»   »  ಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ

ಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ

Posted By:
Subscribe to Filmibeat Kannada
Raaj movie still
ಹಂದಿ ಜ್ವರ(ಎಚ್ 1 ಎನ್ 1)ಕ್ಕೆ ಹೆದರಿಕೊಂಡ 'ರಾಜ್' ಚಿತ್ರತಂಡ ಕೆನಡಾ ಪ್ರವಾಸವನ್ನು ರದ್ದು ಮಾಡಿಕೊಂಡಿದೆ. ಈ ಕುರಿತು ವಿವರ ನೀಡಿರುವ ನಿರ್ದೇಶಕ ಪ್ರೇಮ್, ರಾಜ್ ಚಿತ್ರಕ್ಕಾಗಿ ಕೆನಡಾದಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಬೇಕಿತ್ತು. ಇದುವರೆಗೂ ಯಾರೂ ಸೆರೆಹಿಡಿಯದ ಕೆನಡಾದ ರಮಣೀಯ ದೃಶ್ಯಗಳನ್ನು ನಮ್ಮ ಚಿತ್ರದಲ್ಲಿ ತೋರಿಸಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕೆನಡಾದಲ್ಲಿ ಹಂದಿಜ್ವರದ ಪ್ರಭಾವ ಜೋರಾಗಿರುವ ಕಾರಣ ಸದ್ಯಕ್ಕೆ ಆ ಆಲೋಚನೆಯನ್ನು ಬದಿಗಿಟ್ಟಿದ್ದೇವೆ ಎಂದು ಹೇಳಿದರು.

ಮೇ ಎರಡನೇ ವಾರದಲ್ಲಿ ಇಡೀ ಚಿತ್ರತಂಡ ಕೆನಾಡಾಗೆ ಹಾರುವ ಸಿದ್ಧತೆಯಲ್ಲಿತ್ತು. ಈ ಎರಡು ಹಾಡುಗಳನ್ನು ಹೊರತು ಪಡಿಸಿದರೆ ರಾಜ್ ಚಿತ್ರೀಕರಣ ಬಹುತೇಕ ಮುಗಿದಿದೆ. ಉಳಿದ ಎರಡು ಹಾಡುಗಳನ್ನು ಸ್ವದೇಶದಲ್ಲೇ ಚಿತ್ರೀಕರಿಸಲಿ ಪ್ರೇಮ್ ನಿರ್ಧರಿಸಿದ್ದಾರೆ. ಎಲ್ಲಿ ಚಿತ್ರೀಕರಿಸಬೇಕು ಎಂಬುದನ್ನು ಎರಡು ಮೂರು ದಿನಗಳಲ್ಲಿ ನಿರ್ಧರಿಸುವುದಾಗಿ ಪ್ರೇಮ್ ತಿಳಿಸಿದ್ದಾರೆ.

ರಾಜ್ ಚಿತ್ರದ ಬಜೆಟ್ ಸರಿಸುಮಾರು ರು.10 ಕೋಟಿಯಷ್ಟಾಗಿದ್ದು ಕನ್ನಡದಲ್ಲಿ ಅತ್ಯಂತ ದುಬಾರಿ ಚಿತ್ರ ಎನ್ನಿಸಿಕೊಂಡಿದೆ. ಕಳೆದ ವರ್ಷ ಚಿತ್ರೀಕರಣ ಆರಂಭಿಸಿದ ರಾಜ್ ಚಿತ್ರ 2009ರ ಏಪ್ರಿಲ್ 24ರ ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಾಜ್ ಬಿಡುಗಡೆ ದಿನಾಂಕ ಜೂನ್ ತಿಂಗಳಿಗೆ ಮುಂದೂಡಲ್ಪಟ್ಟಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ
ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ
ರಾಜ್ ಅಭಿಮಾನಿಯಾಗಿದ್ದ ಫಿರೋಜ್ ಖಾನ್
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ಜೂನ್ ಮೊದಲ ವಾರದಲ್ಲಿ 'ರಾಜ್' ದಾಂಗುಡಿ!
ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada