»   » ಬಾಡಿಗೆ ಮನೆಗೆ ಪಾರ್ವತಮ್ಮ ರಾಜ್ ಕುಮಾರ್!

ಬಾಡಿಗೆ ಮನೆಗೆ ಪಾರ್ವತಮ್ಮ ರಾಜ್ ಕುಮಾರ್!

Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರು ಬಾಳಿ ಬದುಕಿದ ಸದಾಶಿವನಗರದ ಮನೆಯನ್ನು ಕೆಡವಲಾಗಿದೆ. ತಮ್ಮ ಧರ್ಮಪತ್ನಿ ಪಾರ್ವತಮ್ಮ ಹಾಗೂ ಮಕ್ಕಳೊಂದಿಗೆ ರಾಜ್ ಕುಮಾರ್ ಇದೇ ಮನೆಯಲ್ಲಿ ವಾಸಿಸುತ್ತಿದ್ದರು. ಇದೀಗ ಈ ಮನೆಯನ್ನು ನವೀಕರಣಗೊಳಿಸಲು ಕೆಡವಲಾಗಿದೆ.

ರಾಜ್ ಕುಮಾರ್ ಮಕ್ಕಳು ಈ ಮನೆಯನ್ನು ನಾಲ್ಕು ಅಂತಸ್ತಿನಲ್ಲಿ ಪುನರ್ನಿಸುತ್ತಿದ್ದಾರೆ. ಅವರ ಕುಟುಂಬ ಸಹ ವಿಸ್ತರಿಸಿದೆ. ಕುಟುಂಬ ದೊಡ್ಡದಾಗಿರುವ ಕಾರಣ ವಾಸಿಸಲು ಈಗಿರುವ ಮನೆ ಇಕ್ಕಟ್ಟಾಗುತ್ತದೆ. ಹಾಗಾಗಿ ಮನೆಯನ್ನು ನಾಲ್ಕು ಅಂತಸ್ತಿಗೆ ಏರಿಸಲಾಗುತ್ತಿದೆ ಎಂಬುದು ರಾಜ್ ಕುಟುಂಬದವರ ವಿವರಣೆ.

ಸದಾಶಿವನಗರದ ಈ ಮನೆಯಲ್ಲಿ ಪಾರ್ವತಮ್ಮ ಅವರೊಂದಿಗೆ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಹ ವಾಸಿಸುತ್ತಿದ್ದಾರೆ. ಇದೀಗ ಮನೆಯನ್ನು ನವೀಕರಿಸುತ್ತಿರುವ ಕಾರಣ ಇವರೆಲ್ಲಾ ಅಶೋಕ್ ಖೇಣಿ ಅವರ ಸಹೋದರನ ಮನೆಗೆ ಸ್ಥಳಾಂತವಾಗಿದ್ದಾರೆ.

ಗಂಗೇನಹಳ್ಳಿಯಲ್ಲಿರುವ ಈ ಮನೆಗೆ ಪಾರ್ವತಮ್ಮ ಕುಟುಂಬ ಇಂದು (ಸೆಪ್ಟೆಂಬರ್ 1) ಗೃಹ ಪ್ರವೇಶ ಮಾಡಿತು. ಏಳು ಕೊಠಡಿಗಳನ್ನೊಂದಿರುವ ಈ ಮನೆಗೆ ತಿಂಗಳಿಗೆ ರು.1.3 ಲಕ್ಷ ಬಾಡಿಗೆ ಕಟ್ಟಬೇಕು. ಒಟ್ಟಿನಲ್ಲಿ ಸದಾಶಿವನಗರದಿಂದ ಗಂಗೇನಹಳ್ಳಿಗೆ ಪಾರ್ವತಮ್ಮ ಕುಟುಂಬ ಸ್ಥಳಾಂತರವಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada