»   » ರಿಯಲ್ ಸ್ಟಾರ್ ಉಪೇಂದ್ರ ಶ್ರೀಮತಿ ವಯಸ್ಕರಿಗೆ ಮಾತ್ರ

ರಿಯಲ್ ಸ್ಟಾರ್ ಉಪೇಂದ್ರ ಶ್ರೀಮತಿ ವಯಸ್ಕರಿಗೆ ಮಾತ್ರ

Posted By:
Subscribe to Filmibeat Kannada

ಹೌದು ನೀವು ಓದುತ್ತಿರುವುದು ನಿಜ. ನಾವು ಬರೆಯುತ್ತಿರುವುದು ಹನ್ನೆರಡಾಣೆಗೂ ನಿಜ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಶ್ರೀಮತಿ' ಚಿತ್ರ ವಯಸ್ಕರಿಗೆ ಮಾತ್ರ. ಉಪ್ಪಿ ಜೊತೆ ಅವರ ಶ್ರೀಮತಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸೆಲೀನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ತಾರಾಗಣದ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ.

ಚಿತ್ರದಲ್ಲಿ ಪಡ್ಡೆ ಹೈಕಳನ್ನು ಬೆಚ್ಚಗೆ ಮಾಡುವ ಕೆಲವು ದೃಶ್ಯಗಳಿರುವುದೇ "ವಯಸ್ಕರ ಚಿತ್ರ"ದ ಹಣೆಪಟ್ಟಿ ಬೀಳಲು ಕಾರಣ ಎನ್ನಲಾಗಿದೆ. ಜುಲೈ 8ಕ್ಕೆ ಉಪೇಂದ್ರ ಶ್ರೀಮತಿ ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಬಹುದು. 'ಕೆಂಪೇಗೌಡ' ಚಿತ್ರದ ನಿರ್ಮಾಪಕ ಶಂಕರೇ ಗೌಡ ನಿರ್ಮಿಸಿರುವ ಮತ್ತೊಂದು ಚಿತ್ರವಿದು.

'ಸೂಪರ್' ಸಕ್ಸಸ್‌ನಲ್ಲಿ ತೇಲಾಡುತ್ತಿರುವ ಉಪೇಂದ್ರ ಈಗ ಮತ್ತೊಮ್ಮೆ 'ಶ್ರೀಮತಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದ ಪೋಸ್ಟರ್‌ಗಳನ್ನು ನೋಡುತ್ತಿದ್ದರೆ ಪ್ರೇಕ್ಷಕರ ನಾಡಿಮಿಡಿತ ಕೊಂಚ ಏರುಪೇರಾಗುವಂತಿದೆ. ಚಿತ್ರ ಹೇಗಿರುತ್ತದೋ ಎಂಬ ಕುತೂಹಲ ಇದ್ದೇ ಇದೆ. ಹಿಂದಿಯ 'ಐತ್‌ರಾಜ್' ಚಿತ್ರದ ರೀಮೇಕ್ ಇದು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Real Star Upendra, Priyanka Upendra, Celina Jaitley lead Kannada movie Srimathi got ‘A’ certificate by the regional censor board. The movie has been set to release on 8th July 2011. It is an Hindi film 'Aitraaz' remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada