»   »  ಜಾಜಿ ಮಲ್ಲಿಗೆ, ಗೌತಮ್ ಈ ವಾರ ತೆರೆಗೆ

ಜಾಜಿ ಮಲ್ಲಿಗೆ, ಗೌತಮ್ ಈ ವಾರ ತೆರೆಗೆ

Subscribe to Filmibeat Kannada
Ajay and Gauri Munjal
ಜಾಜಿ ಮಲ್ಲಿಗೆ: ಜೆ.ಎನ್. ಫಿಲಂಸ್ ಲಾಂಛನದಲ್ಲಿ ಅಣಜಿ ನಾಗರಾಜ್ ಹಾಗೂ ವಿತರಕ ಜಯಣ್ಣ ಸೇರಿ ನಿರ್ಮಿಸಿರುವ ಜಾಜಿ ಮಲ್ಲಿಗೆ ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ತಾಜ್‌ಮಹಲ್ ನಂತರ ಅಜಯ್ ಅಭಿನಯಿಸಿರುವ ಈ ಚಿತ್ರಕ್ಕೆ ತುಂಬಾ ನಿರೀಕ್ಷೆ ಇದ್ದು, ಆರ್. ಅನಂತರಾಜು ಅವರು ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ತಮಿಳಿನ ಯಶಸ್ವಿ ಚಿತ್ರ ದೇವತೈ ಕಂಡೇನ್‌ನ ರೀಮೇಕ್ ಆದ ಈ ಚಿತ್ರದಲ್ಲಿ ಡಾ.ಜಯಮಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಆರ್.ಸೀನು ಅವರ ಛಾಯಾಗ್ರಹಣ, ಸಾಧು ಕೋಕಿಲಾರ ಸಂಗೀತ ಸಂಯೋಜನೆ, ರಾಮ್‌ನಾರಾಯಣ್‌ರ ಸಾಹಿತ್ಯ, ಪಳನಿರಾಜ್‌ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ಸುರಿಯುವ ಮಳೆ, ಹರಿವ ಹೊಳೆ ಸಿಗದು ನೋಡು ಯಾರ ಕೈಗೂ ಎಂಬ ಅಡಿಬರಹದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಗೌರಿ ಮಂಜಾಲ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಜಯ್ ಟೀ ಮಾರುವ ಹುಡುಗನಾಗಿದ್ದರೆ, ಗೌರಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕೋಮಲ್, ಬುಲೆಟ್ ಪ್ರಕಾಶ್, ನಾಗಶೇಖರ್, ಮುನಿ ಉಳಿದ ತಾರಾಗಣದಲ್ಲಿದ್ದಾರೆ.

ಗೌತಮ್: ಸಿನರ್ಜಿ ಇಮೇಜಸ್ ಸಂಸ್ಥೆಯ ಪ್ರಥಮ ಕಾಣಿಕೆಯಾಗಿ ಮಾಲಿನಿ ಸುಬ್ರಹ್ಮಣ್ಯಂ ಅವರು ನಿರ್ಮಿಸಿರುವ ಗೌತಮ್ ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಸಾಂಸಾರಿಕ ಚಿತ್ರವನ್ನು ಹಿರಿಯ ನಟ ಆರ್.ಎನ್.ಆರ್. ಮೊಮ್ಮಗ ಕೆ.ರಾಜೀವ್ ಪ್ರಸಾದ್ ನಿರ್ದೇಶಿಸಿದ್ದಾರೆ. ಸುರೇಶ್ ಕೃಷ್ಣರ ಜೊತೆ ಸಹನಿರ್ದೇಶಕರಾಗಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕೇವಲ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮ್ ಈ ಚಿತ್ರದಲ್ಲಿ ತುಂಬಿದ ಕುಟುಂಬವೊಂದರ ಸದಸ್ಯನಾಗಿ ಅಭಿನಯಿಸುತ್ತಿದ್ದಾರೆ. ಸೋಮಾರಿಯಾಗಿ ಎಲ್ಲರಿಂದಲೂ ನಿಂದನೆಗೊಳಗಾಗಿ ಕೊನೆಯಲ್ಲಿ ದೊಡ್ಡದೊಂದು ಸಾಧನೆ ಮಾಡುವ ಯುವಕನ ಪಾತ್ರ ಪ್ರೇಮ್‌ನದು. ನಟಿ ಸಾರಾ ಆಲಂಬರ ನಾಯಕಿಯಾಗಿದ್ದು, ಹೆಸರಾಂತ ತಮಿಳು ನಿರ್ದೇಶಕ ಸುರೇಶ್ ಕೃಷ್ಣ ಅವರ ಕಥೆ-ಚಿತ್ರಕಥೆ, ಗುರುಕಿರಣ್ ಅವರ ಸಂಗೀತ ಸಂಯೋಜನೆ, ಎಸ್.ಆರ್. ಸುಧಾಕರ್‌ರವರ ಛಾಯಾಗ್ರಹಣ ಕೆಲಸ ಈ ಚಿತ್ರಕ್ಕಿದೆ.

ನಿರ್ಮಾಪಕರ ಪರವಾಗಿ ಇಡೀ ಚಿತ್ರದ ಜವಾಬ್ದಾರಿಯನ್ನು ಸೂರಪ್ಪ ಬಾಬು ನಿರ್ವಹಿಸಿದ್ದಾರೆ. ಅನಂತ್‌ನಾಗ್, ಸುಧಾರಾಣಿ, ಚಂದ್ರಶೇಖರ್, ಕೋಕಿಲಾ ಮೋಹನ್, ವಿನಯಾ ಪ್ರಸಾದ್, ರಮೇಶ್ ಭಟ್, ಕಿಶೋರಿ ಬಲ್ಲಾಳ್ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಾಯಕನಾಗಿ ಬದಲಾದ ನಾಯಕ ಅನಿರುದ್ಧ್!
ನೆನಪಿರಲಿ ಪ್ರೇಮ್ ರ ಗೌತಮ್ ಚಿತ್ರದ ಟ್ರೈಲರ್
ಗೌತಮ್ ಎಂಬ ಹಳೆಯ ಸರುಕಿನಲ್ಲಿ ಪ್ರೇಮ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada