»   » ''ತಾಳೆ ಹೂವ ಪೊದೆಯಿಂದ..'' ರೀಮಿಕ್ಸ್ ಹಾಡು ನೋಡಿದ್ದೀರಾ?

''ತಾಳೆ ಹೂವ ಪೊದೆಯಿಂದ..'' ರೀಮಿಕ್ಸ್ ಹಾಡು ನೋಡಿದ್ದೀರಾ?

Posted By:
Subscribe to Filmibeat Kannada

'ಖೈದಿ' ಅಂದಕೂಡಲೆ ಕನ್ನಡ ಸಿನಿ ಪ್ರಿಯರಿಗೆ ತಕ್ಷಣ ನೆನಪಾಗುವುದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಮತ್ತು ''ತಾಳೆ ಹೂವ ಪೊದೆಯಿಂದ...'' ಹಾಡು. 1984ರಲ್ಲಿ ತೆರೆಕಂಡ 'ಖೈದಿ' ಸಿನಿಮಾ ಅಭೂತಪೂರ್ವ ಯಶಸ್ಸು ದಾಖಲಿಸಿತ್ತು.

ಈಗ ಇದೇ ಹೆಸರಲ್ಲಿ 'ಸೈಕೋ' ಖ್ಯಾತಿಯ ಧನುಷ್ ಸಿನಿಮಾ ಮಾಡುತ್ತಿರುವ ಸಂಗತಿಯನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿ ತಿಳಿದುಕೊಂಡಿದ್ದೀರಾ. ಇದೇ ಚಿತ್ರದ ಮತ್ತೊಂದು ವಿಶೇಷತೆಯನ್ನ ನೋಡುವ ಅವಕಾಶ ಈಗಿದೇ ಪುಟದಲ್ಲಿ ನಿಮಗೆ ಸಿಕ್ಕಿದೆ. ಅದೇ ಈ ''ತಾಳೆ ಹೂವ ಪೊದೆಯಿಂದ....'' ರೀಮಿಕ್ಸ್ ಹಾಡು.

Watch Making of Taale Hoova Podeyinda song from Kannada movie Khaidi

ವಿಷ್ಣು ಅಭಿಮಾನಿಗಳು ಎಂದೂ ಮರೆಯದ ಹಾಡು ಈ ''ತಾಳೆ ಹೂವ ಪೊದೆಯಿಂದ....''. ಕೆ.ಚಕ್ರವರ್ತಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ಈ ಹಾಡು ಅಂದಿಗೆ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಈಗ ಅದನ್ನೇ ರೀಮಿಕ್ಸ್ ಮಾಡಿ 'ಖೈದಿ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. [ಸಂಕಷ್ಟಗಳ ಸಂಕೋಲೆಯಲ್ಲಿ 'ಸೈಕೋ' ಧನುಷ್ 'ಖೈದಿ']

ಹೇಳಿ ಕೇಳಿ ಸಿನಿಮಾದ ಹೆಸರೇ 'ಖೈದಿ'. ಅಂದ್ಮೇಲೆ, ಅಭಿನಯ ಭಾರ್ಗವನಿಗೊಂದು ಟ್ರಿಬ್ಯೂಟ್ ಇರಲೇಬೇಕು. ವಿಷ್ಣು ನೆನಪಲ್ಲಿ ಅವರ ಹಾಡಿಗೆ ಹೊಸ ಟಚ್ ಕೊಟ್ಟು, ಹೊಸ 'ಖೈದಿ' ಚಿತ್ರತಂಡ ಈ ಪ್ರಯೋಗ ಮಾಡಿದೆ.

ಈಗ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋದಲ್ಲಿ ''ತಾಳೆ ಹೂವ ಪೊದೆಯಿಂದ...'' ರೀಮಿಕ್ಸ್ ಹಾಡು ಹೇಗೆ ರೆಡಿಯಾಗಿದೆ ಅಂತ ನೀವೇ ನೋಡಬಹುದು. ಸಖತ್ ಸ್ಟೈಲಿಶ್ ಆಗಿ ತರಹೇವಾರಿ ಕಾಸ್ಟ್ಯೂಮ್ಸ್ ನಲ್ಲಿ ಧನುಷ್ ಮತ್ತು ಚಾಂದಿನಿ ಮಿಂಚಿದ್ದಾರೆ. ಅಷ್ಟೇ ಎನರ್ಜಿಯಿಂದ ಸ್ಟೆಪ್ ಹಾಕಿದ್ದಾರೆ. [ಗಾಂಧಿನಗರದ ಹೊಸ 'ಖೈದಿ'ಯ ಆಟ ನೋಡಿರಣ್ಣ]

Watch Making of Taale Hoova Podeyinda song from Kannada movie Khaidi

ಹಾಡಿಗಂತಲೇ, ಭಿನ್ನವಿಭಿನ್ನ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇಡೀ ಸಿನಿಮಾದ ಹೈಲೈಟೇ ಈ ಹಾಡು. ಬಾಲಿವುಡ್ ಸಂಗೀತ ನಿರ್ದೇಶಕರಾಗಿರುವ ಜಸ್ಟಿನ್-ಉದಯ್ ಸಂಯೋಜನೆಯಲ್ಲಿ 'ತಾಳೆ ಹೂವಿಗೆ' ಹೊಸ ಮೆರುಗು ಬಂದಿದೆ. ಹಾಗ್ನೋಡಿದ್ರೆ, ಈ ಹಾಡಿಂದಲೇ 'ಖೈದಿ' ಚಿತ್ರದ ಆಡಿಯೋಗೆ ಬೇಡಿಕೆ ಹೆಚ್ಚಾಗಿರುವುದು. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ]

'ಸೈಕೋ' ಚಿತ್ರಕ್ಕೆ ನಿರ್ಮಾಪಕರಾಗಿದ್ದ ಗುರುದತ್, 'ಖೈದಿ' ಚಿತ್ರಕ್ಕೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಹೊಸ 'ಖೈದಿ' ತೆರೆಮೇಲೆ ಮಿಂಚಲು ಕೆಲವೇ ದಿನಗಳು ಬಾಕಿ. (ಫಿಲ್ಮಿಬೀಟ್ ಕನ್ನಡ)

English summary
Kannada Actor Dhanush of Psycho fame and Actress Chandini starrer 'Khaidi' movie sensational song 'Taale Hoova Podeyinda' is out. Watch the making video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada