»   »  ಶಂಕರ್ ಬಿದರಿಗೆ ನಟಿ ಪೂಜಾಗಾಂಧಿ ದೂರು!

ಶಂಕರ್ ಬಿದರಿಗೆ ನಟಿ ಪೂಜಾಗಾಂಧಿ ದೂರು!

Posted By:
Subscribe to Filmibeat Kannada

ಛಾಯಾ ಪತ್ರಕರ್ತರ ಸಂಘ ಬುಧವಾರ ಚಿತ್ರಕಲಾ ಪರಿಷತ್ತಿನಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ವಿಶೇಷ ಅತಿಥಿಗಳಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ಮತ್ತು ನಟಿ ಪೂಜಾಗಾಂಧಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬಿದರಿ ಅವರ ಬಳಿನಟಿ ಪೂಜಾಗಾಂಧಿ ತಮ್ಮದೊಂದು ಅಹವಾಲನ್ನು ಸಲ್ಲಿಸಿದರು.

ಸರ್, ದಯವಿಟ್ಟು ಉನ್ನತ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಕೊಡಿ ಎಂದು ಪೂಜಾಗಾಂಧಿ ಕೇಳುವ ಮೂಲಕ ಬಿದರಿ ಅವರನ್ನು ಕ್ಷಣ ಕಾಲ ತಬ್ಬಿಬ್ಬುಗೊಳಿಸಿದರು. ನಮ್ಮ ಏರಿಯಾದಿಂದ ಪೊಲೀಸರಿಗೆ ದೂರು ಕೊಡಲು ಕರೆ ಮಾಡಿದರೆ ಅವರು ಕ್ಷಿಪ್ರವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರು ಪೂಜಾಗಾಂಧಿ ಅವರದು.

ತಕ್ಷಣ ಪ್ರತಿಕ್ರಿಯಿಸಿದ ಬಿದರಿ ಸಾಹೇಬರು, ನಿಮ್ಮ ಯಾವುದೇ ಸಮಸ್ಯೆಯನ್ನು ಪತ್ರಮುಖೇನ ತಿಳಿಸಿ. ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನಿಜ ಜೀವನದಲ್ಲಿ ಪೂಜಾಗಾಂಧಿ ಚಿಕ್ಕವರಲ್ಲ.ತೆರೆಯ ಮೇಲೆ ಮತ್ತು ಪತ್ರಿಕೆಗಳಲ್ಲಿ ಅವರನ್ನು ಮತ್ತಷ್ಟು ದೊಡ್ಡವರಾಗಿ ತೋರಿಸುವ ಜಬಾಬ್ದಾರಿ ನಿಮ್ಮದು ಎಂದು ಪತ್ರಕರ್ತರಿಗೆ ಬಿದರಿ ಹೇಳಿದರು.

ನಂತರ ಬಿದರಿ ಮತ್ತು ಪೂಜಾ ಚಿತ್ರ ಪ್ರದರ್ಶನದಲ್ಲಿ ತಲ್ಲೀನರಾದರು. ತಮ್ಮದೇ ಛಾಯಾಚಿತ್ರವನ್ನು ನೋಡಿದ ಬಿದರಿ, ನಾನು ತುಂಬಾ ದಢೂತಿ ಮನುಷ್ಯ. ಛಾಯಾಚಿತ್ರಗಳಲ್ಲಿ ನನ್ನನ್ನು ತುಂಬ ಸಣ್ಣದಾಗಿ ತೋರಿಸಿದ್ದೀರಿ ಎಂದು ಛಾಯಾಗ್ರಾಹಕರ ಬಳಿ ಬಿದರಿ ದೂರಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada