For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದ ಮುಂದಾಳತ್ವ ಸಾಧ್ಯವಿಲ್ಲ ಎಂದ ಅಂಬರೀಷ್

  |
  ಡಾ. ರಾಜ್ ನಿಧನದ ನಂತರ ಕನ್ನಡ ಚಿತ್ರರಂಗಕ್ಕೆ ಸೂಕ್ತ ನಾಯಕರೇ ಇಲ್ಲದಂತಾಗಿದೆ. ಡಾ. ರಾಜ್ ಕುಮಾರ್ ಗೆ ಆ ಪಟ್ಟ ಅನಾಯಾಸವಾಗಿ ಒಲಿದಿತ್ತು. ಅವರ ನಿಧನದ ನಂತರ ಸಹಜವಾಗಿ ಅದು ವಿಷ್ಣು ಮಡಿಲಿಗೆ ಬಿತ್ತು. ಆದರೆ ಡಾ. ವಿಷ್ಣುವರ್ಧನ್ ಆ ಕಡೆ ನೋಡಲೂ ಮನಸ್ಸು ಮಾಡಿರಲಿಲ್ಲ. ಅವರು ಮೇರು ವ್ಯಕ್ತಿತ್ವ ಹೊಂದಿದ್ದರೂ ನಾಯಕತ್ವ ವಹಿಸಲು ಒಪ್ಪಿರಲಿಲ್ಲ.

  ವಿಷ್ಣು ಕಾಲವಶವಾದ ಬಳಿಕ ಅದು ಹಿರಿಯ ನಟ ಅಂಬರೀಷ್ ಕೈಗೆ ಹಸ್ತಾಂತರ ಆಯ್ತು. ಆದರೆ ಅದು ಅಧಿಕೃತವಾಗಿ ಅಲ್ಲ. ಚಿತ್ರರಂಗದಲ್ಲಿ ವಾದ-ವಿವಾದಗಳು ಏನೇ ಆಗಲೀ, ಎಲ್ಲೇ ವೈಮನಸ್ಯ ತಲೆದೋರಲಿ, ಅಂಬರೀಷ್ ಅದನ್ನು ಬಗೆಹರಸಿ ಭಿನ್ನಾಭಿಪ್ರಾಯ ತೊಲಗಿಸಿ ಎಲ್ಲರೂ ಒಪ್ಪತಕ್ಕ ನ್ಯಾಯವೊಂದನ್ನು ನೀಡಿ ಸದ್ದಡಗಿಸಿದ ಉದಾಹರಣೆ ಸಾಕಷ್ಟಿದೆ.

  ಆದರೆ ಈ ವಿಷಯವಾಗಿ ಅಂಬರೀಷ್ ಅವರನ್ನು ಅಧಿಕೃತವಾಗಿ ಕೇಳಿದಾಗ "ವಯಸ್ಸು ಹೆಚ್ಚಾಗುತ್ತಿರುವ ಕಾರಣದಿಂದ, ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನೇ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅಚ್ಚರಿ ಮೂಡಿಸಿದ್ದಾರೆ.

  ಸಮಯ ಬಂದಾಗ 'ಕಲಿಯುಗ ಕರ್ಣ' ಖ್ಯಾತಿಯ ಅಂಬಿ ಚಿತ್ರರಂಗದ ಸೇವೆ ಮಾಡಿದ್ದಾರೆ. ಜಗಳ, ವೈಮನಸ್ಯಗಳನ್ನು ಬಗೆಹರಿಸಿ ಆಶೀರ್ವದಿಸಿದ್ದಾರೆ. ಆದರೆ ಅಧಿಕೃತವಾಗಿ ಆ ಜವಾಬ್ಧಾರಿ ತೆಗೆದುಕೊಳ್ಳುವ ಮನಸ್ಥಿತಿ ಅವರಿಗಿಲ್ಲ ಎಂಬುದು ಅವರ ಮೇಲಿನ ಮಾತಿನಿಂದ ಸ್ಪಷ್ಟವಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Senior Kannada actor Ambareesh rejected to take leadership of Kannada Film-land. He told because of more age he can't take this responsibility. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X