»   » ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!

ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!

Posted By:
Subscribe to Filmibeat Kannada

ಒಂದ್ಕಡೆ 'ಹುಚ್ಚ ವೆಂಕಟ್' ಸಿನಿಮಾ ರೀ ರಿಲೀಸ್ ಆಗಿದೆ. ಅದರ ಜೊತೆಗೆ ಹುಚ್ಚ ವೆಂಕಟ್ ಗಾನ ಸುಧೆ ಹರಿಸಿರುವ 'ಪರಪಂಚ' ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಆಗಿದೆ.

ಕ್ರಿಶ್ ಜೋಶಿ ನಿರ್ದೇಶನದ ಯೋಗರಾಜ್ ಭಟ್ ನಿರ್ಮಾಣದಲ್ಲಿ ರೆಡಿಯಾಗಿರುವ 'ಪರಪಂಚ' ಸಿನಿಮಾಗಾಗಿ ಹುಚ್ಚ ವೆಂಕಟ್ ಗಾಯಕರಾಗಿರುವ ಸುದ್ದಿಯನ್ನ ನಾವೇ ನಿಮಗೆ ಮೊದಲು ಹೇಳಿದ್ದು. ಈಗ ಆ ಹಾಡನ್ನ ನೋಡುವ ಟೈಮ್ ಬಂದಿದೆ.

ಖುದ್ದು ಭಟ್ರು ಸಾಹಿತ್ಯ ಬರೆದಿರುವ 'ಬಾಯ್ ಬಸಳೆ ಸೊಪ್ಪು..ಆಲೂಗೆಡ್ಡೆ ಈರುಳ್ಳಿ...'' ಹಾಡಿಗೆ ಹುಚ್ಚ ವೆಂಕಟ್ ಹಾಡಲಿದ್ದಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. [ಭಟ್ರ ಸಾಹಿತ್ಯಕ್ಕೆ ಗಾನ ಸುಧೆ ಹರಿಸಿದ ಹುಚ್ಚ ವೆಂಕಟ್.!]

ಆದ್ರೆ, ಹುಚ್ಚ ವೆಂಕಟ್ ಹಾಡಿರುವ ಹಾಡೇ ಬೇರೆ. ಅದಕ್ಕೂ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದಾರೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಹಾಗಾದ್ರೆ, ಹುಚ್ಚ ವೆಂಕಟ್ ಹೇಗೆ ಹಾಡಿದ್ದಾರೆ ಅಂತ ನೀವೇ ನೋಡ್ಬಿಡಿ ಈ ವಿಡಿಯೋದಲ್ಲಿ.........

huccha-venkat

ಹುಟ್ಟಿದ ಊರು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ....
ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ, ಎದ್ದೇಳು ಕೊನೆ ಬಸ್ಸು ಟೈಮ್ ಆಗಿದೆ....
ಪೂರ್ವ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು....
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನು....
ನಿಂಗಿದು ಬೇಕಿತ್ತಾ ಮಗನೇ....
ವಾಪಸ್ಸು ಒಂಟೋಗು ಶಿವನೇ....
ಬ್ಯಾಗು ಹಿಡಿ....ಸೀದಾ ನಡಿ....
ಬೋರ್ಡು ನೋಡಿ....ಬಸ್ಸು ಹಿಡಿ....

English summary
YouTube Star Huccha Venkat has turned singer for Yogaraj Bhat productional Kannada Movie 'Parapancha'. Watch the making video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada