For Quick Alerts
  ALLOW NOTIFICATIONS  
  For Daily Alerts

  ಹೊಸ ಬಾಳಿನ ಹೊಸಿಲಲಿ ಸೆಕ್ಸಿ ತಾರೆ ನವನೀತ್ ಕೌರ್

  By Rajendra
  |

  ದಕ್ಷಿಣದ ಹಾಟ್ ಮತ್ತು ಸೆಕ್ಸಿ ತಾರೆ ನವನೀತ್ ಕೌರ್ ಮದುವೆ ಮಹಾರಾಷ್ಟ್ರದ ಶಾಸಕ ರವಿ ರಾಣಾ ಜೊತೆ ಅಮರಾವತಿಯಲ್ಲಿ ನೆರವೇರಿದೆ. ಒಟ್ಟು 3600 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ನವನೀತ್ ಕೌರ್ ಹಾಗೂ ರಾಣಾ ಒಂದಾದರು. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ನೂತನ ದಂಪತಿಗಳಿಗೆ ಶುಭ ಕೋರಿದರು.

  ಈ ಮದುವೆಗೆ ನವನೀತ್ ಬಂಧು ಮಿತ್ರರು, ಧಾರ್ಮಿಕ ಮುಖಂಡರು ಸಾಕ್ಷಿಯಾದರು. ಯೋಗ ಗುರು ಬಾಬಾ ರಾಮ್‌ದೇವ್, ನಟ ವಿವೇಕ್ ಒಬೆರಾಯ್ ಸೇರಿದಂತೆ ಹಲವಾರು ಗಣ್ಯರು ಸಾಮೂಹಿಕ ವಿವಾಹಕ್ಕೆ ಆಗಮಿಸಿದ್ದರು. ಇತಿಹಾಸದಲ್ಲಿ ಈ ಹಿಂದೆಂದೂ ದಾಖಲಾಗದ ಸಾಮೂಹಿಕ ವಿವಾಹ ಇದಾಗಿತ್ತು. ಈ ಸಾಮೂಹಿಕ ವಿವಾಹ ಗಿನ್ನಿಸ್ ದಾಖ್ಲಲೆಗೆ ಸೇರುವ ಎಲ್ಲ ಸಾಧ್ಯತೆಗಳು ಇವೆ.

  ವಿದರ್ಭ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಬಾಬಾ ರಾಮ್‌ದೇವ್ ವೇದ ಮಂತ್ರಗಳನ್ನು ಪಠಿಸುವ ಮೂಲಕ 3600 ಜೋಡಿಗಳು ಹಾರ ಬದಲಾಯಿಸಿಕೊಂಡರು. ಈ ಮದುವೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ನೆರೆದಿದ್ದರು.

  English summary
  Leading South Indian actress Navneeth Kaur got married with Maharashtra MLA (ind) Ravi Raana in a mass marriage of 3600 pairs held at Amaravathi. Maharashtra Chief Minister Prithviraj Chowhan and VVIPs of the state have attended the marriage and wished the couples.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X