ಸಕಲೇಶಪುರದಲ್ಲಿ ರವಿಮಾಮನ ಮಲ್ಲಿಕಾರ್ಜುನ
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸಕಲೇಶಪುರದಲ್ಲಿ ನಿರ್ಮಿಸಿರುವ ಭವ್ಯವಾದ ಮನೆಯ ಸೆಟ್ ಹಾಗೂ ಆ ಊರಿನ ಆಸುಪಾಸಿನ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಈ ಹಂತದಲ್ಲಿ ಸಾಕಷ್ಟು ಮಾತಿನ ಭಾಗದ ಹಾಗೂ ಸಾಹಸ ಸನ್ನಿವೇಶಗಳು ಚಿತ್ರೀಕರಣಗೊಂಡಿದೆ ಎಂದು ನಿರ್ದೇಶಕ ಮುರಳಿಮೋಹನ್ ತಿಳಿಸಿದ್ದಾರೆ.
ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ, ದಿನೇಶ್‌ಗಾಂಧಿ ನಿರ್ಮಿಸುತ್ತಿರುವ 'ಮಲ್ಲಿಕಾರ್ಜುನ' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ರವಿಚಂದ್ರನ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರಾಗಿ ಸೀತಾ ಹಾಗೂ ರಾಗಿಣಿ ಅಭಿನಯಿಸುತ್ತಿದ್ದಾರೆ.
ಸುದೀಪ್‌ತೋ, ಆಶೀಷ್‌ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ದಿನೇಶ್‌ಗಾಂಧಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ. ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ ಹಾಗೂ ಎಸ್.ಎ.ರಾಜಕುಮಾರ್ ರವರ ಸಂಗೀತ 'ಮಲ್ಲಿಕಾರ್ಜುನ' ಚಿತ್ರಕ್ಕಿದೆ.
ರವಿಚಂದ್ರನ್ ಮಲ್ಲಿಕಾರ್ಜುನ ಕ್ರೇಜಿಸ್ಟಾರ್ ದಿನೇಶ್ ಗಾಂಧಿ ರಾಗಿಣಿ mallikarjuna ravichandran ragini dwivedi dinesh gandhi


Click it and Unblock the Notifications