»   » ಮಿಡ್ ನೈಟ್ ಮಸಾಲಾ ಐಟಂ ಸಾಂಗಿಗೆ ಬಿತ್ತು ಕತ್ತರಿ

ಮಿಡ್ ನೈಟ್ ಮಸಾಲಾ ಐಟಂ ಸಾಂಗಿಗೆ ಬಿತ್ತು ಕತ್ತರಿ

Posted By:
Subscribe to Filmibeat Kannada

ಪಡ್ಡೆಹುಡುಗರಿಗೆ (ಹಾರ್ಟ್) ಬ್ರೇಕಿಂಗ್ ನ್ಯೂಸ್ ಇಲ್ಲಿದೆ. ಏನಪಾ ಅಂದರೆ ಇನ್ನು ಮುಂದೆ ಟಿವಿಯಲ್ಲಿ ಮಿಡ್ ನೈಟ್ ಮಸಾಲಾದಂತಹ ಐಟಂ ಸಾಂಗ್ ಗಳು ಬಿತ್ತರಗೊಳ್ಳುವುದಿಲ್ಲ. ಇದನ್ನು ಕೇಳಿ ಮಡಿವಂತರು ಸದ್ಯ ಪೀಡೆ ತೊಲಗಿತು, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಟಿವಿಯಲ್ಲಿ ಸಿನಿಮಾ ನೋಡಬಹುದು ಎಂದು ನಿಟ್ಟುಸಿರುಬಿಡಬಹುದು.

ವಿಷಯ ಏನಪಾ ಅಂದರೆ ಇತ್ತೀಚೆಗೆ ದೆಹಲಿ ಗ್ಯಾಂಗ್ ರೇಪ್- ಮರ್ಡರ್ ಎಂಬ ಕರಾಳ ಪ್ರಕರಣ ನಡೆದಿದ್ದೇ... ಸರಕಾರ ನಿದ್ದೆಯಿಂದ ಎಚ್ಚೆತ್ತಿರುವಂತಿದೆ. ಎಲ್ಲೆಲ್ಲಿ ಅಶ್ಲೀಲತೆಯ ಬಾಲ ಕಟ್ ಮಾಡಬೇಕೋ ಅಲ್ಲೆಲ್ಲಾ ಧಾರಾಳವಾಗಿ ಕತ್ತರಿ ಪ್ರಯೋಗಿಸುತ್ತಿದೆ.

Item songs to get A Certificate tag barred from TV

ಹಿಂದಿನ ಕ್ಯಾಬರೆ ಡ್ಯಾನ್ಸನ್ನೂ ನಾಚಿಸುವಂತೆ ಸಿನಿಮಾಗಳಲ್ಲಿ ಈ item song ಹಾವಳಿ ವಿಪರೀತವೆನಿಸುವಷ್ಟು ಕಾಡಲಾರಂಭಿಸಿದೆ. ಇದು ಕಾಮಪ್ರಚೋದನೆ, ಅಪರಾಧಗಳಿಗೆ ಪ್ರೇರಣೆ ನೀಡುತ್ತದೆ ಎಂಬುದು ಸರಕಾರಕ್ಕೆ ತಡವಾಗಿ ತಿಳಿದುಬಂದಿದೆ. ಹಾಗಾಗಿ, ಈ item song ಗಳಿಗೆ ಇನ್ನು ಮುಂದೆ A certificate ನೀಡಲು ಸೆನ್ಸಾರ್ ಮಂಡಳಿ ನಿರ್ಧರಿಸಿದೆ. ಈಗಿರುವ ನೀತಿಯಂತೆ ಟಿವಿಗಳಲ್ಲಿ A certificate ಚಿತ್ರಾವಳಿ ತೋರಿಸುವಂತಿಲ್ಲ. ಅದಕ್ಕೆ ಕಟ್ಟುನಿಟ್ಟಿನ ಕಡಿವಾಣ ಬಿದ್ದಿದೆ.

ಆದ್ದರಿಂದ A certificate ಹೊತ್ತ ಯಾವುದೇ item song ಇನ್ಮುಂದೆ ಟಿವಿಯಲ್ಲಿ ವಿಜೃಂಭಿಸುವುದಿಲ್ಲ. item song ಇರುವ ಸಿನಿಮಾವನ್ನು ಟಿವಿಯಲ್ಲಿ ಬಿತ್ತರಿಸಿದರೆ Censor Board of Film Certification (CBFC) ಅದಕ್ಕೆ ಕತ್ತರಿ ಪ್ರಯೋಗ ಮಾಡಲಿದೆ ಎಂದು ಮಂಡಳಿಯ CEO ಪಂಕಜ್ ಠಾಕೂರ್ ಕಳೆದ ವಾರ ಸ್ಪಷ್ಟಪಡಿಸಿದ್ದಾರೆ.

ಆದರೆ ಸಿನಿಮಾ ಮಂದಿ ಐಟಂ ಸಾಂಗಾ? ಏನು ಹಾಂಗೆಂದರೆ? Cinematograph Act- 1952 ಅನುಸಾರ ಅದರ ಅರ್ಥ ವ್ಯಾಪ್ತಿ ಏನು? ಎಂದು ಪ್ರಶ್ನಿಸುವ ಮೂಲಕ item song ನಮ್ಮ ಆಜನ್ಮ ಸಿದ್ದಹಕ್ಕು ಎಂದು ಪ್ರತಿಪಾದಿಸುತ್ತಿರುವಂತಿದೆ.

ನಿಮ್ಮ ಪ್ರಮಾಣಿಕ ಅನಿಸಿಕೆ ಏನು- ಮನೆಮಂದಿಯೆಲ್ಲ ಕುಳಿತಿರುವಾಗ ಟಿವಿಗಳಲ್ಲಿ item song ಬಿತ್ತರವಾಗಬಹುದಾ ಅಥವಾ ಬೇಡವಾ?

English summary
Item songs to get A Certificate tag barred from TV. “The issue of handing ‘A’ certificates to item songs was discussed in the censor board meeting and the chairperson has decided on it,” confirmed Pankaja Thakur, CEO, CBFC, adding that the Delhi gang-rape had pushed the board to take such a decision.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada