»   » ಪ್ರಪಂಚದ ಮೊದಲ ಉಲ್ಟಾ ಹಾಡು ಇನ್ನೂ ನೋಡಿಲ್ವಾ!

ಪ್ರಪಂಚದ ಮೊದಲ ಉಲ್ಟಾ ಹಾಡು ಇನ್ನೂ ನೋಡಿಲ್ವಾ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಖತ್ ಕುತೂಹಲ ಮೂಡಿಸಿರುವ ಚಿತ್ರ 'ಆರಂಭ'. ಈ ಚಿತ್ರದ ಟ್ರೇಲರ್ ಗಳು ಈಗಾಗಲೆ ಯೂಟ್ಯೂಬ್ ನಲ್ಲಿ ಸಾಕಷ್ಟು ಹವಾ ಎಬ್ಬಿಸಿವೆ. ಇದೀಗ ಈ ಚಿತ್ರ ಇನ್ನೊಂದು ದಾಖಲೆ ಮಾಡಲು ಹೊರಟಿದೆ.

ಎಸ್ ಅಭಿ ಹನಕೆರೆ ನಿರ್ದೇಶನದ ಆರಂಭ ಚಿತ್ರದ "ಶಾಲೆಗೆ ಹೋಗೋದಿಲ್ಲ..." ವೀಡಿಯೋ ಹಾಡು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ನಾಮಿನೇಟ್ ಆಗಿದೆ. ಹೌದು, ಇದು ಪ್ರಪಂಚದ ಮೊದಲ ಉಲ್ಟಾ ಹಾಡು ಎನ್ನುವ ಹೆಮ್ಮೆಗೆ ಪಾತ್ರವಾಗಲಿದೆ. ['ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?]

ಸದ್ಯ ಹಾಡು ಲಿಮ್ಕಾ ತಂಡದವರಿಂದ ಪರಿಶೀಲನೆಯಲ್ಲಿದ್ದು ಶೀಘ್ರದಲ್ಲೇ ದಾಖಲೆ ಪುಟಕ್ಕೆ ಸೇರಲಿದೆ. ಈ ಹಾಡನ್ನು ತಿರುಗು-ಮುರುಗು ಚಿತ್ರೀಕರಿಸಿ, ಸಂಕಲನ ಮಾಡಿ ಯೂಟ್ಯೂಬಿನಲ್ಲಿ ಪ್ರಕಟಿಸಲಾಗಿತ್ತು. ಜನರ ಮೆಚ್ಚುಗೆಗೆ ಪಾತ್ರವಾಗಿ ಮಾಧ್ಯಮ ಮಿತ್ರರಿಂದಲೂ ಗುರುತಿಸಲ್ಪಟ್ಟಿತ್ತು. ಚಿತ್ರದ ಇತರೆ ಹಾಡುಗಳು ಮತ್ತು ಟ್ರೇಲರ್ ಈಗಾಗಲೆ ಭಾರೀ ಸದ್ದು ಮಾಡುತ್ತಿವೆ.

ಗುರುಕಿರಣ್ ಸಂಗೀತದ, ಕವಿರಾಜ್ ಬರೆದ ಹಾಡಿಗೆ, ರಿತೀಷ ಪದ್ಮನಾಭ ದನಿಯಾಗಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ನಿನ ಎಲ್ಲಾ ಹಂತಗಳನ್ನು ಪೂರೈಸಿದ್ದು, ಸೆನ್ಸಾರಿಗೆ ಸಿದ್ಧವಾಗಿದೆ. ಶರ ಪ್ರೊಡಕ್ಶನ್ ಬ್ಯಾನರ್ ನಡಿಯಲ್ಲಿ ಡಿ ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿರುವ ಚಿತ್ರವಿದು.

ಆರಂಭ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಿಥುನ್ ಪ್ರಕಾಶ್, ಅಭಿರಾಮಿ, ಅಭಿರಾಜ್, ರಸಗವಳ ನಾರಾಯಣ, ಸತೀಶ್, ಜೀತು ಚಂದ್ರ, ಬಳ್ಳಾರಿ ರಾಘವೇಂದ್ರ, ನಾಟ್ಯರಂಗ ಇನ್ನೂ ಮುಂತಾದವರಿದ್ದಾರೆ. ಈ ಹಾಡನ್ನು ನೋಡ್ತಾ ನೋಡ್ತಾ ನೀವು ಉಲ್ಟಾ ಆಗಬೇಡಿ, ನಿಮ್ಮ ಮಾನೀಟರನ್ನು ಉಲ್ಟಾ ಮಾಡಬೇಡಿ ಎಂಬುದು ನಮ್ಮ ಕಿವಿಮಾತು. (ಫಿಲ್ಮಿಬೀಟ್ ಕನ್ನಡ)

English summary
Presenting Swarga Nisarga Song, World's First reversal (Ulta) Song from Kannada Movie Aarambha. The song nominated for Limca Book of Records. The movie directed by S Abhi Hanakere and produced by D Ganesh, V Nagenahalli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada