»   » ಬೇ ಏರಿಯಾದಲ್ಲಿ 'ಮಳೆಯಲಿ ಜೊತೆಯಲಿ'

ಬೇ ಏರಿಯಾದಲ್ಲಿ 'ಮಳೆಯಲಿ ಜೊತೆಯಲಿ'

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದ ಹಿಟ್ ಚಿತ್ರ 'ಮಳೆಯಲಿ ಜೊತೆಯಲಿ' ಅಮೆರಿಕಾದಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ. ಕಸ್ತೂರಿ ಮಿಡಿಯಾ ಕನ್ನಡ ಪಿಕ್ಚರ್ ಕ್ಲಬ್ ಸಹಯೋಗದೊಂದಿಗೆ ಉತ್ತರ ಕ್ಯಾಲಿಫೋರ್ನಿಯಾ ದ ಬೇ ಪ್ರಾಂತ್ಯದಲ್ಲಿ ಫೆಬ್ರವರಿ 5ರಿಂದ 7ರ ವರೆಗೆ ಚಿತ್ರ ಪ್ರದರ್ಶನ ಗೊಳ್ಳಲಿದೆ.

ವಿದೇಶಗಳಲ್ಲಿ ಗಣೇಶ್ ಚಿತ್ರಗಳನ್ನು ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈ ವಿಷಯವನ್ನು ದೃಷ್ಟಿಯಲ್ಲಿಟ್ಟುಕೊಂಡು 'ಮಳೆಯಲಿ ಜೊತೆಯಲಿ' ಚಿತ್ರವನ್ನು ಕಸ್ತೂರಿ ಮಿಡಿಯಾ ಕನ್ನಡ ಪಿಕ್ಚರ್ ಕ್ಲಬ್ ಉತ್ತ್ತರ ಕ್ಯಾಲಿಫೋರ್ನಿಯಾದ ಬೇ ಪ್ರಾಂತ್ಯದಲ್ಲಿ ಬಿಡುಗಡೆ ಮಾಡುತ್ತಿದೆ.

ಮಳೆಯಲಿ ಜೊತೆಯಲಿ ಚಿತ್ರ ಈಗಾಗಲೇ ಆಸ್ಟ್ರೇಲಿಯಾ, ಸಿಂಗಪುರ, ನ್ಯೂಜಿಲ್ಯಾಂಡ್, ಜರ್ಮನಿ, ಯುಕೆ, ಹಾಂಗ್ ಕಾಂಗ್, ದುಬೈ, ಹಾಲೆಂಡ್ ದೇಶಗಳಲ್ಲಿ ಬಿಡುಗಡೆಯಾಗಿತ್ತು. ಬೆವಿನ್ ಎಕ್ಸ್ ಫೋರ್ಟ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆ ಈ ಚಿತ್ರವನ್ನು ಬಿಡುಗಡೆ ಮಾಡಿತ್ತು. ಇದೀಗ 'ಮಳೆಯಲಿ ಜೊತೆಯಲಿ' ಚಿತ್ರ ಬೇ ಏರಿಯಾಗೆ ಪ್ರಯಾಣ ಬೆಳೆಸುತ್ತಿದೆ.

ಚಿತ್ರ ಪ್ರದರ್ಶನದ ವಿವರಗಳು:
ಚಿತ್ರಮಂದಿರ: ಸೆರ್ರಾ ಥಿಯೇಟರ್
ವಿಳಾಸ: 200 , ಸೆರ್ರಾ ವೇ, # 37 , ಬಿಗ್ ಲಾಟ್ಸ್ ಕಾಂಪ್ಲೆಕ್ಷ್, ಚಿಲಿಸ್ ಹಿಂಭಾಗ, ಮಿಲ್ಪಿಟಾಸ್, ಕ್ಯಾಲಿಫೋರ್ನಿಯಾ - 95035
ಸಮಯ: ಫೆ.5 (ಶುಕ್ರವಾರ) ಸಂಜೆ 7ಗಂಟೆಗೆ
ಫೆ.6 : (ಶನಿವಾರ) ಮಧ್ಯಾಹ್ನ 3 ಮತ್ತು ಸಂಜೆ 6ಗಂಟೆಗೆ
ಫೆ.7 : (ಭಾನುವಾರ) ಮಧ್ಯಾಹ್ನ 3 ಮತ್ತು ಸಂಜೆ 6ಗಂಟೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಆಶಿತಾ ಗೋವರ್ಧನ್ (ಕಸ್ತೂರಿ ಮಿಡಿಯಾ) - (510 ) 402 4633.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X