»   »  ಕನ್ನಡ ಚಿತ್ರರಂಗಕ್ಕೆ ಮರಳಿದ ಆರತಿ ಛಾಬ್ರಿಯಾ

ಕನ್ನಡ ಚಿತ್ರರಂಗಕ್ಕೆ ಮರಳಿದ ಆರತಿ ಛಾಬ್ರಿಯಾ

Posted By:
Subscribe to Filmibeat Kannada
ಒಂದು ವರ್ಷದ ವಿರಾಮದ ನಂತರ ನಟಿ ಮತ್ತು ರೂಪದರ್ಶಿ ಆರತಿ ಛಾಬ್ರಿಯಾ ಸ್ಯಾಂಡಲ್ ವುಡ್ ಗೆ ಹಿಂತಿರುಗಿದ್ದಾರೆ. ಈ ಹಿಂದೆ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಸಂತ' ಚಿತ್ರದಲ್ಲಿ ನಟಿಸಿದ್ದರು. ಮತ್ತೆ ಈಗ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆರತಿ ಛಾಬ್ರಿಯಾ ಅವರಿಗೆ ಉತ್ತಮ ಬೇಡಿಕೆ ಇದೆ. ಅವರ ಸಂಭಾವನೆ ಬಗ್ಗೆಯೂ ಎರಡು ಮಾತಿಲ್ಲ.ಈ ಎಲ್ಲ ಕಾರಣಗಳಿಗಾಗಿ ಆರತಿ ಮತ್ತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

''ದಕ್ಷಿಣ ಭಾರತ ಚಿತ್ರರಂಗದೊಂದಿಗೆ ನಾನು ಸಂಬಂಧ ಕಳೆದುಕೊಂಡಿಲ್ಲ. ದಕ್ಷಿಣದ ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದೇನೆ.ಈ ಸಲ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಅದರಲ್ಲೂ ಮುಖ್ಯವಾಗಿ ನನ್ನ ನೆಚ್ಚಿನ ಸ್ಟಾರ್ ಶಿವರಾಜ್ ಕುಮಾರ್ ಜತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಸಂತ ಚಿತ್ರ ಬಾಕ್ಸಾಫೀಸಲ್ಲಿ ಗೆದ್ದ ನಂತರ ತೆಲುಗು ಚಿತ್ರರಂಗದಲ್ಲಿ ಹಲವಾರು ಅವಕಾಶ ಹುಡುಕಿಕೊಂಡುಬಂದವು. ಆದರೆ ಯಾವುದನ್ನೂ ಒಪ್ಪಲಿಲ್ಲ. ಅಷ್ಟೇ ಅಲ್ಲ ಈ ಒಂದು ವರ್ಷದಲ್ಲಿ ಯಾವುದೇ ಬಾಲಿವುಡ್ ಚಿತ್ರಕ್ಕೂ ಸಹಿ ಹಾಕಿಲ್ಲ. ನನಗೆ ಒಪ್ಪುವ ಪಾತ್ರಗಳು ಸಿಗದೇ ಇದ್ದದ್ದೇ ಇದಕ್ಕೆ ಕಾರಣ. ಪ್ರಸ್ತುತ ರಾಜ್ ಕುಮಾರ್ ಸಂತೋಷಿ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನಟಿಸಲು ಇನ್ನೂ 'ಎಸ್' ಎಂದು ಹೇಳಿಲ್ಲ'' ಎಂದು ಆರತಿ ತಿಳಿಸಿದರು.

'ಹೊಡಿಮಗ' ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಆರತಿ ಛಾಬ್ರಿಯಾರೊಂದಿಗಿನ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ ಸೆಟ್ಟೇರಲಿದೆ. ಚೆನ್ನೈ, ಹೈದರಾಬಾದ್ ಮೆಟ್ರೋನಗರಗಳು ಸೇರಿದಂತೆ ತಿರುವನಂತಪುರಂನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಸಂತ ಚಿತ್ರದಲ್ಲಿನ ಆರತಿ ಮತ್ತು ಶಿವರಾಜ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮುಂದಿನ ಚಿತ್ರದಲ್ಲಿ ಮತ್ತೆ ಅದೇ ರೀತಿಯ ಪಾತ್ರಗಳಲ್ಲಿ ಇವರನ್ನೂ ನೋಡಬಹುದು ಎನ್ನುತ್ತಾರೆ ಚಿತ್ರ ನಿರ್ದೇಶಕ ಪಿ.ಎನ್.ಸತ್ಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಆರತಿ ಛಾಬ್ರಿಯಾ ಮನಮೋಹಕ ಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada