»   »  ಕೃಷ್ಣನ್ ಲವ್ ಸ್ಟೋರಿ, ಫುಲ್ ಫೀಲಿಂಗ್ ಮಗಾ!

ಕೃಷ್ಣನ್ ಲವ್ ಸ್ಟೋರಿ, ಫುಲ್ ಫೀಲಿಂಗ್ ಮಗಾ!

Subscribe to Filmibeat Kannada

'ಮೊಗ್ಗಿನಮನಸ್ಸು' ಚಿತ್ರ ಐದು ಫಿಲಂಫೇರ್ ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದಾರೆ ನಿರ್ದೇಶಕ ಶಶಾಂಕ್. ಈ ಖುಷಿಯಲ್ಲೇ ಸದ್ದಿಲ್ಲದೇ ಅಜಯ್ ನಾಯಕನಾಗಿ ಹಾಕಿಕೊಂಡು 'ಕೃಷ್ಣನ್ ಲವ್ ಸ್ಟೋರಿ' ಎನ್ನುವ ಚಿತ್ರವನ್ನು ನಿರ್ದೇಶಿಸುವ ಸಿದ್ಧತೆಯಲ್ಲಿದ್ದಾರೆ. ಚಿತ್ರಕ್ಕೆ 'ಫುಲ್ ಫೀಲಿಂಗ್ ಮಗಾ' ಎನ್ನುವ ಅಡಿಬರಹವನ್ನೂ ನೀಡಿದ್ದಾರೆ. ಉದಯ್ ಮೆಹ್ತಾ ಮತ್ತು ಮೋಹನ್ ನಾಯಕ್ ಈ ಚಿತ್ರದ ನಿರ್ಮಾಪಕರು.

ಚಿತ್ರದ ನಾಯಕಿ ಆಯ್ಕೆಯನ್ನು ಅಂತಿಮಗೊಳಿಸಿದ ನಂತರ ಸೆಪ್ಟೆಂಬರ್ ತಿಂಗಳಿಂದ ಚಿತ್ರ ಸೆಟ್ಟೇರಲಿದೆ. ಏತನ್ಮಧ್ಯೆ ತಾಜ್ ಮಹಲ್ ಗೆಲುವಿನ ಬಳಿಕಅಜಯ್ ಎರಡನೇ ಇನ್ನಿಂಗ್ಸ್ ಗೆ ಸಿದ್ಧವಾಗಿದ್ದಾರೆ. ಅಜಯ್ ಅಭಿನಯದ 'ಪ್ರೇಮ್ ಕಹಾನಿ' ಆಗಸ್ಟ್ 14ರಂದು ತೆರೆಕಾಣಲಿದೆ. ಆರ್ ಚಂದ್ರು ನಿರ್ದೇಶನದ ಚಿತ್ರವಾದ ಕಾರಣ ' ಪ್ರೇಮ್ ಕಹಾನಿ' ಬಗ್ಗೆ ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ.

''ಮೊಗ್ಗಿನ ಮನಸು ಚಿತ್ರಕ್ಕೆ ಬಾಕ್ಸಾಫೀಸಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಕಾಲೇಜು ಹುಡುಗಿಯರನ್ನು ಮಾತ್ರ ಸೆಳೆದಿತ್ತು. ಸಾಮಾನ್ಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.ಈ ಕೊರತೆಯನ್ನ್ನು ಫಿಲಂಫೇರ್ ಪ್ರಶಸ್ತಿ 'ಮೊಗ್ಗಿನ ಮನಸಿ'ನಲ್ಲಿ ತುಂಬಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ 'ಕೃಷ್ಣನ್ ಲವ್ ಸ್ಟೋರಿ' ಎಂದು ಕಮರ್ಷಿಯಲ್ ಹೆಸರಿಟ್ಟಿದ್ದೇನೆ'' ಎನ್ನುತ್ತಾರೆ ಶಶಾಂಕ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada