»   »  ದರ್ಶನ್ ರ ಪೊರ್ಕಿ ಚಿತ್ರದ ನಾಯಕಿ ಪ್ರಣೀತಾ

ದರ್ಶನ್ ರ ಪೊರ್ಕಿ ಚಿತ್ರದ ನಾಯಕಿ ಪ್ರಣೀತಾ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೊಸ ನಾಯಕಿ ಸಿಕ್ಕಿದ್ದಾರೆ! ಪೊರ್ಕಿ ಚಿತ್ರದ ನಾಯಕಿಯಾಗಿ ಬೆಂಗಳೂರು ಬೆಡಗಿ ಪ್ರಣೀತಾ ಆಯ್ಕೆಯಾಗಿದ್ದಾರೆ. ತೆಲುಗಿನ ಸೂಪರ್ ಹಿಟ್ ಚಲನಚಿತ್ರ 'ಪೋಕಿರಿ' ಕನ್ನಡಕ್ಕೆ ಪೊರ್ಕಿಯಾಗಿ ರೀಮೇಕ್ ಆಗುತ್ತಿರುವುದು ಗೊತ್ತೇ ಇದೆ.

ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ಪ್ರಣೀತಾ ಅವರು ಇಂದ್ರಜಿತ್ ಲಂಕೇಶರ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಡಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ. 'ಬಿಸಿಲೇ' ಚಿತ್ರದಲ್ಲಿ ದಿಗಂತ್ ಗೆ ಜೋಡಿಯಾಗಿ ನಟಿಸಬೇಕಿತ್ತ್ತು. ಅಲ್ಲೂ ಪ್ರಣೀತಾರಿಗೆ ಅವಕಾಶ ಕೈತಪ್ಪಿ ತು. ಅವರ ಸ್ಥಾನಕ್ಕೆ ಜೆನ್ನಿಫರ್ ಕೊತ್ವಾಲ್ ಆಯ್ಕೆಯಾಗಿದ್ದರು.

ಕಡೆಗೆ ನಿರ್ದೇಶಕ ಯೋಗರಾಜ್ ಭಟ್ಟರ ಮಹತ್ವಾಕಾಂಕ್ಷಿ ಚಿತ್ರ 'ಲಗೋರಿ' ಚಿತ್ರದ ಮೂಲಕ ಈಕೆ ಪರಿಚಯವಾಗಬೇಕಿತ್ತು. 'ಲಗೋರಿ' ಆಟ ರದ್ದಾಗಿ ಪುನೀತ್ ರಾಜ್ ಕುಮಾರ್ ಜತೆ ನಟಿಸುವ ಅವಕಾಶವೂ ಕೈಜಾರಿತು. ಹೀಗೆ ಒಂದೊಂದೇ ಅವಕಾಶಗಳು ಪ್ರಣೀತಾರಿಗೆ ಕೈಗೆ ಸಿಕ್ಕಂತೆ ಸಿಕ್ಕಿ ಮರೀಚಿಕೆಯಂತೆ ಮರೆಯಾಗುತ್ತಿದ್ದವು. ಕಟ್ಟಕಡೆಗೆ ಪೊರ್ಕಿ ಚಿತ್ರದಲ್ಲಿ ಅವಕಾಶ ಸಿಕ್ಕಿದೆ.

ಈ ಬಗ್ಗೆ ಮಾತನಾಡಿದ ಪ್ರಣೀತಾ, ತನ್ನ ಮೊದಲ ಚಿತ್ರ ಕನ್ನಡ ಚಿತ್ರವಾಗಿರುವುದು ನನಗೆ ತುಂಬ ಖುಷಿ ಕೊಟ್ಟಿದೆ. ದರ್ಶನ್ ರಂತಹ ದೊಡ್ಡ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದರು. ಅಂದಹಾಗೆ ಪ್ರಣೀತಾ ಅವರು ಬೆಂಗಳೂರಿನ ಹನುಮಂತ ನಗರದ ಅಭಿನಯ ತರಂಗದಲ್ಲಿ ತರಬೇತಿ ಪಡೆದಿದ್ದಾರೆ.

ಇತ್ತೀಚೆಗೆ ಬೆಂಗಳೂರು ಮಿನರ್ವ ಮಿಲ್ ಬಳಿ ದರ್ಶನ್ ಮತ್ತು ಆಶಿಶ್ ವಿದ್ಯಾರ್ಥಿ ನಡುವಿನ ಸಾಹಸ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈ ದೃಶ್ಯಗಳನ್ನು ಕೃಷ್ಣ ಕುಮಾರ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದರು. ಎಂ ಡಿ ಶ್ರೀಧರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜನೆ ಇದೆ.

ಬೆಂಗಳೂರಿನಲ್ಲಿ 30 ದಿನಗಳ ಕಾಲ ಪೊರ್ಕಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಬಚ್ಚೇಗೌಡ ತಿಳಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ದೇವರಾಜ್, ಅಶಿಶ್ ವಿದ್ಯಾರ್ಥಿ, ಅವಿನಾಶ್, ಶೋಭಾರಾಜ್, ಮನೋಜ್, ಧರ್ಮಾ, ಸಂಗೀತಾ ಶೆಟ್ಟಿ, ಚಿತ್ರಾ ಶೆಣೈ, ಸಾಧು ಕೋಕಿಲ, ಶರಣ್ ಮುಂತಾದವರು ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada