»   »  ರಮೇಶ್ ‘ಕ್ರೇಜಿ ಕುಟುಂಬ’ಕ್ಕೆ ಚಾಲನೆ

ರಮೇಶ್ ‘ಕ್ರೇಜಿ ಕುಟುಂಬ’ಕ್ಕೆ ಚಾಲನೆ

Subscribe to Filmibeat Kannada

ನಾಯಕ ರಮೇಶ್ ಅಭಿನಯದ ಚಿತ್ರವೆಂದ ಮೇಲೆ ಮನರಂಜನೆಗೆ ಬರವಿಲ್ಲ. ತಮ್ಮ ಅಮೋಘ ಅಭಿನಯದಿಂದ ಎಲ್ಲಾ ವರ್ಗದ ಜನರ ಮನಸೂರೆಗೊಂಡಿರುವ ಅಪರೂಪದ ಕಲಾವಿದ ಅವರು. ಪ್ರಸ್ತುತ ಇವರ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಕ್ರೇಜಿ ಕುಟುಂಬ" ಎಂಬ ಚಿತ್ರ ಇದೇ ತಿಂಗಳಲ್ಲಿ ಆರಂಭವಾಗಲಿದೆ.

ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲೀನಾಜೋಶಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಬಿ.ರಾಮಮೂರ್ತಿ ಅವರು ನಿರ್ದೇಶಿಸುತ್ತಿದ್ದಾರೆ. ಮರಾಠಿ ಮೂಲದ 'ದೇ ದಕ್ಕ" ಚಿತ್ರ 'ಕ್ರೇಜಿ ಕುಟುಂಬ"ಕ್ಕೆ ಸ್ಪೂರ್ತಿ. ಪರಿಶುದ್ದ ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ರಮೇಶ್ ನಾಯಕರಾಗಿದ್ದು, ಅವರೊಂದಿಗೆ ಅನಂತನಾಗ್, ಎಂ.ಎಸ್.ಉಮೇಶ್, ರಜನಿಕಾಂತ್, ವಿನಯ್‌ರಾಂಪ್ರಸಾದ್, ಸೋಮಶೇಖರ್, ಚಿಕ್ಕಮಗಳೂರು ಮಧು ಮುಂತಾದವರು ನಟಿಸುತ್ತಿದ್ದಾರೆ.

ರಿಕಿಕೇಜ್ ಸಂಗೀತ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನರಹಳ್ಳಿ ಜ್ಞಾನೇಶ್ ಸಂಕಲನ, ಮುರಳಿ-ರಾಮು ನೃತ್ಯ, ಶ್ರೀನಿವಾಸ್ ಕಲೆ, ಪ್ರಸಾದ್ ಸಹ ನಿರ್ದೇಶನ ಹಾಗೂ ಗಂಡಸಿರಾಜು ನಿರ್ಮಾಣ ನಿರ್ವಹಣೆ 'ಕ್ರೇಜಿ ಕುಟುಂಬ" ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada