»   » ಅಣ್ಣಾಬಾಂಡ್ ಮೇಲೆ ಭಾರೀ ನಿರೀಕ್ಷೆ ಬೇಡ, ಪುನೀತ್

ಅಣ್ಣಾಬಾಂಡ್ ಮೇಲೆ ಭಾರೀ ನಿರೀಕ್ಷೆ ಬೇಡ, ಪುನೀತ್

Posted By:
Subscribe to Filmibeat Kannada
Puneeth Rajkumar in Anna Bond
ನಮ್ಮ ಹೋಮ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ 80ನೇ ಚಿತ್ರವಿದು. ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಬೇಡಿ. ಆರಾಮಾಗಿ ಫ್ಯಾಮಿಲಿ ಸಮೇತ ಬಂದು ಎಂಜಾಯ್ ಮಾಡುವ ಚಿತ್ರವನ್ನು ನಿಮಗೆ ನೀಡುತ್ತೇವೆ, ಈ ಚಿತ್ರವನ್ನು ನೀವು ಮೆಚ್ಚಿಕೊಳ್ಳುತ್ತೀರ ಎನ್ನುವ ಭರವಸೆ ನನಗಿದೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ.

ಅಣ್ಣಾಬಾಂಡ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪುನೀತ್ ಈ ಚಿತ್ರಕ್ಕೆ ಬಹಳಷ್ಟು ಹೈಪ್ ಇದೆ ಅನ್ನೊಂದು ನಮಗೆ ತಿಳಿದಿದೆ. ಚಿತ್ರ ಹಾಗಿರಬಹುದು, ಹೀಗಿರಬಹುದು ಎನ್ನೋ ಸಿಕ್ಕಾಪಟ್ಟೆ ನಿರೀಕ್ಷೆ ಬೇಡ. ಪ್ರೇಕ್ಷಕರಿಗೆ ಒಳ್ಳೆ ಎಂಟರ್ಟೈನ್ಮೆಂಟ್ ಸಿಗುವ ಚಿತ್ರವನ್ನು ನೀಡಿದ್ದೇವೆ ಎನ್ನೋ ಕಾನ್ಫಿಡೆಂಟ್ ನನಗಿದೆ ಎನ್ನೋ ಭರವಸೆಯ ಮಾತನ್ನು ಆಡಿದ್ದಾರೆ.

ಪುನೀತ್ ಮಾತಿಗೆ ತಲೆದೂಗಿಸಿದ ನಿರ್ದೇಶಕ ಸೂರಿ, ಅಣ್ಣಾಬಾಂಡ್ ಚಿತ್ರವೆಂದರೆ ಅಪ್ಪು ಅವರನ್ನು ಜೇಮ್ಸ್ ಬಾಂಡ್ ರೂಪದಲ್ಲಿ ನಾನು ತೋರಿಸಿದ್ದೇನೆ ಎಂದು ಅನ್ಕೋಬೇಡಿ. ಯಾರ ಕೈಯಲ್ಲೂ ಮಾಡಕ್ಕಾಗದ ಕೆಲಸವನ್ನು ಮಾಡುವವನನ್ನು ಅಣ್ಣಾಬಾಂಡ್ ಎಂದು ಕರೆಯೋದು ವಾಡಿಕೆ. ಈ ಚಿತ್ರದಲ್ಲಿ ಕೂಡಾ ಅಪ್ಪು ಅವರನ್ನು ಹಾಗೆ ತೋರಿಸಲಾಗಿದೆ ಎಂದರು.

ಕೊಟ್ಟ ಕಾಸಿಗೆ ಮೋಸವಿಲ್ಲದೆ ಎಲ್ಲೂ ಬೋರ್ ಹೊಡೆಸದಂತೆ ಚಿತ್ರ ನೀಡುತ್ತೇವೆ. ಚಿತ್ರ ನೋಡಿ ನಮ್ಮನ್ನು ಆಶೀರ್ವದಿಸಿ ಎಂದು ದುನಿಯಾ ಸೂರಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X