»   » ಬಾಲಿವುಡ್ ಅಂಗಳದಲ್ಲಿ ಲಿಯಾಂಡರ್ ಪೇಸ್

ಬಾಲಿವುಡ್ ಅಂಗಳದಲ್ಲಿ ಲಿಯಾಂಡರ್ ಪೇಸ್

Posted By:
Subscribe to Filmibeat Kannada

ಟೆನಿಸ್ ಕ್ರೀಡಾಪಟು ಲಿಯಾಂಡರ್ ಪೇಸ್ ಬಾಲಿವುಡ್ ಅಂಗಳಕ್ಕೆ ಅಡಿಯಿಡಲು ಸಜ್ಜಾಗಿದ್ದಾರೆ. ಈಗಾಗಲೇ ಪೇಸ್ ಬಾಲಿವುಡ್ ಚಿತ್ರವೊಂದರ ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಪೇಸ್ ನಿಕಟವರ್ತಿಯಾದ ಬಂಗಾಲ ಟೆನಿಸ್ ಅಸೋಸಿಯೇಶನ್ ಕಾರ್ಯದರ್ಶಿ ಹಿರನ್ ಮೋಯ್ ಚಟರ್ಜಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಟೆನಿಸ್ ನಿಂದ ಪೇಸ್ ನಿವೃತ್ತಿಯಾದ ಬಳಿಕ ಬಾಲಿವುಡ್ ನಲ್ಲಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಚಟರ್ಜಿ ತಿಳಿಸಿದ್ದಾರೆ. ಇದೀಗ ಪೇಸ್ ನಾಯಕನಟನಾಗಿ ಅಭಿಯಿಸುತ್ತಿರುವ ಚಿತ್ರ ಕೋಲ್ಕತ್ತಾದಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಸಲಿದೆ. ಪೇಸ್ ನಟಿಸುತ್ತಿರುವ ಚಿತ್ರದ ಕುಲ ಗೋತ್ರಗಳು ತಿಳಿಸಲು ನಿರಾಕರಿಸಿದ್ದಾರೆ.

ಮಾಜಿ ಹಾಕಿ ಆಟಗಾರರಾದ ಪೇಸ್ ಅವರ ತಂದೆ ವೆಸ್ ಪೇಸ್ ಸಹ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗಷ್ಟೆ ಅವರು ಕಾರಾ ಬ್ಲ್ಯಾಕ್ ಜೊತೆ ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್ ನಲ್ಲಿ ಗೆಲ್ಲುವ ಮೂಲಕ 11 ಗ್ರ್ಯಾನ್ ಸ್ಲಾಮ್ ಗೆದ್ದ ಮಹೇಶ್ ಭೂಪತಿ ಸಾಧನೆಯನ್ನು ಪೇಸ್ ಸರಿಗಟ್ಟಿದ್ದರು. ಇದುವರೆಗೂ ಐದು ಮಿಕ್ಸ್ ಡ್ ಡಬಲ್ಸ್ ಜೊತೆ ಆರು ಡಬಲ್ಸ್ ಪ್ರಶಸ್ತಿಗಳನ್ನು ಪೇಸ್ ಗೆದ್ದಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada