»   »  ಯೋಗೀಶ್ ಯಕ್ಷ ಚಿತ್ರಕ್ಕೆ ಪ್ರಣೀತಾ ನಾಯಕಿ

ಯೋಗೀಶ್ ಯಕ್ಷ ಚಿತ್ರಕ್ಕೆ ಪ್ರಣೀತಾ ನಾಯಕಿ

Subscribe to Filmibeat Kannada

ಸೆಟ್ಟೇರುವುದಕ್ಕೂ ಮುನ್ನವೇ ಸುದ್ದಿ ಮಾಡುತ್ತಿರುವ ಚಿತ್ರ 'ಯಕ್ಷ'. ರಮೇಶ್ ಆರ್ ಭಾಗವತ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಿಂದಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ಆಯ್ಕೆಯಾಗಿರುವುದು ಕನ್ನಡ ಚಿತ್ರೋದ್ಯಮದಲ್ಲಿ ಸಖತ್ ಸುದ್ದಿಮಾಡಿದೆ. ಹೊಸ ತಿರುವಿನ ನಿರೀಕ್ಷೆಯಲ್ಲಿ ಈ ಚಿತ್ರದ ನಾಯಕ ನಟ ಯೋಗೀಶ್ ಇದ್ದಾರೆ.

ಯಕ್ಷ ಚಿತ್ರದ ಹೊಚ್ಚ ಹೊಸ ಸುದ್ದಿಯೆಂದರೆ, ಪ್ರಣೀತಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದು. ಈಕೆ ಈಗಾಗಲೇ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಪ್ರಣೀತಾ ಬಗ್ಗೆ ಯೋಗೀಶ್ ಗೆ ವಿಶೇಷ ಅಕ್ಕರೆ, ಅಭಿಮಾನ. ಹಾಗಾಗಿ ಆಕೆಯನ್ನೇ ಈ ಚಿತ್ರಕ್ಕೆ ನಾಯಕಿಯನ್ನಾಗಿಸುವಲ್ಲಿ ಯೋಗೀಶ್ ಕೈವಾಡ ಇದೆ ಎನ್ನಲಾಗಿದೆ.

ಆದರೆ ಈ ಮಾತನ್ನು ಇನ್ನೂ ಮದುವೆ ವಯಸ್ಸು ಆಗದ ಯೋಗೀಶ್ ಮತ್ತವರ ಅವರ ತಂದೆ ಟಿ ಪಿ ಸಿದ್ಧರಾಜು ಅಲ್ಲಗಳೆದಿದ್ದಾರೆ. ಹಾಗೆಯೇ ಯೋಗೀಶ್ ಕನ್ನಡ ಚಿತ್ರರಂಗದ ಇಬ್ಬರು ನಟಿಯರಿಗೆ ಮನಸು ಕೊಟ್ಟಿದ್ದು ಒಬ್ಬರನ್ನು ಮದುವೆಯಾಗುವ ಸಿದ್ಧತೆಯಲ್ಲಿಯೂ ಇದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಈ ರೀತಿಯ ವದಂತಿಗಳ ಬಗ್ಗೆ ಅವರಿಗೆ ಬೇಜಾರು ಆಗಿದೆಯಂತೆ.

ಒಟ್ಟಿನಲ್ಲಿ ಯಕ್ಷ ಚಿತ್ರದ ಮೂಲಕ ಯೋಗೀಶ್ ಸ್ವಮೇಕ್ ಚಿತ್ರ ಕೈಗೆತ್ತಿಕೊಂಡಿರುವುದು ಉದ್ಯಮದಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಟಿ ಪಿ ಸಿದ್ಧರಾಜು ಸಹ ಯಕ್ಷ ಚಿತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ.ತಮ್ಮ ಚಿತ್ರಕ್ಕೆ ನಾನಾ ಪಾಟೇಕರ್ ಅವರನ್ನು ಕರೆತರುವ ಸಾಹಸಕ್ಕೆ ಕೈಹಾಕಿದ್ದು ಈ ಕಾರಣಕ್ಕೆ ಎನ್ನುತ್ತವೆ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...