For Quick Alerts
  ALLOW NOTIFICATIONS  
  For Daily Alerts

  ಕರುನಾಡ ಕರಾವಳಿಯಲ್ಲಿ 'ಪಂಚರಂಗಿ'

  By Rajendra
  |

  ಕನ್ನಡ ಚಿತ್ರರಂಗದಲ್ಲಿ ದಾಖಲೆಯ 'ಮುಂಗಾರು ಮಳೆ' ಸುರಿಸಿ, ಯಶಸ್ಸಿನ 'ಗಾಳಿಪಟ' ಹಾರಿಸಿ 'ಮನಸಾರೆ' ಚಿತ್ರದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ಯೋಗರಾಜ್‌ಭಟ್ ನಿರ್ದೇಶನದ ಚಿತ್ರ 'ಪಂಚರಂಗಿ'. ಕಳೆದವಾರದಿಂದ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಈಗ ಕರಾವಳಿ ತೀರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

  ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ನಿಧಿಸುಬ್ಬಯ್ಯ.ಯೋಗರಾಜ್ ಮೂವೀಸ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಯೋಗರಾಜ್‌ಭಟ್ ಸಂಸ್ಥೆಯ ಪ್ರಥಮ ಪ್ರಯತ್ನವಾಗಿ 'ಪಂಚರಂಗಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಂ.ಕೆ.ಸುಬ್ರಹ್ಮಣ್ಯ ಅವರು ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.ಪವನ್‌ಕುಮಾರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ನಿರ್ದೆಶಕರು ಸ್ವತಃ ಸಂಭಾಷಣೆ ಬರೆದಿದ್ದಾರೆ.

  ಮನೋಮೂರ್ತಿ ಸಂಗೀತ, ತ್ಯಾಗರಾಜನ್ ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ ಮತ್ತು ಹರ್ಷ ನೃತ್ಯನಿರ್ದೇಶನವಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಅನಂತನಾಗ್, ರಾಜುತಾಳಿಕೋಟೆ, ಪವನ್‌ಕುಮಾರ್, ಸುಂದರ್‌ರಾಜ್, ಪದ್ಮಜಾರಾವ್, ಸುಧಾಬೆಳವಾಡಿ, ರಮ್ಯಾಬರ‍್ಣ, ನಾಗೇಂದ್ರ ಶಾ, ಸತೀಶ್, ಸೌಮ್ಯ, ನಾಗರಾಜ್ ಅರಸು, ಸುಧಾಕರ್(ರಾಕ್‌ಲೈನ್ ಪ್ರೊಡಕ್ಷನ್ಸ್) ಮುಂತಾದವರಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X