಹರ್ ಸಾಹಿತ್ಯ ಬರೆದಿದ್ದಾರೆ.

Watch Kannada movie Bhagyaraj song Nakalu Madabedi

ಗಾಂಧಿನಗರದಲ್ಲಿ ವಿಭಿನ್ನ ರಾಗ-ತಾಳ, ಹಾಡುಗಳಿಂದ ಹೆಸರಾಗಿರುವ ಅನೂಪ್ ಸೀಳಿನ್, ಕೊಂಚ ಡಿಫರೆಂಟ್ ಆಗಿ ರಾಕ್ ಸ್ಟೈಲ್ ನಲ್ಲಿ 'ನಕಲು ಮಾಡಬೇಡಿ' ಹಾಡನ್ನ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೆ ರಿಲೀಸ್ ಆಗಿರುವ ವಾರಿಜಶ್ರೀ ಗಾನಸುಧೆಯಲ್ಲಿ ಹೊರಬಂದಿರುವ 'ಭಾಗ್ಯರಾಜ್' ಚಿತ್ರದ ಈ ಹಾಡು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Watch Kannada movie Bhagyaraj song Nakalu Madabedi2

ಮೊದಲ ನೋಟಕ್ಕೆ 'ನಕಲಿ ನೋಟಿನ ಜಾಲ'ದ ಸುತ್ತ ಚಿತ್ರಕಥೆ ಹೆಣೆದಿರುವುದು ಗೋಚರಿಸುತ್ತೆ. ಅಷ್ಟು ಬಿಟ್ಟರೆ, ಲೂಸ್ ಮಾದನಂತೆ ನ್ಯಾಚುರಲ್ಲಾಗಿ ತೆರೆಮೇಲೆ ಕಾಣಿಸಿಕೊಂಡಿರುವ ಮಹೇಶ್, 'ಭಾಗ್ಯರಾಜ್' ಆಗಿ ನಿರ್ವಹಿಸುತ್ತಿರುವ ಪಾತ್ರ ಸಸ್ಪೆನ್ಸ್ ಆಗಿದೆ.

'ಭಾಗ್ಯರಾಜ್' ಚಿತ್ರಕ್ಕೆ ಜಾಹ್ನವಿ ಕಾಮತ್ ನಾಯಕಿ. ಇನ್ನೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ದೀಪಕ್ ಮಧುವನಹಳ್ಳಿ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರಗೆ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದ ದೀಪಕ್, 'ಭಾಗ್ಯರಾಜ್' ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. [ಯೋಗಿ ಅಣ್ಣ ಮಹೇಶ್ ಭಾಗ್ಯರಾಜ್ ಆಗಿ ಎಂಟ್ರಿ]

ಇನ್ನು ಮಗನ ಚಿತ್ರಕ್ಕೆ ತಂದೆ ಟಿ.ಪಿ.ಸಿದ್ದರಾಜು ಬಂಡವಾಳ ಹಾಕುತ್ತಿದ್ದಾರೆ. ಇದುವರೆಗೂ ಸದ್ದು ಗದ್ದಲ ವಿಲ್ಲದೆ ಸೈಲೆಂಟ್ ಆಗಿದ್ದ 'ಭಾಗ್ಯರಾಜ್' ಈಗ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ಚಿತ್ರ ತೆರೆಮೇಲೆ ಬರೋಕೆ ಇನ್ನೂ ತುಂಬಾ ಟೈಮ್ ಇದೆ. ಅಲ್ಲಿವರೆಗೂ 'ನಕಲು ಮಾಡಬೇಡಿ' ಹಾಡನ್ನ ಕೇಳಿ ಎಂಜಾಯ್ ಮಾಡಿ....(ಫಿಲ್ಮಿಬೀಟ್ ಕನ್ನಡ)

English summary
Kannada Actor Loose Mada Yogesh's Brother Mahesh starrer Bhagyaraj movie song Nakalu Madabedi is out. Watch the song here.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X