»   »  ಕ್ಷಮಿಸಿ,ಯಾರೂ ನನಗೆ ರಾಖಿ ಕಟ್ಟಬೇಡಿ: ದರ್ಶನ್!

ಕ್ಷಮಿಸಿ,ಯಾರೂ ನನಗೆ ರಾಖಿ ಕಟ್ಟಬೇಡಿ: ದರ್ಶನ್!

Subscribe to Filmibeat Kannada

ಶ್ರಾವಣ ಮಾಸದಲ್ಲಿ ಬರುವ ರಕ್ಷಾ ಬಂಧನ ಹಬ್ಬಅಣ್ಣ ತಂಗಿಯರಿಗೆ ಸಂಭ್ರಮದ ದಿನ. ಸೋದರ ವಾತ್ಸಲ್ಯವನ್ನು ಮತ್ತಷ್ಟು ಹೆಚ್ಚಿಸುವ ಹಬ್ಬ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಅನಾಮಿಕರು, ಅಪರಿಚಿತರಿಂದ ರಾಖಿ ಕಟ್ಟಿಸಿಕೊಳ್ಳಲು ಸಿದ್ಧರಿಲ್ಲ. ಅಕ್ಕ ಕಳುಹಿಸುವ ರಾಖಿಯೇ ತನಗೆ ಪರಮಪೂಜ್ಯ ಎನ್ನುತ್ತಾರೆ.

''ಗುರುತು ಪರಿಚಯ ಇಲ್ಲದವರು ರಾಖಿ ಕಟ್ಟುವುದು ಅಷ್ಟು ಸೂಕ್ತ ಅನ್ನಿಸಲ್ಲ. ತಾರ್ಕಿಕವಾಗಿಯೂ ಇದು ಅಷ್ಟು ಸರಿಯಲ್ಲ.ಇತರರು ತೋರ್ಪಡಿಕೆಗಾಗಿ ಕಟ್ಟುವ ರಾಖಿ ನನಗೆ ಬೇಕಾಗಿಲ್ಲ. ಹಾಗಂತ ನಾನು ಹುಡುಗಿಯರನ್ನು ಕೆಟ್ಟ ಭಾವನೆಯಿಂದ ನೋಡುತ್ತಿಲ್ಲ. ಸಂಪ್ರದಾಯವನ್ನ್ನು ವಿರೋಧಿಸುತ್ತಿಲ್ಲ. ನನ್ನ ಸೋದರತ್ವದ ಭಾವನೆಗೆ ದಕ್ಕೆಯಾಗಬಾರದಷ್ಟೆ'' ಎನ್ನುತ್ತಾರೆ ದರ್ಶನ್.

ಯಾರೋ ಬಂದು ರಾಖಿ ಕಟ್ಟುವುದರಲ್ಲಿ ಅರ್ಥವಿಲ್ಲ. ಇದನ್ನು ನಾನು ಒಪ್ಪುವುದೂ ಇಲ್ಲ. ಕಾರವಾರದಲ್ಲಿರುವ ನನ್ನ ಅಕ್ಕ ಪ್ರತಿ ವರ್ಷ ರಕ್ಷಬಂಧನಕ್ಕೆ ರಾಖಿ ಕಳುಹಿಸುತ್ತಾರೆ. ನನ್ನ ಮಣಿಕಟ್ಟಿಗೆ ಈ ರಾಖಿ ಬಿಟ್ಟು ಇನ್ಯಾವುದನ್ನೂ ಹಾಕಿಕೊಳ್ಳುವುದಿಲ್ಲ.ದಯವಿಟ್ಟು ಯಾರೂ ನನಗೆ ರಾಖಿ ಕಟ್ಟಲು ಪ್ರಯತ್ನಿಸಬೇಡಿ ಎಂದು ದರ್ಶನ್ ಇತರರಿಗೆ ಸೂಚಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada