For Quick Alerts
ALLOW NOTIFICATIONS  
For Daily Alerts

ರಜನಿ-ಇಳಯರಾಜ ಕುಡಿತ ಚಟ ಬಿಡಿಸಿದ 'ಕನ್ನಡ' ತಾಯಿ

By ಜೇಮ್ಸ್ ಮಾರ್ಟಿನ್
|

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸ್ವರಜ್ಞಾನ ದಿಗ್ಗಜ ಇಳಯರಾಜ ಅವರು ಬಹುಕಾಲದ ಕುಡಿತದ ಚಟ ಬಿಡಲು ಕಾರಣವಾಗಿದ್ದು, ಉಡುಪಿ ಜಿಲ್ಲೆಯ ಕೊಲ್ಲೂರು ಮುಕಾಂಬಿಕೆ ಅಮ್ಮ. ಸಂಗೀತವೇ ದೇವರು ಎನ್ನುವ ಇಳಯರಾಜ, ಅಭಿಮಾನಿಗಳ ಒಳ್ಳೆತನದಲ್ಲಿ ದೈವಿಶಕ್ತಿ ಕಾಣುವ ರಜನಿ ಇಬ್ಬರಿಗೂ ಕೊಲ್ಲೂರು ಮುಕಾಂಬಿಕೆ ಕೃಪೆ ಸಿಕ್ಕಿದ್ದಕ್ಕೂ ಒಂದು ಕಥೆ ಇದೆ.

ರಜನಿಕಾಂತ್ ಅವರು ಸೂಪರ್ ಸ್ಟಾರ್ ಆಗುವುದಕ್ಕೂ ಮೊದಲಿನಿಂದಲೂ ಇಳಯರಾಜ ಜೊತೆ ಗುಂಡು ಪಾರ್ಟಿ ಮಿತ್ರರಾಗಿದ್ದರು. ರಾತ್ರಿಯಿಂದ ಬೆಳಗ್ಗಿನವರೆಗೆ ಮದ್ಯದ ಹೊಳೆಯಲ್ಲಿ ತೇಲುತ್ತಿದ್ದರಂತೆ. ಈ ಮಾತನ್ನು ಸ್ವತಃ ರಜನಿಕಾಂತ್ ಅವರು ಇತ್ತೀಚೆಗೆ ಬಹಿರಂಗಪಡಿಸಿದರು. ಹಾಗಂತ ಅವರು ಗುಂಡು ಹಾಕಿರಲಿಲ್ಲ. ಹಾಗೇ ಸುಮ್ಮನೆ ನೆನಪಿನ ದೋಣಿಯಲ್ಲಿ ವಿಹರಿಸುತ್ತಾ ತಮ್ಮ ಹಾಗೂ ಇಳಯರಾಜ ಅವರ ಬಾಂಧವ್ಯದ ಬಗ್ಗೆ ಮೆಲುಕು ಹಾಕಿದ್ದರು. ['ಮೈತ್ರಿ' ಟೀಸರ್ ಸೂಪರ್]

ಅದರೆ, ಕೆಲ ಕಾಲದ ನಂತರ ಇಳಯರಾಜ ಅವರಲ್ಲಿ ಸಾಕಷ್ಟು ಬದಲಾವಣೆಗಳನ್ನು ರಜನಿ ಗುರುತಿಸಿದರಂತೆ.ಇಳಯರಾಜ ಅವರನ್ನು ನೋಡಿದರೆ ಬಹಳ ಗಂಭೀರ ವ್ಯಕ್ತಿತ್ವದರಂತೆ ಕಾಣುತ್ತಾರೆ. ಜೊತೆಗೆ ಅವರ ಸಂಗೀತದ ಆಲಾಪನೆ ಕೇಳಿದರೆ ಅವರ ಮೇಲೆ ಇನ್ನಷ್ಟು ಗೌರವ ಭಕ್ತಿ ಭಾವಗಳು ಮೂಡುತ್ತವೆ. [ಸಾವಿರ ಚಿತ್ರಗಳ ಸರದಾರನಾದ ಇಳಯರಾಜ]

ಇಳಯರಾಜ ಅವರು ಸಹಜವಾಗಿ ತುಂಟತನ, ಹಾಸ್ಯ ಸ್ವಭಾವದವರು. ಕೆಲ ವರ್ಷಗಳ ನಂತರ ಅವರನ್ನು ಭೇಟಿ ಮಾಡಿದಾಗ ರಾಜಾ ಸಾರ್ ಅವರನ್ನು ಅನೇಕ ಬದಲಾವಣೆ ಕಂಡೆ. ಅವರ ಸ್ವಭಾವ, ನಗುಮುಖ, ಡ್ರೆಸ್ ಎಲ್ಲವೂ ಬದಲಾಗಿತ್ತು. ರಾಜಾ ಸಾರ್ ಹೋಗಿ ರಾಜಾ ಸ್ವಾಮಿ ಆಗಿಬಿಟ್ಟಿದ್ದರು. ಸಂಗೀತ ತಪಸ್ಸಿಗೆ ಕುಳಿತ ಸ್ವಾಮೀಜಿಯಂತೆ ಕಾಣುತ್ತಿದ್ದರು. ಇಳಯರಾಜ ಅವರಲ್ಲಾದ ಬದಲಾವಣೆ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರಂತೆ....

ರಾಜಾ ಅವರು ಹೇಳಿದ ಕಾರಣ ಹೀಗಿದೆ

ರಾಜಾ ಅವರು ಹೇಳಿದ ಕಾರಣ ಹೀಗಿದೆ

ಅಸಲಿಗೆ ದೇವರ ಬಗ್ಗೆ ಅಷ್ಟಾಗಿ ನಂಬಿಕೆ ಇರಿಸಿಕೊಳ್ಳದ, ದೇಗುಲಗಳಿಗೆ ಭೇಟಿ ಕೊಡುವುದನ್ನು ನಿಲ್ಲಿಸಿದ್ದ ರಾಜ ಅವರಿಗೆ ದೈವಿಶಕ್ತಿಯ ಪರಿಚಯ ಮಾಡಿಸಿದ್ದು ಖ್ಯಾತ ಪಿಟೀಲು ವಾದಕ ಎಲ್ ಸುಬ್ರಮಣಿಯಂ ಅವರ ಹಿರಿಯ ಸೋದರ ಸಂಗೀತಗಾರ ಎಲ್ ವೈದ್ಯನಾಥನ್. ಒಂದು ರೀತಿ ರಾಜ ಹಾಗೂ ರಜನಿ ಅವರ ಬದಲಾವಣೆಗೆ ಇವರೇ ಕಾರಣರಾದವರು.

ಕೊಲ್ಲೂರು ದೇಗುಲದಲ್ಲಿ ಕಾದಿತ್ತು ಅಚ್ಚರಿ

ಕೊಲ್ಲೂರು ದೇಗುಲದಲ್ಲಿ ಕಾದಿತ್ತು ಅಚ್ಚರಿ

ವೈದ್ಯನಾಥನ್ ಅವರು ಒಮ್ಮೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶ್ರೀಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇಗುಲಕ್ಕೆ ಹೊರಟಿದ್ದರು. ಜೊತೆಗೆ ಬರುವಂತೆ ಇಳಯರಾಜರಿಗೂ ಆಹ್ವಾನವಿತ್ತರು. ಒಲ್ಲದ ಮನಸ್ಸಿನಿಂದಲೇ ರಾಜಾ ಜೊತೆಗೂಡಿಕೊಂಡರು.

ಎಂದಿಗೂ ದೈವಿ ಶಕ್ತಿಯನ್ನು ನಂಬದ ಇಳಯರಾಜ ಅವರಿಗೆ ಕೊಲ್ಲೂರಿನ ಪರಿಸರ ಹೊಸ ಶಕ್ತಿಯನ್ನು ತುಂಬಿತ್ತಂತೆ. ಅಮ್ಮನ ಬಳಿ ಓಡಿ ಬಂದ ಕಂದ ಕಾಣುವ ಸಂತೋಷವನ್ನು ಕಂಡರಂತೆ. ಎಲ್ಲರಲ್ಲೂ ಶಕ್ತಿ ಸ್ವರೂಪಿಣಿಯಾಗಿ ನೆಲೆಸಿರುವ ಅಮ್ಮನ ಅನುಗ್ರಹದಿಂದ ಜೀವನದಲ್ಲಿ ಬದಲಾವಣೆ ತಂದುಕೊಂಡರಂತೆ.

ಇಳಯರಾಜ ಅಷ್ಟೇ ಬದಲಾಗಲಿಲ್ಲ

ಇಳಯರಾಜ ಅಷ್ಟೇ ಬದಲಾಗಲಿಲ್ಲ

ಕೊಲ್ಲೂರಿನಿಂದ ಬಂದ ಇಳಯರಾಜ ಅವರು ಎಲ್ ಸುಬ್ರಮಣಿಯಂ ಬಳಿ ತಮಗಾದ ದಿವ್ಯ ಅನುಭೂತಿಯನ್ನು ಹಂಚಿಕೊಂಡರು. ದೇಗುಲ ಪ್ರವೇಶಿಸುತ್ತಿದ್ದಂತೆ ನನ್ನಲ್ಲಿ ಉಂಟಾದ ಧನಾತ್ಮಕ ಕಂಪನಗಳು ನನ್ನನ್ನು ಹೊಸ ದಿಕ್ಕಿನೆಡೆಗೆ ಸಾಗುವಂತೆ ಮಾಡಿದೆ ಎಂದರಂತೆ. ಕೊಲ್ಲೂರು ಭೇಟಿ ನಂತರ ಇಳಯರಾಜ ಅವರ ನಡೆ ನುಡಿ ಅಷ್ಟೇ ಅಲ್ಲ ಅವರ ಸಂಗೀತಕ್ಕೂ ದೈವಿಕಳೆ ಬಂದು ಬಿಟ್ಟಿತು ಎಂದು ಸುಬ್ರಮಣಿಯಂ ಹೇಳಿದ್ದಾರೆ.

ಇಳಯರಾಜ ಹಿಂಬಾಲಿಸಿದ ರಜನಿಕಾಂತ್

ಇಳಯರಾಜ ಹಿಂಬಾಲಿಸಿದ ರಜನಿಕಾಂತ್

ಇಳಯರಾಜ ಅವರು ಬಿಳಿ ಪಂಚೆ, ಶರ್ಟ್ ಧರಿಸಿದಂತೆ ರಜನಿ ಕೂಡಾ ಶ್ವೇತ ವಸ್ತ್ರಧಾರಿಯಾಗಿರಲು ಇಷ್ಟಪಡುತ್ತಾರೆ. ಇಳಯರಾಜ ಅವರಲ್ಲಿ ಉಂಟಾದ ಬದಲಾವಣೆ ಕಂಡು ರಜನಿ ಕೂಡಾ ತಮ್ಮ ಚಟಗಳಿಗೆ ತಿಲಾಂಜಲಿ ಇತ್ತು. ಪಾತ್ರ ಬಯಸಿದರೆ ಮಾತ್ರ ಕುಡಿತ, ಸಿಗರೇಟ್ ಎನ್ನುವಷ್ಟರ ಮಟ್ಟಿಗೆ ಬದಲಾದರು.

ಕೊಲ್ಲೂರು ಅಮ್ಮನ ಅನುಗ್ರಹ ಪಡೆದ ತಾರೆಯರು

ಕೊಲ್ಲೂರು ಅಮ್ಮನ ಅನುಗ್ರಹ ಪಡೆದ ತಾರೆಯರು

ರೌಂಡ್ ಮೇಲೆ ರೌಂಡ್ ಗುಂಡು ಹಾಕುತ್ತಿದ್ದ ಇಬ್ಬರು ನಂತರದ ದಿನಗಳಲ್ಲಿ ಆಧಾತ್ಮ, ಸಂಗೀತದ ಬಗ್ಗೆ ಚರ್ಚಿಸಲು ಆರಂಭಿಸಿದಂತೆ. ಆಧಾತ್ಮದಲ್ಲಿ ರಜನಿಗಿದ್ದ ಆಸಕ್ತಿ ಇನ್ನಷ್ಟು ಹೆಚ್ಚಾಗಲು ಇದು ಕಾರಣವಾಯಿತಂತೆ. ಈಗ ಅವರು ಸರಸ್ವತಿ ಪುತ್ರ. ಅವರಿಗೆ ಸರಸ್ವತಿ ಸಾಕ್ಷಾತ್ಕಾರ ಆಗಿರುವ ಬಗ್ಗೆಯೂ ರಜನಿಕಾಂತ್ ಬೆಳಕು ಚೆಲ್ಲಿದ್ದಾರೆ. ಕೊಲ್ಲೂರು ಮುಕಾಂಬಿಕೆ ಹೇಗೆ ಕೇರಳ ಮೂಲದ ಸಂಗೀತಗಾರ ಯೇಸುದಾಸ್ ಅವರಿಗೆ ಅನುಗ್ರಹವಿತ್ತಂತೆ ಇಳಯರಾಜಾಗೂ ಅನುಗ್ರಹ ನೀಡಿರುವುದರಲ್ಲಿ ಸಂಶಯವೇ ಇಲ್ಲ ಎನ್ನಬಹುದು

English summary
Superstar Rajinikanth, recently revealed that he used to drink continuously till morning along with Maestro Ilayaraaja when they used to work together. Recollecting some of his cherished moments, the Lingaa actor also divulged few other interesting facts about the musical genius.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more