For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ತಮಿಳಿನ ಸೂಪರ್ ಹಿಟ್ ಚಿತ್ರ ರೇಣಿಗುಂಟ

  By Rajendra
  |
  ತಮಿಳಿನಲ್ಲಿ ಸೂಪರ್ ಹಿಟ್ ದಾಖಲಿಸಿದ 'ರೇಣಿಗುಂಟ' (2009) ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಕನ್ನಡದಲ್ಲಿ ಈ ಚಿತ್ರಕ್ಕೆ 'ಆನೆಕೆರೆ ಬೀದಿ' ಎಂದು ಹೆಸರಿಡಲಾಗಿದೆ. ಆದರಿದು ಮಂಡ್ಯದ 180 ವರ್ಷಗಳ ಇತಿಹಾಸವುಳ್ಳ ಆನೆಕೆರೆ ಬೀದಿಗೂ ಈ ಚಿತ್ರಕ್ಕೂ ಸಂಬಂಧವಿಲ್ಲ.

  'ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ಚಿತ್ರದ ನಾಯಕ ನಟ. ನಾಯಕಿಯ ಹುಡುಕಾಟ ನಡೆಯುತ್ತಿದೆ. ಹೊಸಬರಾದಂತಹ ಕೀರ್ತನ್ ಜೋಸೆಫ್ (ಡ್ರಮ್ಮರ್ ದೇವ ಪುತ್ರ) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಪ್ರೇಕ್ಷಕರ ಮನೋಭಾವಕ್ಕೆ ತಕ್ಕಂತೆ ಮೂಲ ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸದೆ, ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಜೋಸೆಫ್ ತಿಳಿಸಿದ್ದಾರೆ.

  ಒಟ್ಟು 60 ದಿನಗಳ ಕಾಲ ಮಂಡ್ಯ, ಕೋಲಾರ, ಹುಬ್ಬಳ್ಳಿ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ. ಮೇ 3ರಂದು ಚಿತ್ರದ ಮುಹೂರ್ತ. ಚಿತ್ರದಲ್ಲಿ ನಾಯಕನಿಗೆ ಸಾಥ್ ನೀಡುವ ಜೈಲುವಾಸಿ ಗೆಳೆಯ ತೀಪೆಟ್ಟಿ ಗಣೇಶ್ ಇಲ್ಲಿ 'ಕಡ್ಡಿಪೆಟ್ಟಿಗೆ ಗಣೇಶ್' ಆಗಿ ಕನ್ನಡದಲ್ಲೂ ಅಭಿನಯಿಸುತ್ತಿದ್ದಾರೆ.

  ಈ ಚಿತ್ರದಲ್ಲಿ ನಾಯಕಿಗೆ ಮಾತೇ ಬರುವುದಿಲ್ಲ. ಆಕೆಯದು ಮುಗ್ಧ ಮೂಕಿಯ ಪಾತ್ರ. ಆಕೆಯ ಸಹೋದರನೇ ವೇಶ್ಯಾವಾಟಿಕೆಗೆ ತಳ್ಳುವ ಕರುಣಾಜನಕ ಕಥೆಯನ್ನು ಒಳಗೊಂಡಿದೆ. ಮಂಜುನಾಥ್ ಗೌಡ ಹಾಗೂ ವೆಂಕಟೇಶ್ ಗೌಡ ಚಿತ್ರದ ನಿರ್ಮಾಪಕರು. ಸೈಕೋ ಖ್ಯಾತಿಯ ಸಭಾ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಚರಣ್ ಮತ್ತು ಜಾಬ್ ಎಂಬಿಬ್ಬರು ಸಂಗೀತಧಾರೆ ಎರೆಯುತ್ತಿದ್ದಾರೆ. (ಏಜೆನ್ಸೀಸ್)

  English summary
  Tamil super hit film 'Renigunta' is remade in Kannada as 'Anekeri Beedhi' that is one of the locality names in the Mandya district. Keerthana Joseph debuting as director from this film as director. He is the son of very popular Drummer Deva of Karnataka.
  Wednesday, May 2, 2012, 19:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X