»   » ಸಾವಿರ ಚಿತ್ರಗಳ ಸರದಾರನಾದ ಇಳಯರಾಜ

ಸಾವಿರ ಚಿತ್ರಗಳ ಸರದಾರನಾದ ಇಳಯರಾಜ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  70ರ ದಶಕದಿಂದ ಇಲ್ಲಿಯವರೆಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಂಗೀತ ಧಾರೆ ಹರಿಸಿರುವ ಸಂಗೀತ ಜ್ಞಾನಿ ಇಳಯರಾಜ ಅವರು ಈಗ ತಮ್ಮ ವೃತ್ತಿ ಬದುಕಿನ 1000ನೇ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಬಾಲ ಅವರ ಚಿತ್ರಕ್ಕೆ ಇಳಯರಾಜ ಸ್ವರ ಸಂಯೋಜನೆಯಾಗುತ್ತಿದೆ.

  1000ನೇ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದೀರಲ್ಲ ಏನು ಅನ್ನಿಸುತ್ತದೆ ಎಂದರೆ ಮಗುವಿನ ಮುಗ್ಧ ನಗೆ ಚೆಲ್ಲುತ್ತಾ ತುಂಬಾ ಸಂತೋಷದ ಸಂಗತಿ ನನ್ನ ಕರ್ತವ್ಯ ಅಚ್ಚುಕಟ್ಟಾಗಿ ನಿಭಾಯಿಸಿ ಜನರಿಗೆ ಸಂತೋಷ ನೀಡುವುದೇ ನನ್ನ ಸಂಯೋಜನೆಯ ಮುಖ್ಯ ಉದ್ದೇಶ ಎಂದಿದ್ದಾರೆ. ತಾರೈ ತಾಪ್ಪಟ್ಟೈ ಎಂಬ ಚಿತ್ರಕ್ಕೆ ಇಳಯರಾಜ ಅವರು ಈಗ ರಾಗ ಹೊಸೆಯುತ್ತಿದ್ದಾರೆ.

  ಪ್ರಶಸ್ತಿ ವಿಜೇತ ನಿರ್ದೇಶಕ ಬಾಲ ಅವರ ಚಿತ್ರದಲ್ಲಿ ನಾಡೋಡಿಗಳ್ ಖ್ಯಾತಿಯ ಶಶಿಕುಮಾರ್ ಹಾಗೂ ಪೋಡಾ ಪೋಡಿ ಖ್ಯಾತಿಯ ವರಲಕ್ಷ್ಮಿ ಮುಖ್ಯಭೂಮಿಕೆಯಲ್ಲಿದ್ದಾರೆ. ಥೇಣಿ ಹಾಗೂ ಮದುರೈನಲ್ಲಿ ಚಿತ್ರದ ಶೂಟಿಂಗ್ ಸದ್ಯಕ್ಕೆ ಜಾರಿಯಲ್ಲಿದೆ. ತಮಿಳುನಾಡಿನ ಜಾನಪದ ಶೈಲಿಯ ಕರಗಾಟ್ಟಂ ನೃತ್ಯಗಾರ್ತಿಯಾಗಿ ವರಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ಶಶಿಕುಮಾರ್ ಅವರು ಚಿಗುರು ಮೀಸೆ ಹೈದನಾಗಿ ನಾದಸ್ವರ ಬಾರಿಸಲಿದ್ದಾರೆ.

  Ilaiyaraaja Is Busy Scoring Music For His 1000th Film

  ಬಾಲ ಹಾಗೂ ಇಳಯರಾಜ ಜೋಡಿ ಈಗಗಾಲೇ ಉತ್ತಮ ಸಂಗೀಮಯ ಚಿತ್ರಗಳ ಆಲ್ಬಂಗಳನ್ನು ನೀಡಿದೆ. ಸೇತು, ಪಿತಾಮಗನ್, ನಾನ್ ಕಡವುಳ್ ಚಿತ್ರಗಳ ಗೀತ ಸಾಹಿತ್ಯ, ಸ್ವರ ಸಂಯೋಜನೆ ಅಲ್ಲದೆ ಚಿತ್ರದ ಹಿನ್ನೆಲೆ ಸಂಗೀತ ಕೂಡಾ ಜನ ಮೆಚ್ಚುಗೆ ಗಳಿಸಿತ್ತು. ಸುಮಾರು ಐದು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿದ್ದು, ಅದರಲ್ಲೂ ಈ ಚಿತ್ರ ಇಳಯರಾಜ ಅವರ 1000ನೇ ಚಿತ್ರವಾಗಿರುವುದು ಅಭಿಮಾನಿಗಳ ಕಾತುರ ಹೆಚ್ಚಿಸಿದೆ.

  ಭಾರತೀಯ ಸಂಗೀತಕ್ಕೆ ಹೊಸ ಆಯಾಮ ನೀಡಿರುವ ಇಳಯರಾಜ ಅವರ ಚಿತ್ರ ಸಂಗೀತ ಹಲವು ಬಾರಿ ಜಗತ್ತಿನ ಗಮನ ಸೆಳೆದಿತ್ತು. ದಳಪತಿ ಚಿತ್ರದ ಹಾಡು 1991ರಲ್ಲಿ ವಿಶ್ವದ ಜನಪ್ರಿಯ ಹಾಡುಗಳ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.

  ಬುಡಾಪೆಸ್ಟ್, ಲಂಡನ್ ನಲ್ಲಿ ಸಿಂಫೋನಿ ಆರ್ಕೆಸ್ಟ್ರಾ ಸಂಯೋಜನೆ ಮಾಡಿದ ಪ್ರಪ್ರಥಮ ದಕ್ಷಿಣ ಭಾರತೀಯ ಸಂಗೀತಗಾರ ಎಂಬ ಕೀರ್ತಿ ಇಳಯರಾಜ ಅವರಿಗೆ ಸಲ್ಲುತ್ತದೆ. ಮಕ್ಕಳಾದ ಯುವನ್ ಶಂಕರ್ ರಾಜ, ಕಾರ್ತಿಕ್ ರಾಜ, ಮಗಳು ಭವತಾರಿಣಿ ಎಲ್ಲರೂ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ತೆರೆ ಕಂಡ ಪ್ರಕಾಶ್ ರೈ ನಿರ್ದೇಶನದ ಒಗ್ಗರಣೆ ಚಿತ್ರದಲ್ಲೂ ಮೆಲುಕು ಹಾಕುವಂಥ ಟ್ಯೂನ್ ಗಳನ್ನು ಇಳಯರಾಜ ನೀಡಿದ್ದಾರೆ.

  English summary
  Celebrated music composer Ilaiyaraaja never runs out of gas while composing his tunes. Working with the same childlike enthusiasm, the musical genius is busy scoring music for his 1000th film, Tharai Thappattai directed by Bala.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more