»   »  ಕೋಲಾರದಲ್ಲಿ ಗುಲಾಬಿ ಟಾಕೀಸ್ ಘಮಲು

ಕೋಲಾರದಲ್ಲಿ ಗುಲಾಬಿ ಟಾಕೀಸ್ ಘಮಲು

By: * ರವಿಕುಮಾರ್, ಕೋಲಾರ
Subscribe to Filmibeat Kannada
Gulabi Talkies special show in terehalli , kolar
ಕೋಲಾರ ತಾಲೂಕಿನ ತೇರಹಳ್ಳಿಯಲ್ಲಿ ಗುಲಾಬಿ ಟಾಕೀಸ್ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ತೆಲುಗು ಭಾಷೆಯ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುವ ಕೋಲಾರದಲ್ಲಿ 'ಗುಲಾಬಿ ಟಾಕೀಸ್' ವಿಶೇಷ ಪ್ರದರ್ಶನ ಕಂಡಿದ್ದು ವಿಶೇಷವಾಗಿತ್ತು.

ಶಿವಗಂಗೆಯ ಆದಾಮಿ ಕಲಾಕೇಂದ್ರ ಈ ವಿಶೇಷ ಪ್ರದರ್ಶನವನ್ನು ಏರ್ಪಸಿತ್ತು. ಈ ಸಂದರ್ಭದಲ್ಲಿ ಗುಲಾಬಿ ಟಾಕೀಸ್ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಿರ್ಮಾಪಕ ಬಸಂತಕುಮಾರ್ ಪಾಟೀಲ್, ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎನ್. ಭೃಂಗೇಶ್ ಸಹ ಉಪಸ್ಥಿತರಿದ್ದರು.

ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳೆಂದರೆ, ಅವರದೇ ಆದ ನಿರೂಪಣಾ ಶೈಲಿ, ನವಿರಾದ ಚಿತ್ರಕತೆ, ಸಹಜ ಸಂಭಾಷಣೆ ಕತೆಗೊಂದು ಸುವರ್ಣ ಚೌಕಟ್ಟು ಇರುತ್ತದೆ. ಕಲಾತ್ಮಕತೆಯ ಸೊಗಡು, ಮಣ್ಣಿನ ವಾಸನೆಯಿರುತ್ತದೆ. ಕೊನೆಗೊಂದು ಸಂದೇಶದ ಜತೆಗೆ ಬಿಡಿಸಲಾಗದ ಬದುಕಿನ ಸತ್ಯ ದರ್ಶನ. ಇವೆಲ್ಲವೂ ತೇರಹಳ್ಳಿಯ ಜನರಿಗೆ ಲಭ್ಯವಾದವು.

ಚಿತ್ರ ವಿಮರ್ಶೆ: ಕಾಸರವಳ್ಳಿಯ ಕಲಾತ್ಮಕತೆಯ ಗುಲಾಬಿ
ಗುಲಾಬಿ ಟಾಕೀಸ್ ಶ್ರೇಷ್ಠ ಚಿತ್ರ; ಪುನೀತ್ ಶ್ರೇಷ್ಠ ನಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada