»   » ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ' ಟೀಸರ್ ಸೂಪರ್

ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ' ಟೀಸರ್ ಸೂಪರ್

Posted By:
Subscribe to Filmibeat Kannada

ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊಟ್ಟ ಮೊದಲ ಬಾರಿಗೆ ಒಂದಾಗಿರುವ ಚಿತ್ರ 'ಮೈತ್ರಿ'. ಇದೇ ಕಾರಣಕ್ಕೆ ಚಿತ್ರ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.

ಸದ್ದಿಲ್ಲದೆ ಶೂಟಿಂಗ್ ಮುಗಿಸಿರುವ 'ಮೈತ್ರಿ' ಚಿತ್ರದ ಕಥಾಹಂದರ ಏನು? ರಿಯಲ್ಲಾಗಿ ಕಾಣಿಸಿಕೊಳ್ಳುತ್ತಿರುವ ಪುನೀತ್ ತೆರೆಮೇಲೆ ಹೇಗೆ ಕಾಣ್ತಾರೆ? ಮೋಹನ್ ಲಾಲ್ ನಿರ್ವಹಿಸುತ್ತಿರುವ ಪಾತ್ರವೇನು? ಹೀಗೆ ಅನೇಕ ಕುತೂಹಲಕಾರಿ ಅಂಶಗಳಿಗೆ ಕಾರಣವಾಗಿದ್ದ 'ಮೈತ್ರಿ' ಚಿತ್ರದ ಟೀಸರ್ ಹೊರಬಂದಿದೆ.


Mythri Teaser

ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ 'ಮೈತ್ರಿ' ಚಿತ್ರದ ಫಸ್ಟ್ ಟೀಸರ್ ಮತ್ತಷ್ಟು ಕುತೂಹಲ ಕೆರಳಿಸಿರುವುದಂತೂ ಸತ್ಯ. ಮೊದಲ ನೋಟಕ್ಕೆ ಬಾಲಾಪರಾಧ ಮತ್ತು ಮಕ್ಕಳ ಹಿತರಕ್ಷಣೆ ಕುರಿತ ಚಿತ್ರ 'ಮೈತ್ರಿ' ಅನ್ನುವುದು ಖಾತ್ರಿ.


ಕೆಮಿಕಲ್ ಇಂಜಿನಿಯರ್ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ರೆ, ನಿಜಜೀವನದಲ್ಲಿ ಮಕ್ಕಳ ಶಿಕ್ಷಣ ಹಕ್ಕುಗಳ ಪರ ದನಿಯೆತ್ತಿದ್ದ ಪುನೀತ್ ರಾಜ್ ಕುಮಾರ್, 'ಮೈತ್ರಿ' ಚಿತ್ರದಲ್ಲಿ ಅದೇ ಪಾತ್ರ ನಿರ್ವಹಿಸಿರುವಂತೆ ಭಾಸವಾಗುತ್ತೆ.


Mythri Teaser2

ಪೊಲೀಸ್ ಆಫೀಸರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ ಮಿಂಚಿದ್ದಾರೆ. ಉಳಿದಂತೆ ಅರ್ಚನಾ, ಭಾವನಾ ಮೆನನ್ ಮತ್ತು ರವಿ ಕಾಳೆ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಳಯರಾಜ ಸಂಯೋಜಿಸಿರುವ ಸಂಗೀತ ಚಿತ್ರದ ಹೈಲೈಟ್. [ಮಲೆಯಾಳಂಗೂ ಹಬ್ಬಿದ ಪುನೀತ್-ಲಾಲ್ ಮೈತ್ರಿ]


Mythri Teaser3

ಈಗಾಗಲೇ ಕನ್ನಡದಲ್ಲಿ ಆಗೊಮ್ಮೆ ಈಗೊಮ್ಮೆ ಮಿಂಚಿರುವ ಮೋಹನ್ ಲಾಲ್, ಪೂರ್ಣ ಪ್ರಮಾಣದ ಕನ್ನಡ ನಾಯಕನಾಗಿ 'ಮೈತ್ರಿ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ ಮೋಹನ್ ಲಾಲ್, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ['ಸಿಪಾಯಿ ರಾಮು' ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್]


'ಜಟ್ಟ' ಚಿತ್ರದ ನಿರ್ದೇಶಕ ಗಿರಿರಾಜ್, 'ಮೈತ್ರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಚಾರ ಕೆಲಸಕ್ಕೆ ಈಗಷ್ಟೆ ಚಾಲನೆ ನೀಡಿರುವ ಗಿರಿರಾಜ್, ಸದ್ಯದಲ್ಲೇ 'ಮೈತ್ರಿ' ಚಿತ್ರವನ್ನ ತೆರೆಗೆ ತರುತ್ತಾರೆ. ಅಲ್ಲಿವರೆಗೂ ಟೀಸರ್ ನೋಡಿ, ಆನಂದಿಸಿ....(ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar and Malayalam Super Star Mohan Lal starrer 'Mythri' teaser is out. Mythri is directed by Giriraj of 'Jatta' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada