»   »  ಫುಲ್ ಜೋಶ್ ನಲ್ಲಿ ಸ್ನೇಹಾ ಆಚಾರ್ಯ

ಫುಲ್ ಜೋಶ್ ನಲ್ಲಿ ಸ್ನೇಹಾ ಆಚಾರ್ಯ

Posted By:
Subscribe to Filmibeat Kannada
Sneha Acharya
'ಜೋಶ್ 'ಚಿತ್ರದ ಮೂಲಕ ಆಕಸ್ಮಿಕವಾಗಿ ಬೆಳ್ಳಿತೆರೆಗೆ ಅಡಿಯಿಟ್ಟವರು ಸ್ನೇಹಾ ಆಚಾರ್ಯ. ತಮ್ಮ ಮೊದಲ ಚಿತ್ರವೇ ಬಾಕ್ಸಾಫೀಸ್ ನಲ್ಲಿ ಸದ್ದ್ದು ಮಾಡಿರುವುದು ಸ್ನೇಹಾರನ್ನು ಸ್ನೇಹಾ ಉತ್ಸಾಹ ಆಕಾಶಕ್ಕೆ ಪುಟಿದಿದೆ. ಆಡಿಷನ್ ಗಾಗಿ ಸಿಡಿ ಮಾಡಿ ಕಳುಹಿಸಿದ್ದೆ. ಒಂದು ದಿನ ನಿರ್ದೇಶಕ ಶಿವಮಣಿ ನಾನು ಆಯ್ಕೆಯಾಗಿದ್ದೇನೆಂದು ಕರೆಬಂತು. ಹಾಗಾಗಿ ಜೋಶ್ ಚಿತ್ರದಲ್ಲಿ ತಾನೂ ಭಾಗಿಯಾಗುವ ಸುಯೋಗ ಒದಗಿ ಬಂತು ಎನ್ನುತ್ತಾರೆ ಸ್ನೇಹಾ.

ನಿರೂಪಕಿ ಮತ್ತು ಶಿಕ್ಷಕಿಯಾಗುವುದಕ್ಕೂ ಮುನ್ನ ಸ್ನೇಹಾ ಅವರು ನೃತ್ಯ ಗಾರ್ತಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಆರು ವರ್ಷದ ವಯಸ್ಸಿನಲ್ಲೆ ತಾನು ನೃತ್ಯಾಭ್ಯಾಸವನ್ನು ಆರಂಭಿಸಿದ್ದೆ. ನಂತರ ಸಲ್ಸಾ ಮತ್ತು ಲ್ಯಾಟಿನೊ ಡ್ಯಾನ್ಸ್ ಗಳನ್ನು ಕಲಿತೆ. ಅಂತಾರಾಷ್ಟ್ರೀಯ ನೃತ್ಯೋತ್ಸವದಲ್ಲೂ ಭಾಗವಹಿಸಿದ್ದೆ ಎಂಬ ವಿವರಗಳನ್ನು ಸ್ನೇಹಾ ನೀಡುತ್ತಾರೆ.

ಪ್ರಸ್ತುತ ಬಿ ಎಸ್ಸಿ ಎಲೆಕ್ಟ್ರಾನಿಕ್ಸ್ ನ ಅಂತಿಮ ವರ್ಷದಲ್ಲಿ ಸ್ನೇಹಾ ಓದುತ್ತಿದ್ದಾರೆ. ಓದು ಮುಗಿದ ಬಳಿಕ ನನ್ನ ಜೀವನ ನಟನೆಗೆ ಸೀಮಿತ ಎನ್ನುವ ಸ್ನೇಹಾಗೆ ಈಗಾಗಲೇ ಕೆಲವೊಂದು ಅವಕಾಶಗಳು ಹುಡುಕಿಕೊಂಡು ಬಂದಿವೆಯಂತೆ. ಸದ್ಯಕ್ಕೆ ಪರೀಕ್ಷೆಗಳಿರುವ ಕಾರಣ ಅತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿದ ಬಳಿಕ ಸಿನಿಮಾ, ಸಿನಿಮಾ..

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada