»   »  ಗಜ ನಿರ್ದೇಶಕರಿಂದ ಯೋಗೀಶ್ ಗೆ ಪ್ರೇಮಪಾಠ

ಗಜ ನಿರ್ದೇಶಕರಿಂದ ಯೋಗೀಶ್ ಗೆ ಪ್ರೇಮಪಾಠ

Subscribe to Filmibeat Kannada
Yogish
ಸದ್ದಿಲ್ಲದೆ ಆರಂಭವಾದ ಚಿತ್ರ ಪ್ರೀತ್ಸೆ ಪ್ರೀತೆ'. ಬೆಂಗಳೂರು ಸೇರಿದಂತೆ ವಿವಿಧ ರಮ್ಯ ತಾಣಗಳಲ್ಲಿ ಚಿತ್ರಕ್ಕೆ ಚಿತ್ರೀಕರಣ ನಡೆಸಿರುವ ನಿರ್ದೇಶಕ ಮಾದೇಶ್, ಕವಿರಾಜ್ ರಚಿಸಿರುವ ಸುಂದರ ಸುಂದರ ಚಂದಿರ ನೀ ಸುಂದರ ಸಾವಿರ ಸಾವಿರ ಸ್ವರ್ಗವು ನೀ ಸುಂದರ' ಎಂಬ ಗೀತೆಯನ್ನು ಚಿತ್ರೀಕರಿಸಿಕೊಳ್ಳುವುದ್ದರ ಮೂಲಕ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳ್ಳಿಸಿದ್ದಾರೆ. ನಾಯಕ ಯೋಗೀಶ್ ಹಾಗೂ ಪ್ರಜ್ಞಾ ಅಭಿನಯಿಸಿದ್ದ ಈ ಗೀತೆಗೆ ಇಮ್ರಾನ್ ನೃತ್ಯ ಸಂಯೋಜಿಸಿದ್ದಾರೆ.

ಮೋಹನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೋಹನ್ ಅರ್ಪಿಸಿ, ಕೃಷ್ಣಯ್ಯ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಮಾದೇಶ್ ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಿಂದೆ ಗಜ' ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕರಿಗೆ ಇದು ದ್ವಿತೀಯ ಚಿತ್ರ. ಈ ಚಿತ್ರ ಕೂಡ ಉತ್ತಮ ಕಥೆಯಿಂದ ಕೂಡಿದ್ದು ಚಿತ್ರರಸಿಕರಿಗೆ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ಮಾದೇಶ್. ಚಿತ್ರೀಕರಣ ಪೂರ್ಣವಾಗಿರುವ ಚಿತ್ರಕ್ಕೆ ಸದ್ಯದಲ್ಲೇ ಮಾತುಗಳ ಜೋಡಣೆ ಪ್ರಕ್ರಿಯೆ ಆರಂಭಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ

ಅನುಪ್ ಸೀಳಿನ್ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ, ತ್ರಿಭುವನ್, ಇಮ್ರಾನ್ ನೃತ್ಯ, ತಿರುಪತಿ ರೆಡ್ಡಿ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಸುರೇಶ್ ಗೋಸ್ವಾಮಿ ಕಥೆ-ಸಹನಿರ್ದೇಶನ ಹಾಗೂ ಚಂದ್ರಪ್ಪನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಉದಯ ತಾರಾ, ಪ್ರಜ್ಞಾ, ಜೈಜಗದೀಶ್, ಸಂಗೀತಾ, ರಮೇಶ್ ಭಟ್, ಪಿ.ಎನ್.ಸತ್ಯ ಮುಂತಾದವರಿದ್ದಾರೆ.

ಹಾಡಿನ ಸಂಭ್ರಮದಲ್ಲಿ ಯೋಗೀಶ್ ಪ್ರೀತ್ಸೆ ಪ್ರೀತ್ಸೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada