»   » ರೀಮೇಕ್ ಅಬ್ಬರದಲ್ಲಿ ಕೊಚ್ಚಿ ಹೋದ 2009

ರೀಮೇಕ್ ಅಬ್ಬರದಲ್ಲಿ ಕೊಚ್ಚಿ ಹೋದ 2009

Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಪಾಲಿಗೆ 2009 ನೀರಸ ಫಲಿತಾಂಶ ನೀಡಿದೆ. ಸಂಖ್ಯೆಯ ದೃಷ್ಟಿಯಲ್ಲಿ ರಿಮೇಕ್ ಚಿತ್ರಗಳು ಅಬ್ಬರಿಸಿದವೇ ಹೊರತು ಗುಣಮಟ್ಟದಲ್ಲಿ ಮಾತ್ರ ಸೊನ್ನೆ. ತೆರೆಕಂಡ 120 ಚಿತ್ರಗಳಲ್ಲಿ ಶೇ.25ರಷ್ಟು ರೀಮೇಕ್ ಚಿತ್ರಗಳು ಎಂಬುದು ಗಮನಾರ್ಹ ಅಂಶ. ಶೇಕಡಾ ನೂರರಷ್ಟು ಮನರಂಜನಾ ತೆರಿಗೆ ಉಳಿಸಿದ್ದಷ್ಟೇ ನಿರ್ಮಾಪಕರ ಪಾಲಿಗೆ ಒದಗಿದ ಲಾಭ.

ರಿಮೇಕ್ ಚಿತ್ರಗಳಾದ 'ಸವಾರಿ', 'ಈ ಶತಮಾನದ ವೀರ ಮದಕರಿ', 'ಜಾಜಿ ಮಲ್ಲಿಗೆ' ಚಿತ್ರಗಳು ಮಾತ್ರ ಬಾಕ್ಸಾಫೀಸರಲ್ಲಿ ಜಯಭೇರಿ ಬಾರಿಸಿವೆ. ಉಳಿದಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಚಿತ್ರಗಳು. ಅನು, ಜಾಲಿ ಡೇಸ್, ತಬ್ಬಲಿ, ರಾಜ್ ಕುಮಾರಿ,ಅಂಜದಿರು, ಗೌತಮ್, ಚಿಕ್ಕಪೇಟೆ ಸಾಚಾಗಳು, ದುಬೈ ಬಾಬು, ರಜನಿ, ಯೋಧ, ಚೆಲ್ಲಿದರು ಸಂಪಿಗೆಯಾ, ವಾಯುಪುತ್ರ, ದೇವ್ರು, ಸೆಲ್ಯೂಟ್(ಅರೆ ರೀಮೇಕ್), ಬಳ್ಳಾರಿ ನಾಗ, ಗಿಲ್ಲಿ, ರಾವಣ ಮತ್ತು ಮಿ.ಪೈಂಟರ್ ಸೋಲಿನ ಕಹಿ ಉಂಡ ಚಿತ್ರಗಳು.

ರಿಮೇಕ್ ಚಿತ್ರ ನಿರ್ಮಾಪಕರಿಗೆ 2009ನೇ ವರ್ಷ ಒಳ್ಳೆಯ ಪಾಠ ಕಲಿಸಿದೆ. 2010ನೇ ವರ್ಷದಲ್ಲಾದರೂ ಈ ಬೆಳವಣಿಗೆ ಮರುಕಳಿಸದಿರಲಿ ಎಂದು ನಿರೀಕ್ಷಿಸೋಣ. ಸದಭಿರುಚಿಯ, ಉತ್ತಮ, ವಿಭಿನ್ನ ಚಿತ್ರಗಳು ಪ್ರೇಕ್ಷಕರ ಪಾಲಿಗೆ ಒದಗಿ ಬರಲಿ ಎಂದು ಆಶಿಸೋಣ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada