For Quick Alerts
  ALLOW NOTIFICATIONS  
  For Daily Alerts

  ಪುನೀತ್ ಹುಡುಗರು ಚಿತ್ರಕ್ಕೆ ಸೂಪರ್ ರೆಸ್ಪಾನ್ಸ್

  By Rajendra
  |

  ಇಂದು ಶುಭ ಗುರುವಾರ (ಮೇ.5) ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಹುಡುಗರು ಚಿತ್ರ ರಾಜ್ಯದಾದ್ಯಂತ ತೆರೆಕಂಡಿದೆ. ಪ್ರೇಕ್ಷರಿಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ಹುಡುಗರು ರೀಲ್‌ಗೆ ಪೂಜೆ ಮಾಡಿ ಚಿತ್ರ ಪ್ರದರ್ಶವನ್ನು ಮಾಡಿದ್ದು ವಿಶೇಷವಾಗಿತ್ತು.

  ಪುನೀತ್ ಅಭಿನಯ ಸೂಪರ್ ಎಂದ ಪ್ರೇಕ್ಷಕರು. ಲೂಸ್ ಮಾದನ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಪಂಡಿತ್ ಅಭಿನಯ ಕೂಡ ಚೆನ್ನಾಗಿದೆ ಎಂಬ ಮಾತುಗಳು ಕೇಳಿಬಂದವು. ಕೆಲವರು 100 ಡೇಸ್ ಗ್ಯಾರಂಟಿ ಎಂದಿದ್ದಾರೆ. ಮೊದಲ ದಿನವೇ ರು.500ಕ್ಕೆ ಬ್ಲಾಕ್‌ನಲ್ಲಿ ಟಿಕೆಟ್ ಸೇಲ್ ಆಗಿದೆ. ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಚಿತ್ರ. ಚಿತ್ರದಲ್ಲಿ ಮೆಸೇಜ್ ಇದೆ. ಫ್ರೆಂಡಿಶಿಫ್ ಲೆವೆಲ್ ಏನು ಎಂಬುದನ್ನು ತೋರಿಸಲಾಗಿದೆ ಎಂದಿದ್ದಾರೆ ಕೆಲವರು.

  ರಾಘವೇಂದ್ರ ರಾಜ್ ಹರ್ಷ: ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು ಬೆಂಗಳೂರು ಸಂತೋಷ್ ಚಿತ್ರಮಂದಿರದಲ್ಲಿ ನೋಡಿದ ರಾಘವೇಂದ್ರ ರಾಜ್ ಕುಮಾರ್, ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಪುನೀತ್ ಚಿತ್ರ ಎಂದರೆ, ಚಪ್ಪಾಳೆ, ಶಿಳ್ಳೆಗಳ ಮೂಲಕ ಸ್ವಾಗತ ಸಿಗುತ್ತದೆ. ಆದರೆ ಹುಡುಗರು ಚಿತ್ರಕ್ಕೆ ಮಾತ್ರ ಫುಲ್ ಸೈಲೆಂಟ್. ಚಿತ್ರ ಅಷ್ಟು ಅಚ್ಚುಕಟ್ಟಾಗಿ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು. ಹುಡುಗರು ಪ್ರೊಮೋ ನೋಡಿ.

  English summary
  Great opening for Puneet Rajkumar film Hudugaru in all over Karnataka on 5th May. At very first day the movie gets superb response from the audience. Yogish, Srinagara Kitty, Rangayana Raghu, Sudha Belawadi, Gururaj Hoskote and many more artists are in the cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X