»   » ಚಿತ್ರ ನಿರ್ಮಾಣಕ್ಕೆ ಮುಂದಾದ ನಟಿ ರಮ್ಯಾ

ಚಿತ್ರ ನಿರ್ಮಾಣಕ್ಕೆ ಮುಂದಾದ ನಟಿ ರಮ್ಯಾ

Posted By:
Subscribe to Filmibeat Kannada

ಚಿತ್ರ ನಟಿ ರಮ್ಯಾ ಚಿತ್ರವೊಂದನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ. ಅಂದುಕೊಂಡಂತೆ ಎಲ್ಲಾ ಸುಸೂತ್ರವಾಗಿ ನಡೆದರೆ ಇದೇ ವರ್ಷದಲ್ಲೇ ಚಿತ್ರವೊಂದರ ನಿರ್ಮಾಪಕಿಯಾಗಿ ರಮ್ಯಾ ಬಡ್ತಿ ಪಡೆಯಲಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ರಮ್ಯಾ ಅವರು ಅಭಿನಯವನ್ನೂ ಮುಂದುವರಿಸಲಿದ್ದಾರೆ.

ಈಗಾಗಲೇ ನಿರ್ದೇಶಕ ಡಿಕೆ ಪ್ರಕಾಶ್ ಅವರಿಂದ ಕತೆಯನ್ನೂ ಕೇಳಿದ್ದಾಗಿ ರಮ್ಯಾ ತಿಳಿಸಿದ್ದಾರೆ. 2009ರಲ್ಲಿ ರಮ್ಯಾ ಅಭಿನಯದ ಒಂದೇ ಒಂದು ಚಿತ್ರವೂ ಬಿಡುಗಡೆ ಭಾಗ್ಯ ಕಂಡಿರಲಿಲ್ಲ. 2010ರ ಮೊದಲ ಕಾಣಿಕೆಯಾಗಿ 'ಜಸ್ಟ್ ಮಾತ್ ಮಾತಲ್ಲಿ' ತೆರೆಕಾಣುತ್ತಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

'ಮುಸ್ಸಂಜೆ ಮಾತು' ಚಿತ್ರದ ನಂತರ ರಮ್ಯಾ ಅವರ ಹಲವಾರು ಚಿತ್ರಗಳು ಒಂದರ ಹಿಂದೊಂದು ಸೆಟ್ಟೇರಿದವು. ಜೊತೆಗಾರ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರಗಳು 2009ರಲ್ಲೇ ಬಿಡುಗಡೆಯಾಗಬೇಕಿದ್ದವು. ಆದರೆ ಹಣಕಾಸು ಮುಗ್ಗಟ್ಟಿನ ಕಾರಣ ಅವು ತೆರೆಕಾಣಲಿಲ್ಲ.

ಬರೋಬ್ಬರಿ 15 ತಿಂಗಳ ನಂತರ ರಮ್ಯಾ ಅಭಿನಯದ 'ಜಸ್ಟ್ ಮಾತ್ ಮಾತಲ್ಲಿ' ಬಿಡುಗಡೆಯಾಗಿದೆ. ರಮ್ಯಾ ಅವರ ವೃತ್ತಿ ಜೀವನದಲ್ಲಿ ಇದೊಂದು ಕೆಟ್ಟ ಕನಸು. ಹಾಗಾಗಿ ಇದೀಗ ತಾವೇ ಚಿತ್ರ ನಿರ್ಮಾಣ ಮಾಡಿದರೆ ಹೇಗೆ? ಎಂಬ ಯೋಜನೆ, ಯೋಜನೆಯಲ್ಲಿ ರಮ್ಯಾ ಮುಳುಗಿದ್ದಾರೆ.

ಸದ್ಯಕ್ಕೆ ರಮ್ಯಾ ಉತ್ತಮ ಚಿತ್ರಕತೆಯ ಹುಡುಕಾಟದಲ್ಲಿದ್ದು ಚಿತ್ರ ನಿರ್ಮಾಣದ ಬಗ್ಗೆ ನನಗೂ ಅಲ್ಪ ಸ್ವಲ್ಪ ಗೊತ್ತು ಎನ್ನುತ್ತಾರೆ. ರಮ್ಯಾ ತಮ್ಮ ಚೊಚ್ಚಲ ನಿರ್ಮಾಣದಲ್ಲಿ ಕಲಾತ್ಮಕ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಈ ವರ್ಷವಾದರೂ ರಮ್ಯಾ ವಿವಾದಗಳಿಂದ ದೂರವಾಗಿ ನಿರ್ಮಾಪಕಿಯಾಗಿ ಸುದ್ದಿ ಮಾಡಲಿ ಎಂದು ಆಶಿಸೋಣ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada