»   » ಇನ್ನೋವೇಟಿವ್ ಚಿತ್ರ ಪ್ರಶಸ್ತಿ: ದಶಕದ ತಾರೆ ರಮ್ಯಾ

ಇನ್ನೋವೇಟಿವ್ ಚಿತ್ರ ಪ್ರಶಸ್ತಿ: ದಶಕದ ತಾರೆ ರಮ್ಯಾ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ನೀಡುತ್ತಿರುವ 2009ನೇ ಸಾಲಿನ ''ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿ ''ಗಳನ್ನು ಶನಿವಾರ(ಮೇ.1) ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಪ್ರದಾನ ಮಾಡಲಾಯಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಇಡೀ ಕನ್ನಡ ಚಿತ್ರರಂಗದ ತಾರೆಗಳು ಪಾಲ್ಗೊಂಡಿದ್ದರು. ಪ್ರಶಸ್ತಿ ಆಯ್ಕೆ ಸಮಿತಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಗಿರೀಶ್ ಕಾಸರವಳ್ಳಿ ಅವರನ್ನೊಳಗೊಂಡಿತ್ತು.

ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿಗಳನ್ನು ಜೀ ಕನ್ನಡ ಮತ್ತು ಒನಿಡಾ ಸಹಯೋಗದೊಂದಿಗೆ ನೀಡಲಾಯಿತು. 2009ನೇ ಸಾಲಿನಲ್ಲಿ ಒಟ್ಟು 122 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಒಟ್ಟು 40 ವಿಭಾಗಗಳಲ್ಲಿ ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಸಾರ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಮ್ಯಾ ಜೊತೆ ಲೂಸ್ ಮಾದ ಖ್ಯಾತಿಯ ಯೋಗೀಶ್ ಹೆಜ್ಜೆ ಹಾಕಿದರು. ಈ ಮೂಲಕ ರಮ್ಯಾ ಜೊತೆ ಹೆಜ್ಜೆ ಹಾಕಬೇಕೆಂಬ ಯೋಗೀಶ್ ಕನಸು ನನಸಾಗಿದೆ. ಪೂಜಾಗಾಂಧಿ, ಸಾಧು ಕೋಕಿಲ, ದೊಡ್ಡಣ್ಣ, ಬುಲೆಟ್ ಪ್ರಕಾಶ್, ಯಶ್, ಚಿರಂಜೀವಿ ಸರ್ಜಾ ಸಹ ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:
ಅತ್ಯುತ್ತಮ ನಟಿ: ರಾಧಿಕಾ ಪಂಡಿತ್ (ಒಲವೆ ಜೀವನ ಲೆಕ್ಕಾಚಾರ)
ಅತ್ಯುತ್ತಮ ನಿರ್ದೇಶಕ(ಚೊಚ್ಚಲ ನಿರ್ದೇಶನ): ಅರ್ಜುನ್ (ಅಂಬಾರಿ)
ಅತ್ಯುತ್ತಮ ನಿರ್ದೇಶಕ: ಕೆ ಮಾದೇಶ್ (ರಾಮ್)
ಅತ್ಯುತ್ತಮ ಚಿತ್ರ ನಿರ್ಮಾಪಕ: ರಾಕ್ ಲೈನ್ ವೆಂಕಟೇಶ್ (ಮನಸಾರೆ)
ಅತ್ಯುತ್ತಮ ಛಾಯಾಗ್ರಾಹಕ : ಸತ್ಯ ಹೆಗಡೆ
ಅತ್ಯುತ್ತಮ ಸಂಕಲನ: ಕೆ ಎಂ ಪ್ರಕಾಶ್
ಅತ್ಯುತ್ತಮ ಧ್ವನಿ ಮುದ್ರಣ: ಎನ್ ಕುಮಾರ್
ಅತ್ಯುತ್ತಮ ಸೌಂಡ್ ಎಫೆಕ್ಟ್ಸ್: ರಾಜನ್
ಅತ್ಯುತ್ತಮ ಕಲಾ ನಿರ್ದೇಶನ: ಶಶಿಧರ ಅಡಪ
ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ
ಅತ್ಯುತ್ತಮ ವಸ್ತ್ರ ವಿನ್ಯಾಸ: ವಿಜಯಲಕ್ಷ್ಮ್ನಿ ಸಿಂಗ್
ಅತ್ಯುತ್ತಮ ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು
ಅತ್ಯುತ್ತಮ ಮೇಕಪ್: ಮನೀಶ್
ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂದಿತಾ
ಅತ್ಯುತ್ತಮ ಹಿನ್ನೆಲೆ ಗಾಯಕ: ಟಿಪ್ಪು
ಅತ್ಯ್ಯುತ್ತಮ ಬಾಲ ಕಲಾವಿದೆ: ಬೇಬಿ ಜೋರುಷಾ
ಅತ್ಯುತ್ತಮ ಡಬ್ಬಿಂಗ್ ಕಲಾವಿದೆ: ದೀಪಾ
ಅತ್ಯುತ್ತಮ ಡಬ್ಬಿಂಗ್ ಕಲಾವಿದ: ದಿಲೀಪ್ ರಾಜ್
ಅತ್ಯುತ್ತಮ ನಕಾರಾತ್ಮಕ ಪಾತ್ರ (ನಟಿ): ಹೇಮಾ ಚೌದರಿ
ಅತ್ಯುತ್ತಮ ನಕಾರಾತ್ಮಕ ಪಾತ್ರ (ನಟ): ಪೆಟ್ರೋಲ್ ಪ್ರಸನ್ನ
ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ
ಅತ್ಯುತ್ತಮ ಸಾಹಿತ್ಯ: ಯೋಗರಾಜ ಭಟ್
ಅತ್ಯುತ್ತಮ ಹಾಸ್ಯ ನಟ: ಸಾಧು ಕೋಕಿಲ
ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು
ಅತ್ಯುತ್ತಮ ಚಿತ್ರಕತೆ: ಗುರು ಪ್ರಸಾದ್ (ಎದ್ದೇಳು ಮಂಜುನಾಥ)
ಅತ್ಯುತ್ತಮ ಸಂವೇದನಾಶೀಲ ನಿರ್ದೇಶಕ: ಯೋಗರಾಜ ಭಟ್ (ಮನಸಾರೆ)
2010ರ ಅತ್ಯುತ್ತಮ ಗೀತೆ: ಹೇ ಪಾರು...ಹೇಳೆ ಪಾರು (ರಾಜ್) ಹಾಡಿದವರು ಟಿಪ್ಪು; ಸಂಗೀತ ನಿರ್ದೇಶನ ವಿ ಹರಿಕೃಷ್ಣ.

ವಿಶೇಷ ಪ್ರಶಸ್ತಿಗಳು:
ದಶಕದ ತಾರೆ: ರಮ್ಯಾ
ಜೀ ಟ್ರೆಂಡ್ ಸೆಟ್ಟರ್ ಪ್ರಶಸ್ತಿ: ಉಪೇಂದ್ರ
ಒನಿಡಾ ಸ್ಟೈಲಿಶ್ ನಟಿ : ಐಂದ್ರಿತಾ ರೇ
ಒನಿಡಾ ಸ್ಟೈಲ್ ಐಕಾನ್ ಪ್ರಶಸ್ತಿ: ಚಾಲೆಂಜಿಂಗ್ ಸ್ಟಾರ್ ದರ್ಶನ್
ತೀರ್ಪುಗಾರರ ವಿಶೇಷ ಪ್ರಶಸ್ತಿ: ಸುದೀಪ್
ವಿಶೇಷ ಮನ್ನಣೆ: ವಿ ರವಿಚಂದ್ರನ್ ಮತ್ತು ಜಗ್ಗೇಶ್
ಇನ್ನೋವೇಟಿವ್ ಸಲಹಾ ಸಮಿತಿ ಪ್ರಶಸ್ತಿ: ಪೂಜಾಗಾಂಧಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್
ಅತ್ಯುತ್ತಮ ನಟಿ (ಚೊಚ್ಚಲ ಚಿತ್ರ): ನಿಧಿ ಸುಬ್ಬಯ್ಯ (ಚಮ್ಕಾಯ್ಸಿ ಚಿಂದಿ ಉಡಾಯ್ಸಿ)
ಅತ್ಯುತ್ತಮ ನಟ (ಚೊಚ್ಚಲ ಚಿತ್ರ): ಚಿರಂಜೀವಿ ಸರ್ಜಾ (ವಾಯುಪುತ್ರ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada