»   » ಸಾರಥಿ ಚಿತ್ರಪ್ರದರ್ಶನದ ವೇಳೆ ಪ್ರೇಕ್ಷಕರಿಂದ ದಾಂಧಲೆ

ಸಾರಥಿ ಚಿತ್ರಪ್ರದರ್ಶನದ ವೇಳೆ ಪ್ರೇಕ್ಷಕರಿಂದ ದಾಂಧಲೆ

Posted By:
Subscribe to Filmibeat Kannada
Darshan
ದರ್ಶನ್ ಅಭಿನಯದ ಸಾರಥಿ ಚಿತ್ರ ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಂಡ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಪ್ರೇಕ್ಷಕರು ಚಿತ್ರಮಂದಿರದ ಕಿಟಕಿ ಮತ್ತು ಬಾಗಿಲು ಪುಡಿಗೈದಿದ್ದಾರೆ.

ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಇಂದು ( ಜ 1) ಮೊದಲ ಪ್ರದರ್ಶನದ ವೇಳೆ ಈ ಘಟನೆ ಸಂಭವಿಸಿದೆ. ಸಂಜೆ ಆರು ಗಂಟೆಗೆ ಶುರುವಾದ ಪ್ರದರ್ಶನ 40 ನಿಮಿಷದ ನಂತರ ತಾಂತ್ರಿಕ ದೋಷ ಕಂಡ ಹಿನ್ನಲೆಯಲ್ಲಿ ಪ್ರದರ್ಶನ ರದ್ದು ಗೊಳಿಸಲಾಯಿತು.

ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಚಿತ್ರಮಂದಿರದಲ್ಲಿ ದಾಂಧಲೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಶತದಿನ ಸಮೀಪಿಸುತ್ತಿರುವ ಸಾರಥಿ ಚಿತ್ರ ಪುಷ್ಪಾಂಜಲಿ ಚಿತ್ರಮಂದಿರಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿತ್ತು.

English summary
Sartathi movie screening in Davanagere cancelled due to technical problem. Audience went rampage. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada