»   » 'ಅಪ್ಪು ಪಪ್ಪು' ಚಿತ್ರದಲ್ಲಿ ಹಾಡಲಿದ್ದಾರೆ ಬಿಗ್ ಬಿ

'ಅಪ್ಪು ಪಪ್ಪು' ಚಿತ್ರದಲ್ಲಿ ಹಾಡಲಿದ್ದಾರೆ ಬಿಗ್ ಬಿ

Subscribe to Filmibeat Kannada

ಬಿಗ್ ಬಿ ಅಮಿತಾಬ್ ಬಚ್ಚನ್ ಕನ್ನಡ ಚಿತ್ರವೊಂದರಲ್ಲಿ ಹಾಡೊಂದನ್ನು ಹಾಡಲಿದ್ದಾರೆ. ಸುದೀರ್ಘ ಎರಡು ಸುತ್ತಿನ ಮಾತುಕತೆ ಬಳಿಕ 'ಅಪ್ಪು ಪಪ್ಪು' ಚಿತ್ರದಲ್ಲಿ ಹಾಡೊಂದನ್ನು ಬಿಗ್ ಬಿ ಹಾಡಲು ಒಪ್ಪಿರುವುದಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದ್ದಾರೆ. ಈ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ಅಮಿತಾಬ್ ಹಾಡಿದ ಮೊಟ್ಟ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ 'ಅಪ್ಪು ಪಪ್ಪು' ಪಾತ್ರವಾಗಲಿದೆ.

ಚಿತ್ರದ ಟೈಟಲ್ ಹೇಳುವ ಹಾಗೆ ಇದು ಒಬ್ಬ ಬಾಲಕ ಹಾಗೂ ಪ್ರಾಣಿಯೊಂದರ ಕಥೆ. ನಿರ್ಮಾಪಕ ಜಗದೀಶರ ಪುತ್ರ ಲಿಟಲ್ ಸ್ಟಾರ್ ಸ್ನೇಹಿತನ ಜೊತೆ ಒರಾಂಗುಟಾನ್ (ನರವಾನರ) ನಟಿಸುತ್ತಿದೆ. ಮುಂಬೈನಲ್ಲಿ ನಡೆದ ಮಾತುಕತೆಯಲ್ಲಿ 'ಅಪ್ಪು ಪಪ್ಪು' ಚಿತ್ರದ ಬಗ್ಗೆ ಅಮಿತಾಬ್ ಕುತೂಹಲ ವ್ಯಕ್ತಪಡಿಸಿರುವುದಾಗಿ ಹಂಸಲೇಖ ತಿಳಿಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಬದಲಾಗುತ್ತಿರುವ ಮನಷ್ಯನ ಸ್ವಭಾಗಳನ್ನು ಗಮನದಲ್ಲಿಟ್ಟುಕೊಂಡು ಮಾನವೀಯತೆ ಸಾರುವ ಹಾಡೊಂದನ್ನು ಹಂಸಲೇಖ ರಚಿಸಿದ್ದಾರಂತೆ. 'ಅಪ್ಪು ಪಪ್ಪು' ಚಿತ್ರದಲ್ಲಿ ಶೇ.90ರಷ್ಟು ಭಾಗ ಒರಾಂಗುಟಾನ್ ಮತ್ತು ಮಾಸ್ಟರ್ ಸ್ನೇಹಿತ್ ಸನ್ನಿವೇಶಗಳೇ ತುಂಬಿವೆಯಂತೆ.

ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ 'ಅಮೃತ ಧಾರೆ' ಚಿತ್ರದ ಅತಿಥಿ ಪಾತ್ರದಲ್ಲಿ ಅಮಿತಾಬ್ ಕಾಣಿಸಿಕೊಂಡಿದ್ದರು. ಇದೀಗ ಕನ್ನಡಕ್ಕೆ ಅಮಿತಾಬ್ ಹಿನ್ನೆಲೆ ಗಾಯಕನಾಗಿ ಆಗಮಿಸುತ್ತಿರುವುದು ಚಿತ್ರೋದ್ಯಮದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ನಿರ್ದೇಶಕ ಆರ್. ಅನಂತರಾಜು ಸಂಗಮದಲ್ಲಿ ಈಗಾಗಲೇ "ಮಸ್ತ್ ಮಜಾಮಾಡಿ" ಎಂಬ ಯಶಸ್ವೀ ಚಿತ್ರ ಹೊರ ಬಂದಿತ್ತು. ಜಿಂಕೆ ಮರಿ' ರೇಖಾ ಚಿತ್ರದ ನಾಯಕಿ. ಕೋಮಲ್ ಕುಮಾರ್ ಮತ್ತು ರಂಗಾಯಣ ರಘು ಉಳಿದ ಪಾತ್ರವರ್ಗದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada