For Quick Alerts
  ALLOW NOTIFICATIONS  
  For Daily Alerts

  ಕಲಾ ತಪಸ್ವಿ ರಾಜೇಶ್‌ಗೆ ಕನ್ನಡ ವಿವಿ ಗೌರವ ಡಾಕ್ಟರೇಟ್

  By Rajendra
  |
  ಕನ್ನಡ ಚಿತ್ರರಂಗದ ಹಿರಿಯ ನಟ, 'ಕಲಾ ತಪಸ್ವಿ' ರಾಜೇಶ್ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವವಿದ್ಯಾಲಯದ 62ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

  ಜನವರಿಯಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ನಟ ರಾಜೇಶ್ ತಮ್ಮದೇ ಆದಂತಹ ವಿಲಕ್ಷಣ ಪಾತ್ರಗಳಿಗೆ ಹೆಸರಾಗಿದ್ದರು. ಇದುವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ರಾಜೇಶ್ ಪೋಷಿಸಿದ್ದಾರೆ.

  ರಾಜೇಶ್ ತಮ್ಮ ಆತ್ಮಕತೆಗೆ 'ಕಲಾ ತಪಸ್ವಿ ರಾಜೇಶ್ ಆತ್ಮಕಥೆ' ಎಂದು ಹೆಸರಿಟ್ಟಿದ್ದಾರೆ. ಹುಣಸೂರು ಕೃಷ್ಣಮೂರ್ತಿ ಅವರು ರಾಜೇಶ್ ಅವರನ್ನು 'ವೀರ ಸಂಕಲ್ಪ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಪರಿಚಯಿಸಿದರು. ಅಭಿನಯದ ಜೊತೆಗೆ ಸುಶ್ರಾವ್ಯವಾಗಿ ರಾಜೇಶ್ ಹಾಡಬಲ್ಲರು. ಉದಯ ಕುಮಾರ್, ರಾಜ್‌ಕುಮಾರ್ ಮತ್ತು ಕಲ್ಯಾಣ್ ಕುಮಾರ್ ತ್ರಯರಿಗೆ ರಾಜೇಶ್ ಚಿತ್ರಗಳು ಪ್ರಬಲ ಸ್ಪರ್ಧೆ ನೀಡಿತ್ತಿದ್ದದ್ದು ವಿಶೇಷ.

  1968ರಲ್ಲಿ ಸಿ ವಿ ಶಿವಶಂಕರ್ ನಿರ್ದೇಶನದಲ್ಲಿ ಬಂದಂತಹ 'ನಮ್ಮ ಊರು' ಚಿತ್ರಕ್ಕೆ ಅಂದಿನ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿದ್ದರು. ಬೆಳುವಲದ ಮಡಿಲಲ್ಲಿ, ಕಲಿಯುಗ, ಪಿತಾಮಹ, ಸತ್ಯನಾರಾಯಣ ಪೂಜಾ ಫಲ, ಕರ್ಣ ಚಿತ್ರಗಳು ರಾಜೇಶ್ ಅವರಿಗೆ ಹೆಸರು ತಂದಂತಹ ಚಿತ್ರಗಳು. (ಒನ್‌ಇಂಡಿಯಾ ಕನ್ನಡ)

  English summary
  popular hero of Kannada films in the yesteryears Rajesh, Known as ‘Kala Tapswi’ Rajesh would be awarded a doctorate at the 62nd convocation of Kannada University, Hampi. The ceremony will take place this month. ಕಲಾ ತಪಸ್ವಿ ರಾಜೇಶ್‌ಗೆ ಕನ್ನಡ ವಿವಿ ಗೌರವ ಡಾಕ್ಟರೇಟ್

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X