For Quick Alerts
  ALLOW NOTIFICATIONS  
  For Daily Alerts

  ಲಂಬಾಣಿ ಚಿತ್ರಕ್ಕೆ ಸ್ಫೂರ್ತಿಯಾದ ಟೆಕ್ಕಿಗಿರೀಶ್ ಕೊಲೆ

  By Mahesh
  |

  'ದೆವ್ವದ ಮನೆಯ ದಿಟ್ಟ ಮಕ್ಕಳು' ಹಾಗೂ 'ಕನಸೊಂದು ಶುರುವಾಯ್ತುಮ್ಮ' ಎರಡು ಚಿತ್ರಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ ಓಂ ಪ್ರಕಾಶ್ ನಾಯಕ್, ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಅವರ ಪುತ್ರ ಈ ಬಾರಿ ನಿರ್ದೇಶಕಕ್ಕೆ ಆರಿಸಿಕೊಂಡಿದ್ದು, ಇತ್ತೀಚೆಗೆ ಸಂಚಲನ ಮೂಡಿಸಿದ ಇಂಟೆಲ್ ಟೆಕ್ಕಿ ಗಿರೀಶ್ ಮರ್ಡರ್ ಕಥೆ.

  ಅಂದಹಾಗೆ, ಇದು ಲಂಬಾಣಿ(ಬಂಜಾರ) ಭಾಷೆಯ ಚಿತ್ರ. ಇದರ ಹೆಸರು. 'ಏಕ್ ಛೋರೀರೊ ಸಾಕಿ".ಚಿತ್ರದ ನಾಯಕಿ/ಖಳನಾಯಕಿಯಾಗಿ ಶುಭಾ ಪಾತ್ರದಲ್ಲಿ ಓಂ ಪ್ರಕಾಶ್ ನಾಯಕ್ ಅವರ ಪತ್ನಿ ಅನುಪಮಾ ನಟಿಸುತ್ತಿರುವುದು ವಿಶೇಷ.

  ಸಂಪೂರ್ಣ ಲಂಬಾಣಿ ತಾಂಡಾಗಳ ಜನಜೀವನವನ್ನು ಪ್ರತಿಬಿಂಬಿಸುವ ಈ ಚಿತ್ರ 'ಏಕ್ ಛೋರೀರೊ ಸಾಕಿ' (ಒಂದು ಹುಡುಗಿಯ ಕಥೆ). ಪ್ರಾಣಕ್ಕಿಂತ ಹೆಚ್ಚಾಗಿ ಒಬ್ಬನನ್ನು ಪ್ರೀತಿಸಿ ಮತ್ತ್ತೊಬ್ಬನ ಕೈಲಿ ತಾಳಿ ಕಟ್ಟಿಸಿಕೊಳ್ಳಬೇಕಾದ ಪ್ರಸಂಗ ಎದುರಿಸುವ ಹುಡುಗಿಯ ಮನಸ್ಥಿತಿಯ ಬಗ್ಗೆ ಚಿತ್ರಣ ನೀಡಲಿದೆಯಂತೆ.

  ಕುಟುಂಬದವರ ಒತ್ತಾಯಕ್ಕೆ ಮಣಿದು ನಿಶ್ಚಿತಾರ್ಥಕ್ಕೆ ತಯಾರಾದ ಹುಡುಗಿಯ ಮನಸ್ಸನ್ನು ಅರಿಯದೆ ಕುಟುಂಬದವರು ಹೇಗೆ ಅವರ ಜೀವನವನ್ನು ಹಾಳುಗೆಡವುತ್ತಾರೆ. ಮುಂದೆ ಇದರಿಂದ ಬೇಸತ್ತು ತನ್ನ ಪ್ರಿಯಕರನ ಸಹಾಯ ಬೇಡಿ, ಭಾವಿ ಪತಿಯನ್ನು ಏಕೆ ಕೊಲೆ ಮಾಡುತ್ತಾಳೆ ಎಂಬುದೇ ಚಿತ್ರಕಥೆಯ ಸಾರ ಎನ್ನುತ್ತಾರೆ ನಿರ್ದೇಶಕ ಓಂಪ್ರಕಾಶ್.

  ಬೆಂಗಳೂರು ಹಾಗೂ ಶಿವಮೊಗ್ಗ ಸುತ್ತಮುತ್ತಲ ತಾಂಡಾಗಳಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಿಶಿ ಸಂಗೀತ ನೀಡಿದ್ದಾರೆ. ಇರುವ ಎರಡು ಗೀತೆಗಳನ್ನು ನಿರ್ದೇಶಕರೇ ರಚಿಸಿದ್ದಾರೆ.

  ನಿರ್ಮಾಪಕಿ ಲಲಿತಾನಾಯಕ್ ಅವರ ಮನೆಯಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ಕನ್ನಡಪರ ಹೋರಾಟಗಾರ ವಾಟಾನಾಗರಾಜ್ ಚಿತ್ರಕ್ಕೆ ಶುಭ ಹಾರೈಸಿ 'ಕ್ಲಾಪ್" ಮಾಡಿದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಓಂಪ್ರಕಾಶ್ ಬರೆದಿರುವ 'ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ" ಪುಸ್ತಕವನ್ನು ವಾಟಾಳ್ ಬಿಡುಗಡೆ ಮಾಡಿದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X